ಚಡಚಣ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಮಿತಿಯ ಕಾರ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಚಡಚಣ ತಾಲೂಕು ಘಟಕದ ಸಮಿತಿಯನ್ನು ರಚಿಸಲಾಯಿತು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್ ಕಾಂಬಳೆ ತಿಳಿಸಿದ್ದಾರೆ
ಗೌರವಾಧ್ಯಕ್ಷರಾಗಿ ಉಮರಾಣಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ಡೋಣೂರ, ಅಧ್ಯಕ್ಷರಾಗಿ ಹತ್ತಳ್ಳಿ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಪ್ರದೀಪ ಮಧಬಾವಿ, ಉಪಾಧ್ಯಕ್ಷರಾಗಿ ಶಿರನಾಳ ಸರ್ಕಾರಿ ಎಚ್.ಪಿ.ಎಸ್ ಶಾಲೆಯ ಶಿಕ್ಷಕರಾದ ಸುರೇಶ ಶಿವಶರಣ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಗಳು ವಿಜ್ಞಾನ ಶಿಕ್ಷಕರಾದ ರಾಜೇಶ ಬಳಿಗಾರ, ಸಹ ಕಾರ್ಯದರ್ಶಿಗಳು ದೈಹಿಕ ಶಿಕ್ಷಕರಾದ ಮಾಂತಕ್ಕ ರಾಂಪುರ, ಖಜಾಂಚಿ ವಿಜ್ಞಾನ ಶಿಕ್ಷಕರಾದ ಮೊಕಾಶಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪತ್ರಕರ್ತರಾದ ಶಿವಾನಂದ ಶಿವಶರಣ ಹಾಗೂ ಹಸಶ್ಯಾ ಮಕಾನದಾರ, ಶಿಕ್ಷಕರಾದ ಎಸ್ ಎಂ ಹದಿಮೂರ, ಮಾಳಪ್ಪ ವಾಗ್ಮೊರೆ, ರಾಮಚಂದ್ರ ಸುಣಗಾರ, ಜಿ ಎಸ್ ಜಂಗಮಶೆಟ್ಟಿ, ಆಸಿಫ್ ಚಟ್ಟರಕಿ, ಪಿ ಬಿ ಕುರ್ಲೆ, ಕುಮಾರಿ ಬಿ ಎಸ್ ಮದಭಾವಿ, ಎಂ ಜೆ ಚಿಂಚೋಳಿ, ಶ್ರೀಮತಿ ಎಂ ಎಸ್ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ರಮೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

