ಇಂಡಿ: ಮಹಾದೇವ ಬೈರಾಮಡಗಿ ಅವರು ಕೇವಲ ಶಿಕ್ಷಕರಾಗಿ ಸೇವೆ ಸಲ್ಲಿಸದೆ, ಇಡೀ ಮನುಕುಲದ ಬಗ್ಗೆ ಅತ್ಯಂತ ಕಾಳಜಿ ಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು.
ರವಿವಾರ ಪಟ್ಟಣದ ಎನ್ ಎ ಸಿ ಸಹಕಾರಿ ಸಂಘದ ಸಭಾಭವನದಲ್ಲಿ ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಹೃದಯ ಪೂರ್ವಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಅಕಾಲಿಕ ನಿಧನ ಸಮುದಾಯ, ಸಮಾಜಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಅವರು ಅತ್ಯಂತ ಸರಳ ಸಜ್ಜನಿಕೆ ನಿಸ್ವಾರ್ಥ ಸೇವೆ ಮಾಡುತ್ತಿದ್ದರು.
ನ್ಯಾಯವಾದಿ ಎಸ್.ಬಿ. ಕೆಂಬೋಗಿ, ಪತ್ರಕರ್ತ ಶಂಕರಲಿಂಗ ಜಮಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಹೊರ್ತಿ, ಡಾ. ಸುರೇಶ ವಿಜಯಪುರ, ಜಟ್ಟಿಂಗರಾಯ ತಳವಾರ, ಸೋಮು ಜಮಾದಾರ, ಶಿಕ್ಷಕ ಬಿ ಎನ್ ಜಮಾದಾರ, ಆರ್.ಜ. ಗಬ್ಬೂರ, ಆರ್ ಕೆ ವಾಲಿಕಾರ, ಈರಣ್ಣ ಜಮಾದಾರ, ಸುರೇಶ್ ಡೊಂಗ್ರೊಜ, ರವಿ ರಾಯಜಿ, ಎಸ್ ಐ ಕೋಳಿ, ಅರವಿಂದ ದೊಡಮನಿ, ವಿಶ್ವನಾಥ ಮಣಗಿರಿ, ಸುನೀಲ ವಾಲಿಕಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

