Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಈ ದೇಶದಲ್ಲಿ ಹುಟ್ಟಿದ ಮೇಲೆ ನಾವು ಈ ದೇಶವನ್ನು ನಾವು ಪ್ರೀತಿಸಬೇಕು. ಈ ದೇಶದ ಕಾನೂನನ್ನು ನಾವು ಗೌರವಿಸಬೇಕು. ಈ ದೇಶದ ಸಂವಿಧಾನವನ್ನು ನಾವು ಸ್ವೀಕರಿಸಬೇಕು. ಎಲ್ಲ ಸಮಾಜದವರ ಜೊತೆ ನಾವು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಇದನ್ನ ಪ್ರತಿಯೊಬ್ಬ ಮುಸ್ಲಿಂ ಅರಿತುಕೊಂಡು ಜಾಗೃತರಾಗಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಶೀರಅಹಮದ್ ಹೇಳಿದರು.ಪಟ್ಟಣದ ಮಳಿಗೆಯೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಸಂದರ್ಭಗಳಲ್ಲಿ ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಹಾಕಿ ಬೇರೆಯವರು ಅಧಿಕಾರದ ಗುರಿ ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡದೇ ದೇಶದ ಎಲ್ಲ ಸಮಾಜ ಬಾಂಧವರ ಜೊತೆ ಪ್ರೀತಿ, ವಿಶ್ವಾಸದಿಂದ ಸೌಹಾರ್ದಯುತವಾಗಿ ಜೀವನ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಈವರೆಗೆ ನಾವು ಸೌಹಾರ್ದಯುತವಾಗಿ ಬಂದರೂ ಕೆಲವು ರಾಜಕೀಯ ಹಿತಾಸಕ್ತಿಗಳು ನಮ್ಮ ಮೇಲೆ ಆಗಾಗ ಕೆಟ್ಟ ಪರಿಣಾಮಗಳನ್ನು ಬೀರುತ್ತಿರುವುದರಿಂದ ಪ್ರತಿಯೊಬ್ಬ ಮುಸ್ಲಿಂ ಸಮಾಜದ ಬಾಂಧವರು ನಮ್ಮ ಸಲಹೆಯ ಪಾಲನೆ ಮಾಡಬೇಕಾಗಿದೆ ಎಂದರು.ಇಲ್ಲಿಯವರೆಗೆ ನಮ್ಮನ್ನ ಆಳುವ ಸರ್ಕಾರಗಳು ಮುಸ್ಲೀಮರಿಂದ ಅಧಿಕಾರಕ್ಕೆ ಬರುತ್ತಿವೆ. ಆದರೆ…
ಇಂಡಿ: ಸತತವಾಗಿ ಬರಗಾಲ ನಿಮಿತ್ಯ ಇಂಡಿ, ಸಿಂದಗಿ ತಾಲೂಕಿನ ರೈತರ ಬದಕು ಬರಗೆಟ್ಟಿದೆ, ಕುಡಿಯಲು ನೀರಿಲ್ಲ ಹಾಗೂ ಕೃಷಿಗೂ ನೀರಿಲ್ಲದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನ – ಜಾನುವಾರು ಕುಡಿಯಲು ಕೂಡಲೇ ಈ ಭಾಗದ ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಈ ಭಾಗದ ರೈತರೊಂದಿಗೆ KBJNL ರಾಂಪುರ ಕಚೇರಿಗೆ ಮುತ್ತಿಗೆ ಹಾಕಬೇಕಾದಿತು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದಾರೆ.
ಚಡಚಣ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಮಿತಿಯ ಕಾರ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಚಡಚಣ ತಾಲೂಕು ಘಟಕದ ಸಮಿತಿಯನ್ನು ರಚಿಸಲಾಯಿತು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್ ಕಾಂಬಳೆ ತಿಳಿಸಿದ್ದಾರೆಗೌರವಾಧ್ಯಕ್ಷರಾಗಿ ಉಮರಾಣಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ಡೋಣೂರ, ಅಧ್ಯಕ್ಷರಾಗಿ ಹತ್ತಳ್ಳಿ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಪ್ರದೀಪ ಮಧಬಾವಿ, ಉಪಾಧ್ಯಕ್ಷರಾಗಿ ಶಿರನಾಳ ಸರ್ಕಾರಿ ಎಚ್.ಪಿ.ಎಸ್ ಶಾಲೆಯ ಶಿಕ್ಷಕರಾದ ಸುರೇಶ ಶಿವಶರಣ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಗಳು ವಿಜ್ಞಾನ ಶಿಕ್ಷಕರಾದ ರಾಜೇಶ ಬಳಿಗಾರ, ಸಹ ಕಾರ್ಯದರ್ಶಿಗಳು ದೈಹಿಕ ಶಿಕ್ಷಕರಾದ ಮಾಂತಕ್ಕ ರಾಂಪುರ, ಖಜಾಂಚಿ ವಿಜ್ಞಾನ ಶಿಕ್ಷಕರಾದ ಮೊಕಾಶಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪತ್ರಕರ್ತರಾದ ಶಿವಾನಂದ ಶಿವಶರಣ ಹಾಗೂ ಹಸಶ್ಯಾ ಮಕಾನದಾರ, ಶಿಕ್ಷಕರಾದ ಎಸ್ ಎಂ ಹದಿಮೂರ, ಮಾಳಪ್ಪ ವಾಗ್ಮೊರೆ, ರಾಮಚಂದ್ರ ಸುಣಗಾರ, ಜಿ ಎಸ್ ಜಂಗಮಶೆಟ್ಟಿ, ಆಸಿಫ್ ಚಟ್ಟರಕಿ, ಪಿ ಬಿ ಕುರ್ಲೆ, ಕುಮಾರಿ ಬಿ ಎಸ್ ಮದಭಾವಿ, ಎಂ ಜೆ ಚಿಂಚೋಳಿ, ಶ್ರೀಮತಿ ಎಂ ಎಸ್ ಬಿರಾದಾರ ಆಯ್ಕೆಯಾಗಿದ್ದಾರೆ…
3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚನೆ | ಮುಂದಿನ ವಿಚಾರಣೆ ಏಪ್ರಿಲ್ 9ಕ್ಕೆ ಮುಂದೂಡಿಕೆ ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಮಯಗಳ ಅನುಷ್ಠಾನಕ್ಕೆ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಸಿಎಎ ಜಾರಿಗೆ ತಡೆ ನೀಡುವ ಯಾವುದೇ ಮಧ್ಯಂತರ ಆದೇಶ ನೀಡಲು ಮಂಗಳವಾರ ನಿರಾಕರಿಸಿದೆ.2024ರ ಪೌರತ್ವ ತಿದ್ದುಪಡಿ ನಿಯಮಗಳ ಜಾರಿಯನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಸಮಂಜಸವಾದ ಸಮಯವನ್ನು ನೀಡಬೇಕು ಎಂದು ಒತ್ತಿಹೇಳಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 9 ಕ್ಕೆ ಮುಂದೂಡಿದೆ.ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಎಎ ಅನುಷ್ಠಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 20 ಅರ್ಜಿಗಳಿಗೆ ಉತ್ತರ ನೀಡಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಪೀಠಕ್ಕೆ ತಿಳಿಸಿದರು.ಪೌರತ್ವ ತಿದ್ದುಪಡಿ ಕಾಯ್ದೆ-2019ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡುವ…
ವಿಜಯಪುರ: ಮಹಾನಗರ ಪಾಲಿಕೆ ಆವರಣದಲ್ಲಿ ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಭಾರತೀಯ ದ್ರಾವಿಡ ಸೇನಾ, ವಿಜಯಪುರ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಭಾರತೀಯ ದ್ರಾವಿಡ ಸೇನಾದ ಗೌರವಾಧ್ಯಕ್ಷ ರಮೇಶ ಕವಲಗಿ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ರವರು ಇವರು ದೇಶಕ್ಕೆ ಸಂವಿಧಾನ ನೀಡಿ, ಇವರ ಸಂವಿಧಾನದಡಿಯಲ್ಲಿ ಪಾಲಿಕೆಯ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಅದೇ ತೆರನಾಗಿ ಅವರ ಗೌರವಾರ್ಥಕವಾಗಿ ಪಾಲಿಕೆ ಆವರಣದಲ್ಲಿ ಅಂಬೇಡ್ಕರವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಇದರಿಂದ ಭಾರತದ ಸಂವಿಧಾನಕ್ಕೆ ಸಲ್ಲಿಸುವ ಗೌರವ ಆಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಪ್ರಶಾಂತ ಹಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ನಾಗಮ್ಮ ಬ್ಯಾಕೋಡ, ವಿಜಯಪುರ ಜಿಲ್ಲಾಧ್ಯಕ್ಷ ಸೋಮು ಹಟ್ಟಿ, ಜಿಲ್ಲಾ ಕಾರ್ಯದರ್ಶಿ ಸಚೀನ ಬಜಂತ್ರಿ, ಮಾರುತಿ ಬೂದಿಹಾಳ, ಸಂತೋಷ ಠಕ್ಕೆ, ಶ್ರೀಧರ ಹಾಳಿಹಾಳ, ಪರಶುರಾಮ ಕೋಲಕಾರ, ಶ್ರೀಧರ ಬಬಲೇಶ್ವರ, ಎನ್. ಬಜರಂಗಿ, ಕಲ್ಮೇಶ ಶಾಪೇಟಿ, ಮಲ್ಲು ಜಾಲಗೇರಿ ಇನ್ನಿತರರು ಉಪಸ್ಥಿತರಿದ್ದರು.
ಇಂಡಿ: ಯುವಕನೋರ್ವ ವಿವಸ್ತ್ರವಾಗಿ ಮೊಬೈಲ್ ಟವರ್ ಏರಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಚಂದ್ರಶೇಖರ ಕಡಣಿ ಎಂಬುವನು ಪಟ್ಟಣದ ಬಸವೇಶ್ವರ ದಲ್ಲಿರುವ 250 ಫೀಟ್ ಎತ್ತರದ ಬಿಎಸ್ ಎನ್ ಎಲ್ ಟವರ್ ಬೆಳಿಗ್ಗೆ 4 ಘಂಟೆಗೆ ತುತ್ತತುದಿಯವರೆಗೆ ಏರಿದ್ದಾನೆ. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿದ್ದಾನೆ. ಯುವಕ ಟವರ್ ಮೇಲಿಂದ ಆಯತಪ್ಪಿ ಬಿದ್ದರೆ ಅನಾಹುತಕ್ಕೀಡುವ ಸಂಭವ ಇತ್ತು. ಅದಕ್ಕಾಗಿ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಪೊಲೀಸರು ಭೇಟಿ ನೀಡಿ, ಸತೀಶನನ್ನು ಮನವೋಲಿಸಿ ಕೆಳಗೆ ಇಳಿಸುವ ಕೆಲಸ ಮಾಡಿದ್ದಾರೆ. ಆತನನ್ನು ವಿಚಾರಿಸಿದಾಗ ನಮ್ಮೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳುತ್ತಾನೆ.ಈ ಹಿಂದೆಯೂ ಈತನು ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಹಾಗೂ ಚಾಂದಕವಠೆ ಗ್ರಾಮದಲ್ಲಿ ಟವರ್ ಹತ್ತಿ ಹುಚ್ಚಾಟ ಮೆರೆದಿದ್ದನೆನ್ನಲಾಗಿದೆ.ಈ ಸಂದರ್ಭದಲ್ಲಿ ಅಗ್ನಿಶಾಮಕ ಸಹಾಯಕ ಠಾಣಾ ಅಧಿಕಾರಿ ದೇವಧಾನಮ್ಮ ಪಿ.ಎಚ್, ಚಾಲಕ ಮಲ್ಲು ಗೋಟ್ಯಾಳ,ಸಿಬ್ಬಂದಿ ಮಾರುತಿ ರಾಠೋಡ, ಮಹಾದೇವ ಮಾದರ, ಶರಣು ಹೊನವಾಡ, ಪ್ರಕಾಶ್ ಬಿರಾದಾರ,…
ಮುದ್ದೇಬಿಹಾಳ: ಭಾರತೀಯ ಜನತಾ ಪಕ್ಷದ ವಿಜಯಪುರ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯನ್ನಾಗಿ ಪ್ರಭು ತಳಗೇರಿ ಅವರನ್ನ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆದೇಶಿಸಿದ್ದಾರೆ.
ಆಲಮಟ್ಟಿ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ಸೋಮವಾರ ರಾತ್ರಿ ಸಮೀಪದ ಮಾರಡಗಿ ತಾಂಡಾದ ಬಳಿ ನಡೆದಿದೆ.ಮೃತರು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಹಾಗೂ ಪಾರ್ವತಿ ಭೀಮಪ್ಪ ತಳವಾರ (45) ಎಂದು ಗುರುತಿಸಲಾಗಿದೆ.ಗಣಿ ಗ್ರಾಮಕ್ಕೆ ಬರುವ ಮೊದಲೇ ಇಬ್ಬರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆರೋಪಿ ಯಾರು ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ ಭೇಟಿ ನೀಡಿದ್ದರು.ಶ್ವಾನ ದಳ, ಬೆರಳಚ್ಚು ತಂತ್ರಜ್ಞರು ಭೇಟಿ ನೀಡಿದ್ದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾಪೋಷಕರ ಸಂಘಟನೆಯಾದ ಗದುಗಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಯಾದ ಕಲಾ ವಿಕಾಸ ಪರಿಷತ್ತಿನ, ರಾಷ್ಟ್ರೀಯ ಮಟ್ಟದ ಕಲಾ ವಿಕಾಸ ಉತ್ಸವ-೨೦೨೪ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಗರದ ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಸಮಾಜ ಸೇವಕ ವಿ. ಕೆ. ಗುರುಮಠ ಇವರನ್ನು ಪರಿಷತ್‌ನ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕಾರಣಿ ಸಮಿತಿಯ ಸಭೆಯಲ್ಲಿ ಸರ್ವ ಸದಸ್ಯರ ಮತ್ತು ಪರಿಷತ್‌ನ ಹಿತೈಶಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪರಿಷತ್ ಸಂಸ್ಥಾಪಕ ಸಿ. ಕೆ. ಹೆಚ್.ಶಾಸ್ತ್ರೀ (ಕಡಣಿ) ಇವರು ತಿಳಿಸಿದ್ದಾರೆ.ಕಲಾ ವಿಕಾಸ ಪರಿಷತ್ತು ಶುದ್ಧ ಶಾಸ್ತ್ರೀಯ ಸಂಗೀತಕ್ಕಾಗಿ ಸಮರ್ಪಿಸಿಕೊಂಡ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಅವಳಿ ನಗರದಲ್ಲಿ ಮಾತ್ರವಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಬಾಲ, ಯುವ ಮತ್ತು ಹಿರಿಯ ಕಲಾವಿದರಿಗಾಗಿ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಕಲಾ ದಿಗ್ಗಜರ ಚಿರಪರಿಚಿತ ಸಂಸ್ಥೆಯಾಗಿದೆ. ಅವಳಿ ನಗರದಲ್ಲಿ ಸಂಸ್ಕೃತಿ ಸಂಭ್ರಮ, ಕಲಾ ವಿಕಾಸ ಉತ್ಸವ, ಭೀಮಸೇನ್ ಜೋಶಿ ಮ್ಯೂಜಿಕ್ ಫೆಸ್ಟಿವಲ್…
ವಿಜಯಪುರ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರು ಮತ್ತು ಕುಟುಂಬಗಳ ಮೇಲಿನ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಸಾಮರಸ್ಯ ವೇದಿಕೆಯಿಂದಜಿಲ್ಲಾ ಆಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತುಈ ವೇಳೆ ಸಾಮರಸ್ಯ ವೇದಿಕೆಯ ಜಿಲ್ಲಾ ಸದಸ್ಯ ಶರಣಪ್ಪ ಬ್ಯಾಳಿ ಮಾತನಾಡಿ, 47 ದಿನಗಳ ಹಿಂದೆ ಐಟಿ ಅಧಿಕಾರಿಗಳ ಮೇಲೆ ನಡೆದ ದಾಳಿ ನಂತರವೇ ಈ ಘೋರ ದೌರ್ಜನದ ಘಟನೆಗಳು ಬೆಳಕಿಗೆ ಬಂದಿವೆ. ಇದು ಪಶ್ಚಿಮ ಬಂಗಾಳ ರಾಜ್ಯದ ಆಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ಉದಾಹರಣೆ ಮಾತ್ರವಲ್ಲ ಧಾರ್ಮಿಕ ಮತ್ತು ರಾಜಕೀಯ ವಿಷಯಗಳು ಒಳಗೊಂಡಿವೆ. ಈ ಘಟನೆಗಳು ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ, ಆಂತರಿಕ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ದೌರ್ಜನ್ಯ ನಡೆದು ಹಲವು ದಿನಗಳು ಕಳೆದರೂ ಪೊಲೀಸರು ಯಾವುದೇ ಪ್ರಥಮ ಮಾಹಿತಿ ( ಎಫ್ ಐ ಆರ್ ) ದಾಖಲಿಸಿಲ್ಲ. ಆರ್ಥಿಕ, ಧಾರ್ಮಿಕ, ರಾಜಕೀಯ ವಿಷಯಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಕೆ ಮಾಡಿಕೊಳ್ಳೋದು ನಾಚಿಕೆಗೇಡಿತನ. ಈ ಕೆಟ್ಟ ಘಟನೆಯನ್ನು ಸಾಮರಸ್ಯ…
