ಮುದ್ದೇಬಿಹಾಳ: ಈ ದೇಶದಲ್ಲಿ ಹುಟ್ಟಿದ ಮೇಲೆ ನಾವು ಈ ದೇಶವನ್ನು ನಾವು ಪ್ರೀತಿಸಬೇಕು. ಈ ದೇಶದ ಕಾನೂನನ್ನು ನಾವು ಗೌರವಿಸಬೇಕು. ಈ ದೇಶದ ಸಂವಿಧಾನವನ್ನು ನಾವು ಸ್ವೀಕರಿಸಬೇಕು. ಎಲ್ಲ ಸಮಾಜದವರ ಜೊತೆ ನಾವು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಇದನ್ನ ಪ್ರತಿಯೊಬ್ಬ ಮುಸ್ಲಿಂ ಅರಿತುಕೊಂಡು ಜಾಗೃತರಾಗಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಶೀರಅಹಮದ್ ಹೇಳಿದರು.
ಪಟ್ಟಣದ ಮಳಿಗೆಯೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಸಂದರ್ಭಗಳಲ್ಲಿ ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಹಾಕಿ ಬೇರೆಯವರು ಅಧಿಕಾರದ ಗುರಿ ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡದೇ ದೇಶದ ಎಲ್ಲ ಸಮಾಜ ಬಾಂಧವರ ಜೊತೆ ಪ್ರೀತಿ, ವಿಶ್ವಾಸದಿಂದ ಸೌಹಾರ್ದಯುತವಾಗಿ ಜೀವನ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಈವರೆಗೆ ನಾವು ಸೌಹಾರ್ದಯುತವಾಗಿ ಬಂದರೂ ಕೆಲವು ರಾಜಕೀಯ ಹಿತಾಸಕ್ತಿಗಳು ನಮ್ಮ ಮೇಲೆ ಆಗಾಗ ಕೆಟ್ಟ ಪರಿಣಾಮಗಳನ್ನು ಬೀರುತ್ತಿರುವುದರಿಂದ ಪ್ರತಿಯೊಬ್ಬ ಮುಸ್ಲಿಂ ಸಮಾಜದ ಬಾಂಧವರು ನಮ್ಮ ಸಲಹೆಯ ಪಾಲನೆ ಮಾಡಬೇಕಾಗಿದೆ ಎಂದರು.
ಇಲ್ಲಿಯವರೆಗೆ ನಮ್ಮನ್ನ ಆಳುವ ಸರ್ಕಾರಗಳು ಮುಸ್ಲೀಮರಿಂದ ಅಧಿಕಾರಕ್ಕೆ ಬರುತ್ತಿವೆ. ಆದರೆ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಡಳಿತಕ್ಕೆ ಬರಲು ಶೇ೮೮ ರಷ್ಟು ಮತದಾನ ಮಾಡುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದೆ. ಆದರೆ ಈ ಸರ್ಕಾರಕ್ಕೆ ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಕೇಳುವ ಪರಿಸ್ಥಿತಿಗೆ ತಂದಿಟ್ಟಿದೆ. ಹಾಗಾಗಿ ಚುನಾವಣೆ ನಂತರ ಸುಮಾರು ೨೫ ಸಾವಿರ ನಮ್ಮ ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ ಮಹಾ ಸಮ್ಮೇಳನ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಬಿಜೆಪಿ ಅಧಿಕಾರದ ಅವಧಿಯಲ್ಲಿ ನಮ್ಮ ಸಮಾಜದ ಯುವಕರ ಮೇಲೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮೇಲೆ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ. ಆ ಎಲ್ಲ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕೆಂಬುದು ನಮ್ಮ ಸಂಘದ ಆಗ್ರಹವಾಗಿದೆ ಎಂದರು. ಈ ವೇಳೆ ಯುಸೂಫ ನಾಯ್ಕೋಡಿ, ಸಿ.ಎನ್.ಗೋವಿಂದಪ್ಪ, ಮಹೆಬೂಬ ಕುಂಟೋಜಿ, ಗೋವಿಂದರಾಜ ಅರಮನಿ, ಕೆ.ಎಲ್.ನಧಾಫ್ ಜಿಲ್ಲಾಧ್ಯಕ್ಷ, ಎಲ್.ಕೆ.ನದಾಫ್, ಎಂ.ಸಿ.ಮ್ಯಾಗೇರಿ, ಅಮೀನಸಾ ಮುಲ್ಲಾ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

