ಸಿಂದಗಿ: ಸಿಂದಗಿಯ ಮಾನವೀಯತೆಗೆ ಹೊಸ ಭಾಷೆ ಬರೆದ ಸಿಂದಗಿಯ ಸಿರಿ ಶಾಂತವೀರ ಪಟ್ಟಾಧ್ಯಕ್ಷರ ಬದುಕೇ ಒಂದು ಇತಿಹಾಸ ಎಂದು ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಊರಿನ ಹಿರಿಯಮಠದಲ್ಲಿ ಗುರುವಾರ ನಡೆದ ಲಿಂ.ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ೪೪ನೆಯ ಪುಣ್ಯ ಸ್ಮರಣೋತ್ಸವ ಮತ್ತು ಗದುಗಿನ ತೋಂಟದಾರ್ಯ ಮಠದ ಲಿಂ.ಡಾ.ಸಿದ್ದಲಿಂಗ ಶ್ರೀಗಳ ೬ನೆಯ ಗುರು ಸ್ಮರಣೆ ಕಾರ್ಯಕ್ರಮದಲ್ಲಿಂ ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ ಅವರ ಸಾಹಿತ್ಯದಲ್ಲಿ ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ.ಶರಣ್ ಚೌಧರಿ ಅವರ ಸಂಗೀತ ನಿರ್ದೇಶನದ ಹಾಗೂ ಪಂಡಿತ ರಾಘವೇಂದ್ರ ಜೋಷಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ’ಸಿಂದಗಿಯ ಶ್ರೀರಕ್ಷೆ’ ಎನ್ನುವ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ವೇಳೆ ಬೆಂಗಳೂರಿನ ಅಂತರಾಷ್ಟ್ರೀಯ ಹಿಂದುಸ್ತಾನಿ ಕಲಾವಿದ ಪಂ.ಶರಣ್ ಚೌಧರಿ, ತಬಲಾ ವಾದಕ ಪಂ.ರಾಘವೇಂದ್ರ ಜೋಷಿ, ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ, ಹಾಸ್ಯ ಕಲಾವಿದ ಪ್ರಶಾಂತ ಚೌಧರಿ, ಡಾ.ಪ್ರಕಾಶ ರಾಗರಂಜನಿ, ಪೂಜಾ ಹಿರೇಮಠ ಅವರಿಗೆ ಶ್ರೀಮಠದಿಂದ ಗೌರವಿಸಲಾಯಿತು.
ನಂತರ ರಾಗರಂಜನಿ ಸಂಗೀತ ಕೇಂದ್ರದ ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ವೇದಿಕೆ ಮೇಲೆ ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಸಂಶಿಯ ವಿರಕ್ತಮಠದ ಚೆನ್ನಬಸವ ದೇವರು ಉಪಸ್ಥಿತರಿದ್ದರು. ಸಂಗೀತಗಾರ ರೇಣುಕ ಗವಾಯಿಗಳು ಪ್ರಾರ್ಥಿಸಿದರು, ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು. ಗದಿಗಯ್ಯ ನಂದಿಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

