ಆಲಮಟ್ಟಿ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ಸೋಮವಾರ ರಾತ್ರಿ ಸಮೀಪದ ಮಾರಡಗಿ ತಾಂಡಾದ ಬಳಿ ನಡೆದಿದೆ.
ಮೃತರು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಹಾಗೂ ಪಾರ್ವತಿ ಭೀಮಪ್ಪ ತಳವಾರ (45) ಎಂದು ಗುರುತಿಸಲಾಗಿದೆ.
ಗಣಿ ಗ್ರಾಮಕ್ಕೆ ಬರುವ ಮೊದಲೇ ಇಬ್ಬರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆರೋಪಿ ಯಾರು ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.
ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ ಭೇಟಿ ನೀಡಿದ್ದರು.
ಶ್ವಾನ ದಳ, ಬೆರಳಚ್ಚು ತಂತ್ರಜ್ಞರು ಭೇಟಿ ನೀಡಿದ್ದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
