ಸಿಂದಗಿ: ಬಸವಣ್ಣನವರ ತತ್ವಾದರ್ಶಗಳು, ಮೌಲ್ಯಗಳು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಪ್ರಚಾರ್ಯ ಎಂ.ಎಸ್.ಹೈಯಾಳಕರ ಹೇಳಿದರು.
ಪಟ್ಟಣದ ಶ್ರೀಪದ್ಮರಾಜ ಮಹಿಳಾ ಪಪೂ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ವತಿಯಿಂದ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಆರ್ಥಿಕ ಸಾಮಾಜಿಕ ಕ್ರಾಂತಿಯಿಂದ ಬಸವಣ್ಣನವರು ಹೆಸರುವಾಸಿಯಾದರು. ಬಸವಣ್ಣ ಜನ್ಮವೆತ್ತುವ ಸಮಯದಲ್ಲಿ ಕ್ರಾಂತಿ ಮಾಡಿರುವುದು ಒಂದು ಇತಿಹಾಸ. ಬಸವ ಧರ್ಮ ಜಗತ್ತಿನ ಯಾವ ದೇಶದಲ್ಲಿಯೂ ದೊರೆಯುದಿಲ್ಲ. ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದೇ ಬಸವಣ್ಣ. ಮಕ್ಕಳು ವಚನಗಳನ್ನು ಪಠಣ ಮಾಡುವುದರ ಜೊತೆಗೆ ಸಾರಾಂಶವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸಮ ಸಂಸ್ಕೃತಿ ಸಮಾಜ ಲಿಂಗಾಯತ ಧರ್ಮ ಇದು ವಿಶ್ವಧರ್ಮವಾಗಬೇಕು. ಇದರ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದರು.
ಈ ವೇಳೆ ಉಪನ್ಯಾಸ ನೀಡಲು ಆಗಮಿಸಿದ ಎಚ್.ಜಿ.ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಹಾಕಿದವರು. ಜಾತ್ಯಾತೀತ, ವರ್ಗ ರಹಿತ ಸಮಾಜ ನಿರ್ಮಾಣ ಮಾಡಿ, ಸಾಮಾಜಿಕ ಕಾಂತ್ರಿಗೆ ನಾಂದಿ ಹಾಡಿದವರು. ಮಹಿಳೆಯರಿಗೆ ಸ್ವಾತಂತ್ರ್ಯವಿದೆ ಎಂದು ಇಡೀ ವಿಶ್ವಕ್ಕೆ ತಿಳಿಸಿ ಮಾದರಿಯಾಗಿದ್ದಾರೆ. ಇಂತಹ ಮಹಾನ್ ಚೇತನ, ವಿಶ್ವಜ್ಯೋತಿ, ನಮ್ಮ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದು ನಮಗೆ ಹೆಮ್ಮೆಯ ವಿಷಯ. ಅವರ ತತ್ವ ಸಿದ್ದಾಂತಗಳನ್ನು ಇಡೀ ರಾಷ್ಟ್ರದಾದ್ಯಂತ ಪಸರಿಸುವ ಕಾರ್ಯ ಇಂದಿನ ಪೀಳಿಗೆಯ ಜವಾಬ್ದಾರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ.ಶರಣಬಸವ ಜೋಗುರ, ಪ್ರಸನ್ನಕುಮಾರ ಜೋಗುರ, ದತ್ತಿ ದಾನಿಗಳಾದ ರಾಜಶೇಖರ ಶಹಾಪುರ, ಶಿವಪ್ಪ ಗವಸಾನಿ, ಸುನೀಲ ದೇವರಮನಿ, ಡಾ.ಸೀಮಾ ವಾರದ, ಪ್ರಾಚಾರ್ಯ ಎಸ್.ಎಂ.ಪೂಜಾರಿ, ಮಹಲಿನಮಠ, ಸಿದ್ದಲಿಂಗ ಕಿಣಗಿ, ಭೀಮಾಶಂಕರ ಅರಳಗುಂಡಗಿ, ಶಂಕರ್ ಕುಂಬಾರ, ಲಕ್ಷ್ಮೀ ಮಾರ್ಸನಳ್ಳಿ, ಸತೀಶ ಕಕ್ಕಸಗೇರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

