ವಿಜಯಪುರ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರು ಮತ್ತು ಕುಟುಂಬಗಳ ಮೇಲಿನ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಸಾಮರಸ್ಯ ವೇದಿಕೆಯಿಂದ
ಜಿಲ್ಲಾ ಆಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಸಾಮರಸ್ಯ ವೇದಿಕೆಯ ಜಿಲ್ಲಾ ಸದಸ್ಯ ಶರಣಪ್ಪ ಬ್ಯಾಳಿ ಮಾತನಾಡಿ, 47 ದಿನಗಳ ಹಿಂದೆ ಐಟಿ ಅಧಿಕಾರಿಗಳ ಮೇಲೆ ನಡೆದ ದಾಳಿ ನಂತರವೇ ಈ ಘೋರ ದೌರ್ಜನದ ಘಟನೆಗಳು ಬೆಳಕಿಗೆ ಬಂದಿವೆ. ಇದು ಪಶ್ಚಿಮ ಬಂಗಾಳ ರಾಜ್ಯದ ಆಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ಉದಾಹರಣೆ ಮಾತ್ರವಲ್ಲ ಧಾರ್ಮಿಕ ಮತ್ತು ರಾಜಕೀಯ ವಿಷಯಗಳು ಒಳಗೊಂಡಿವೆ. ಈ ಘಟನೆಗಳು ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ, ಆಂತರಿಕ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ದೌರ್ಜನ್ಯ ನಡೆದು ಹಲವು ದಿನಗಳು ಕಳೆದರೂ ಪೊಲೀಸರು ಯಾವುದೇ ಪ್ರಥಮ ಮಾಹಿತಿ ( ಎಫ್ ಐ ಆರ್ ) ದಾಖಲಿಸಿಲ್ಲ. ಆರ್ಥಿಕ, ಧಾರ್ಮಿಕ, ರಾಜಕೀಯ ವಿಷಯಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಕೆ ಮಾಡಿಕೊಳ್ಳೋದು ನಾಚಿಕೆಗೇಡಿತನ. ಈ ಕೆಟ್ಟ ಘಟನೆಯನ್ನು ಸಾಮರಸ್ಯ ವೇದಿಕೆ ಖಂಡಿಸುತ್ತಿದೆ ಎಂದರು.
ಪರಶುರಾಮ ರೋಣಿಹಾಳ ಮಾತನಾಡಿ, ಈ ಘಟನೆಯು ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ಮಹಿಳೆಯರು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ತಕ್ಷಣ ಈ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಣಮಂತ ಬಿರಾದಾರ, ಸಾಯಿಕುಮಾರ್ ಬಿಸನಾಳ, ಮುದುಕಪ್ಪ ಮದಬಾವಿ, ಅನಿಲ ಸಾಗರ್, ಸಂತೋಷ ಬ್ಯಾಳಿ, ಪ್ರಕಾಶ್ ನಡುವಿನಕೇರಿ, ಹಣಮಂತ ಅಥರ್ಗಾ, ಆಕಾಶ್ ದೊಡ್ಡಮನಿ, ನಾಗರಾಜ ಸಿ ಎಂ, ಸಾಬು ಬ್ಯಾಳಿ, ಮುದುಕಪ್ಪ ಮಾದರ, ರಾಜು ಮಾದರ, ಸುನಿಲ ದೇವರಮನಿ, ಆಕಾಶ ಕಲ್ಲೋಳಿ, ಸಚಿನ ತೆಲಸಂಗ, ಸಾಗರ ಕಲಾಲ, ಅನಿಲ ಮಾದರ, ಅರವಿಂದ್ ಹುಡಿಮನಿ, ಮತ್ತಿತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

