ಮೋರಟಗಿ: ಮಾನವ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ, ಎಷ್ಟು ಸದೃಡ ಮತ್ತು ಆರೋಗ್ಯವಾಗಿ ಬದುಕುತ್ತಾನೆ ಎನ್ನುವುದು ಮುಖ್ಯ. ಆರೋಗ್ಯ ಭಾಗ್ಯಕಿಂತ ಇನ್ನೊಂದು ಭಾಗ್ಯವಿಲ್ಲ, ಸುಖಿಕರ ಜೀವನಕ್ಕೆ ಅರೋಗ್ಯವೇ ಭಾಗ್ಯ ಎಂದು ಡಾ.ಮಂಜುನಾಥ್ ಟಿ.ಡಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜುವಾರಿ ಫರ್ಮ್ ಹಬ್ ಲಿಮಿಟೆಡ್ ಜೈಕಿಸಾನ್ ಜಂಕ್ಷನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅರೋಗ್ಯದಿಂದ ಜೀವನ ಕಳೆಯುವ ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಅನಾರೋಗ್ಯಕ್ಕೆ ತುತ್ತಾದರೆ ನೆಮ್ಮದಿಯ ಜೀವನ ಕಳೆಯಲು ಸಾಧ್ಯವಿಲ್ಲ. ಸಾರ್ವಜನಿಕರು ಆದಷ್ಟು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರವಿಡಬೇಕು. ತಮ್ಮೆಲ್ಲರ ಅರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವಾರು ಯೋಜನೆಗಳು ಉಚಿತವಾಗಿ ನೀಡುತ್ತಿದೆ. ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನುರಿತ ವೈದ್ಯರಿಂದ ರಕ್ತ, ಬಿಪಿ, ಶುಗರ್ ಹಾಗೂ ಕಣ್ಣಿನ ತಪಾಸಣೆಯನ್ನು ೨೦೦ಕ್ಕೂ ಅಧಿಕ ಜನರಿಗೆ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಉಪಾಧ್ಯಕ್ಷ ಇಸುಫ್ ಮುಲ್ಲಾ, ಡಾ.ಗಿರೀಶ ಪಾಟೀಲ್, ಕೆಡಿಪಿ ಸದಸ್ಯ ಎನ್.ಎನ್.ಪಾಟೀಲ್, ರೇವಣಸಿದ್ಧ ಮಸಳಿ, ಎಂ.ಟಿ.ಸಿಂಗೆ, ಜಿ.ಕೆ.ನೆಲ್ಲಗಿ, ಬಿ.ಟಿ.ಬೋನಾಳ, ಡಾ.ಶ್ವೇತಾ ಕೋರಿ, ನಸೀಮಾ ಬೇಗಂ, ಮೈನುದ್ದಿನ್ ಮನಿಯಾರ, ಶರಣು ಮಳಗಿ, ಮಹಾದೇವ ನಾಟೀಕಾರ, ಎಸ್.ಎನ್.ಹಿಟ್ಟಿನ ಸೇರಿದಂತೆ ಜುವಾರಿ ಫರ್ಮ್ ಹಬ್ ಲಿಮಿಟೆಡ್ ಜೈಕಿಸಾನ್ ಜಂಕ್ಷನ್ ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

