Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಮನೆಯಿಂದ ಹೊರಗೆ ಹೋದ ಯುವಕ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೇವತಗಾಂವ ಗ್ರಾಮದ ನಿವಾಸಿ ಮಾಳಪ್ಪ ಬೀರಪ್ಪ ಸಾಲಮಳಗಿ(೨೩) ಯುವಕ ಕಾಣೆಯಾದ ಯುವಕ. ಜನೆವರಿ ೧೮. ೨೦೨೪ರಂದು ಮದ್ಯಾಹ್ನ ೧ ಗಂಟೆಯ ಸುಮಾರಿಗೆ ಹೊರಗೆ ಹೋದ ಯುವಕ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಯುವಕನ ದೊಡ್ಡಪ್ಪ ರೇವಪ್ಪ ಮನಗೇನಿಯವರು ದೂರು ದಾಖಲಿಸಿದ್ದಾರೆ. ಕಾಣೆಯಾದ ಮಾಳಪ್ಪ ೫.೨ ಎತ್ತರ, ಮೈಯಿಂದ ಸಧೃಢ, ಗೋಧಿ ಬಣ್ಣ, ಉದ್ದ ಮೂಗು, ಸ್ವಲ್ಪ ದಾಡಿ ಮೀಸೆ, ತಲೆಯಲ್ಲಿ ಕರಿಯ ಕೂದಲುಗಳಿವೆ. ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ಮೈಮೇಲೆ ಚಾಕಲೇಟ್ ಬಣ್ಣದ ಪುಲ್ ತೋಳಿನ ಅಂಗಿ ಹಾಗೂ ಕರಿ ಬಣ್ಣದ ಪ್ಯಾಂಟನ್ನು ತೊಟ್ಟಿದ್ದ ಈ ಪ್ರಕಾರದ ಚಹರೆಪಟ್ಟಿ ಇರುವ ವ್ಯಕ್ತಿಯು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಪತ್ತೆಯಾದಲ್ಲಿ ಮಾನ್ಯ ಎಸ್.ಪಿ. ಸಾಹೇಬರು ವಿಜಯಪುರರವರಿಗಾಗಲೀ ಅಥವಾ ವಿಜಯಪುರ ಕಂಟ್ರೋಲ್ ರೂಂಗಾಗಲೀ ಅಥವಾ ಚಡಚಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರಿಗಾಗಲೀ ಮಾಹಿತಿ…
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ಕಳೆದ ಎಂಟು ದಿನಗಳಿಂದ ತಾಲೂಕಿನಲ್ಲಿರುವ ಎಲ್ಲ ಕೆರೆ ಮತ್ತು ಹಳ್ಳಗಳಲ್ಲಿ ನೀರು ಹರಿಸಲಾಗಿದೆ.ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಅದಲ್ಲದೆ ಅಂತರ್ಜಲ ಹೆಚ್ಚಾಗಿ ಬಾವಿಗಳಿಗೆ, ಬೋರುಗಳಿಗೆ ನೀರು ಹೆಚ್ಚಾಗುವದು.ತಾಲೂಕಿನ ಸಂಗೋಗಿ,ಹಂಜಗಿ,ಲೋಣಿ ಕೆಡಿ ಮತ್ತು ಅರ್ಜನಾಳ ಕೆರೆಗಳನ್ನು ತುಂಬಲಾಗಿದೆ.ಅದಲ್ಲದೆ ನಾದ ಕೆ.ಡಿ, ಭೈರುಣಗಿ, ಹಲಸಂಗಿ ಸೇರಿದಂತೆ ಇಂಡಿಯ ಹಳ್ಳ, ಇಂಗಳಗಿ,ನೆಹರು ನಗರ, ಹಿರೇಬೇವನೂರ, ಭೂಯ್ಯಾರ ಹಳ್ಳಗಳನ್ನು ತುಂಬಿಸಲಾಗಿದ್ದು ಅಲ್ಲಿಂದ ನೀರು ಭೀಮಾ ನದಿ ಸೇರುತ್ತಿದೆ.ಬರದಿಂದ ಕಂಗೆಟ್ಟಿರುವ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಕುರಿತು ಕೃಷ್ಣಾ ಮುಖ್ಯ ಕಾಲುವೆಯಿಂದ ನೀರು ಆಸರೆ ಯಾಗುತ್ತಿದೆ. ಸಕಾಲದಲ್ಲಿ ಮಳೆ ಯಾಗದೆ ಇರುವದರಿಂದ ತಾಲೂಕಿನ ಕೆರೆ ಹಳ್ಳ ಬಾವಿ, ಬೋರು ಗಳು ಬತ್ತಿದ್ದರಿಂದ ಕುಡಿಯುವ ನೀರಿನ ಉಂಟಾಗಬಾರದೆಂದು ಕೃಷ್ಣಾ ಕಾಲುವೆಯಿಂದ ನೀರು ತುಂಬಿಸಲಾಗುತ್ತಿದೆ.ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಕಾರ್ಯ ಪಾಲಕ ಅಭಿಯಂತರ ಶಾಂತವೀರ ಮಠ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅರವಿಂದ ಪೋಳ, ಶ್ರೀಮಂತ ಅಂಗಡಿ, ಕಿರಿಯ ಅಭಿಯಂತರ…
ಮುದ್ದೇಬಿಹಾಳ: ನೀರಿನ ಮೂಲಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕು. ನಿಸರ್ಗ ನಮಗೆಲ್ಲ ನೀಡಿರುವ ಅಮೂಲ್ಯವಾದ ಸಂಪತ್ತು ನೀರು ಎಂದು ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಕೆರೆಯಂಗಳದಲೊಂದು ಸುತ್ತು” ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಕೆರೆಯ ಸುತ್ತಲೂ ಬೆಳೆದಿರುವ ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಲಾಗಿದೆ. ಟೆಂಡರ್ ಕರೆಯಬೇಕೆಂದರೆ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿದೆ. ಆದರೆ ಲಭ್ಯವಿರುವ ಸ್ವಚ್ಛತಾ ಕಾರ್ಮಿಕರನ್ನು ಬಳಸಿಕೊಂಡು ಕೆರೆಯ ಸುತ್ತಲಿನ ವಾಯುವಿಹಾರ ಪಥವನ್ನು ಸ್ವಚ್ಛಗೊಳಿಸಲಾಗುವುದು. ಕೆರೆಯ ಸ್ವಚ್ಛತೆ, ಇನ್ನಷ್ಟು ಚಂದದ ವಾಯು ವಿಹಾರ ಪಥ ನಿರ್ಮಾಣ, ಕೆರೆಯಲ್ಲಿ ಮನರಂಜನಾ ದೋಣಿಗಳನ್ನು ಬಳಸುವುದು. ಮಕ್ಕಳಿಗೆ ಮನರಂಜನಾ ಉದ್ಯಾನ ನಿರ್ಮಿಸಲು ಉದ್ದೇಶಿಸಿಸಲಾಗಿದೆ ಎಂದರು.ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಮಾತನಾಡಿದರು.ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ಮಾತನಾಡಿದರು.ಅಭಿಯಾನದಲ್ಲಿ ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ, ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ,…
ಬ್ರಹ್ಮದೇವನಮಡು: ಸಮೀಪದ ನಾಗ ಅಲ್ಲಾಪೂರ ಗ್ರಾಮದ ಬಳಿಯ ಚೆಕ್ ಪೋಸ್ಟ್ ನಲ್ಲಿ ಯಡ್ರಾಮಿ ಪೊಲೀಸರು ಬುಧುವಾರ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ರೂ.೨ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.ವಿಜಯಪುರ ಕಡೆಯಿಂದ ಬಂದ ಬುಲೇರೋ ಪಿಕ್ ಆಫ್ ವಾಹನದಲ್ಲಿ ಸಾಗಿಸುತ್ತಿದ್ದ ೧ ಲಕ್ಷ ರೂ.ಗಳನ್ನು ಹಾಗೂ ಹದ್ನೂರ ಕಡೆಯಿದ ನಾಗ ಅಲ್ಲಾಪೂರ ಚೆಕ್ ಪೊಸ್ಟ್ ಕಡೆಗೆ ಬಂದ ಟಾಟಾ ನೆಕ್ಷನ್ ಕಾರನ್ನು ನಿಲ್ಲಿಸಿ ಚೆಕ್ ಮಾಡಲಾಗಿ ನಗದು ೧ ಲಕ್ಷ ರೂ.ಗಳನ್ನು ಯಾವುದೇ ಅಧಿಕೃತ ಹಣದ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಾಗ ಅಲ್ಲಾಪೂರ ಬಳಿ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸತ್ತಿದ್ದ ಸಮಯದಲ್ಲಿ ಎಸ್.ಎಸ್.ಟಿ ತಂಡ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡಿದ್ದಿದ್ದಾರೆ.ಈ ವೇಳೆ ಎ.ಆರ್.ಓ ರಹಿಮಾನ್ ಪಟೇಲ,ಯಡ್ರಾಮಿ ಪಿಎಸೈ ವಿಶ್ವನಾಥ ಮದರಡ್ಡಿ, ಪಿಎಸೈ ವೆಂಕಟೇಶ ನಾಯಕ ಸೇರಿದಂತೆ ಎಸ್.ಎಸ್.ಟಿ ತಂಡ ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು. ಯಡ್ರಾಮಿ ಪೋಲಿಸ್ ಠಾಣೆ ವ್ಶಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯವು ಜನವರಿ ೨೦೨೪ರ ಪದವಿ, ಸ್ನಾತಕ ಕೋರ್ಸಗಳು, ಹಾಗೂ ಡಿಪ್ಲೋಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಮಾ.೩೧ ಕೊನೆಯ ದಿನವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ www.ignou.ac.in ನಲ್ಲಿ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ವಿಜಯಪುರ, ೧ನೇ ಮಹಡಿ, ಪ್ಲಾಜಾ-೨, ಪ್ರವಾಸೋಧ್ಯಮ ಇಲಾಖೆ ಕಟ್ಟಡ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಹತ್ತಿರ ವಿಜಯಪುರ, ದೂರವಾಣಿ ಸಂಖ್ಯೆ: ೦೮೩೫೨-೨೫೨೦೦೬, ೯೪೮೨೩೧೧೦೦೬ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಯಂಗ್ ಪ್ರೋಪೇಶಿಯನಲ್-೨ ತಾತ್ಕಾಲಿಕ ಹುದ್ದೆಗೆ ಮಾ.೨೮ರಂದು ಬೆಳಗ್ಗೆ ೧೦.೩೦ಕ್ಕೆ ಜೆನೆಟಿಕ್ ಮತ್ತು ಪ್ಲಾಂಟ್ ಬ್ರಿಡಿಂಗ್ ವಿಷಯದಲ್ಲಿ ಕೃಷಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಕರೆಯಲಾಗಿದೆ.ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳು ಹಾಗೂ ಎರಡು ಸೆಟ್ ಝೆರಾಕ್ಸ್ ಪ್ರತಿಗಳು, ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿ ಸಂದರ್ಶನದ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೃಷಿ ಮಾಹಾವಿದ್ಯಾನಿಲಯದ ವಿದ್ಯಾಧಿಕಾರಿ ಡಾ. ಭೀಮಪ್ಪ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಚಡಚಣ ತಾಲೂಕಿನ ಹೊಳೆಸಂಖ ಗ್ರಾಮದಲ್ಲಿ ೩೩ಕೆವಿ ಹೊಳೆಸಂಖ ಏತನೀರಾವರಿ ಸ್ಥಾವರಕ್ಕೆ ೩೩ಕೆವಿ ವಿದ್ಯುತ್ ಮಾರ್ಗವನ್ನು ಹಾಲಿ ಇರುವ ೧೧೦/೩೩/೧೧ಕೆವಿ ಚಡಚನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಒಂದು ಟರ್ಮಿನಲ್ ಬೇ ನಿರ್ಮಿಸುವ ಮುಖಾಂತರ ೧೪.೫೬ ಕಿಮಿ ೩೩ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸದರಿ ಸ್ಥಳದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
೮೫ ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರ ಮತದಾನ ಕುರಿತು ತರಬೇತಿ ಇಂಡಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣೆ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು ಸಹಾಯಕ ಚುನಾವಣೆ ಅಧಿಕಾರಿ ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ೮೫ ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರ ಮತದಾನ ಕುರಿತು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.ಮತದಾರರ ಪಟ್ಟಿಯ ಅನುಸಾರ ಬೂತ್ ಮಟ್ಟದ ಅಧಿಕಾರಿಗಳು ಮಾ.೨೨ ರಿಂದ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಮನೆ ಮನೆಗೆ ಭೇಟಿ ನೀಡಿ ೧೨ ಡಿ ಅರ್ಜಿಗಳನ್ನು ಭರ್ತಿ ಮಾಡಬೇಕು. ಅಂಚೆ ಮತದಾನಕ್ಕೆ ೧೨ ಡಿ ಮೂಲಕ ದೃಡಿಕರಿಸಿದವರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಅವಕಾಶ ವಿರುವದಿಲ್ಲ.ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ ೪೦ ಕ್ಕಿಂತ ಹೆಚ್ಚು…
ಬರದಿಂದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರಗೂಂಡ ಕೆರೆಗಳು ಖಾಲಿ ವಿಜಯಪುರ: ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿ ಕೆರೆಗಳೆಲ್ಲ ಬತ್ತಿದ್ದು, ಕೂಡಲೇ ಕಲಕೇರಿ ಸುತ್ತಮುತ್ತಲಿನ ಭಾಗದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರಗೂಂಡ ಕೆರೆಗಳನ್ನು ತುಂಬಿಸಬೇಕು ಎಂದು ಹುಣಶ್ಯಾಳ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಹಾಗೂ ಹುಣಶ್ಯಾಳ ಜಿಲ್ಲಾ ಪಂಚಾಯಿತಿ ಸೇವಾ ಆಕಾಂಕ್ಷಿ ಶ್ರೀಮತಿ ಬಂಗಾರೆಮ್ಮ ಮಾನಪ್ಪ ದೊಡಮನಿ ಆಗ್ರಹಿಸಿದರು.ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಬರಗಾಲಪೀಡಿತ ಜಿಲ್ಲೆಯ ಜನರ ನೀರಿನ ಬವಣೆಗೆ ಸರ್ಕಾರ ಕೆರೆತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿತ್ತು. ಕೆರೆಗಳನ್ನು ತುಂಬಿಸುವ ಯೋಜನೆ ಆರಂಭಿಸಬೇಕು ಎಂದು ಕಾರ್ಯಾದೇಶ ನೀಡಿದ್ದರೂ ಶೇ ೯೫ರಷ್ಟು ಕಾಮಗಾರಿ ನಿಗದಿತ ಅವಧಿಯಲ್ಲಿ ನಡೆಯದೇ ಯೋಜನೆ ವಿಳಂಬ ಗತಿಯಲ್ಲಿ ಸಾಗಿರುವುದರಿಂದ ಗ್ರಾಮೀಣ ಕೆರೆ-ಕಟ್ಟೆಗಳು ಒಣಗಿ, ಕುಡಿವ ನೀರಿಗೆ ಜಾನುವಾರುಗಳಿಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.ಕಲಕೇರಿ ಸುತ್ತಮುತ್ತಲಿನ ಭಾಗದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರೆಗುಂಡ ಕೆರೆಗಳನ್ನು ತುಂಬಿಸುವುದರಿಂದ ಈ ಭಾಗದ ಸುಮಾರು ೨೦ ಹಳ್ಳಿಗಳ ಜನಜಾನುವಾರುಗಳ ಕುಡಿಯುವ ನೀರಿಗೆ ಮತ್ತು…
ಮುದ್ದೇಬಿಹಾಳ: ಮಾ.೨೨ ರಂದು ಮಧ್ಯಾಹ್ನ ೧:೩೦ ಕ್ಕೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಉದ್ಘಾಟಿಸಲಿದ್ದು, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತರಿರಲಿದ್ದಾರೆ. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ್, ಅಪರ್ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಕಿರಿಯ ಶ್ರೇಣಿ ಸಹಾಯಕ ಅಭಿಯೋಜಕ ಬಸವರಾಜ ಆಹೇರಿ, ತಹಶೀಲ್ದಾರ ಬಸವರಾಜ ನಾಗರಾಳ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಭಾಗವಹಿಸಲಿದ್ದು, ಮಹಿಳಾ ಹಕ್ಕುಗಳ ಕಾಯ್ದೆ ಕುರಿತು ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ವಿಶೇಷ ಉಪನ್ಯಾಸ…
