ಗದಗ: ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾಪೋಷಕರ ಸಂಘಟನೆಯಾದ ಗದುಗಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಯಾದ ಕಲಾ ವಿಕಾಸ ಪರಿಷತ್ತಿನ, ರಾಷ್ಟ್ರೀಯ ಮಟ್ಟದ ಕಲಾ ವಿಕಾಸ ಉತ್ಸವ-೨೦೨೪ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಗರದ ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಸಮಾಜ ಸೇವಕ ವಿ. ಕೆ. ಗುರುಮಠ ಇವರನ್ನು ಪರಿಷತ್‌ನ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕಾರಣಿ ಸಮಿತಿಯ ಸಭೆಯಲ್ಲಿ ಸರ್ವ ಸದಸ್ಯರ ಮತ್ತು ಪರಿಷತ್‌ನ ಹಿತೈಶಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪರಿಷತ್ ಸಂಸ್ಥಾಪಕ ಸಿ. ಕೆ. ಹೆಚ್.ಶಾಸ್ತ್ರೀ (ಕಡಣಿ) ಇವರು ತಿಳಿಸಿದ್ದಾರೆ.
ಕಲಾ ವಿಕಾಸ ಪರಿಷತ್ತು ಶುದ್ಧ ಶಾಸ್ತ್ರೀಯ ಸಂಗೀತಕ್ಕಾಗಿ ಸಮರ್ಪಿಸಿಕೊಂಡ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಅವಳಿ ನಗರದಲ್ಲಿ ಮಾತ್ರವಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಬಾಲ, ಯುವ ಮತ್ತು ಹಿರಿಯ ಕಲಾವಿದರಿಗಾಗಿ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಕಲಾ ದಿಗ್ಗಜರ ಚಿರಪರಿಚಿತ ಸಂಸ್ಥೆಯಾಗಿದೆ. ಅವಳಿ ನಗರದಲ್ಲಿ ಸಂಸ್ಕೃತಿ ಸಂಭ್ರಮ, ಕಲಾ ವಿಕಾಸ ಉತ್ಸವ, ಭೀಮಸೇನ್ ಜೋಶಿ ಮ್ಯೂಜಿಕ್ ಫೆಸ್ಟಿವಲ್ ಮೊದಲಾದ ಸಂಗೀತ ಸಾಹಿತ್ಯ ಕಾರ್ಯಕ್ರಮ ಏರ್ಪಡಿ ದೇಶ ವಿದೇಶದ ಕಲಾವಿದರಿಗೆ ವೇದಿಕೆ ನೀಡಿದ ನಗರದ ಪ್ರತಿಷ್ಠಿತ ಏಕೈಕ ಸಂಸ್ಥೆಯಾಗಿದೆ. ಕರೋನ ಕಾಲಘಟ್ಟದಿಂದ ಅವಳಿ ನಗರದಲ್ಲಿ ದೊಡ್ಡ ಉತ್ಸವಗಳು ಹಮ್ಮಿಕೊಳ್ಳಲು ಪರಿಷತ್‌ಗೆ ಸಾಧ್ಯವಾಗಿರಲಿಲ್ಲ ಮತ್ತೆ ಹಿಂದಿನ ಗತವೈಭವಕ್ಕೆ ಮರಳುವ ಉದ್ದೇಶದಿಂದ ಮತ್ತು ಪರಿಷತ್‌ನ ರಜತ ಮಹೋತ್ಸವಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಯೋಜನೆಯಲ್ಲಿ ಈ ಉತ್ಸವದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಈ ಹಿಂದಿನ ಉತ್ಸವಗಳಲ್ಲಿ ವಿಶ್ವನಾಥ್ ರಾಮನಕೊಪ್ಪ, ಡಾಕ್ಟರ್ ಜಿ ಬಿ ಪಾಟೀಲ್, ವಿಜಯ್ ಕುಮಾರ್ ಗಡ್ಡಿ, ಎಚ್.ಎಸ್.ಶಿವನಗೌಡರ್, ಸಿರಾಜ್ ಬಳ್ಳಾರಿ, ಮಂಜುನಾಥ್ ರೆಡ್ಡಿ, ಡಾ. ಶೇಖರ ಸಜ್ಜನರ್ ಮೊದಲಾದ ಸಾಂಸ್ಕೃತಿಕ ಚಿಂತಕರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಲಾವಿಕಾಸ ಪರಿಷತ್ತಿನ ಕಾರ್ಯಕ್ರಮಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಪ್ರೋತ್ಸಾಹಿಸಿದ್ದಾರೆ. ಎಂದು ಸಭೆಯಲ್ಲಿ ಶಾಸ್ತ್ರೀಗಳು ನೆನಪಿಸಿಕೊಂಡರು.
ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಹಮ್ಮಿಕೊಳ್ಳುವ ಈ ಎರಡು ದಿನದ ಉತ್ಸವಕ್ಕೆ ಸ್ಥಳೀಯ ಸಾಂಸ್ಕೃತಿಕ ಸಂಘಟನೆಗಳ ಮತ್ತು ಸಂಗೀತ ನೃತ್ಯ ಕಲಾಪ್ರೀಯರ ಸಹಕಾರ ಪಡೆಯಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ವಿ. ಕೆ. ಗುರುಮಠ ಅವರ ಅಧ್ಯಕ್ಷತೆಯಲ್ಲಿ ಅವರ ಆಪ್ತಮಿತ್ರರ ಸಂಘ ಸಂಸ್ಥೆಗಳ ಸಭೆ ಕರೆದು ಪೂರ್ಣ ಪ್ರಮಾಣದ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಪರಿಷತ್‌ನ ಹಿತೈಷಿ ವಿಭೂತಿ ಮಾಸಪತ್ರಿಕೆಯ ಸಂಪಾದಕ ಸಾಹಿತಿ ಅಂದಾನೆಪ್ಪ ವಿಭೂತಿ ನಿವೃತ್ತ ಚಿತ್ರಕಲಾ ಶಿಕ್ಷಕ, ಖ್ಯಾತ ಕಲಾವಿದ ಶಿವಪ್ಪ ಬೆನಕಣ್ಣವರ, ರುದ್ರೇಶ ಕೊರವರ್, ಪ್ರದೀಪ ನೆರ್ತಿ, ಎಪ್.ಎ. ಹಿರೇಮಠ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

