ಚಡಚಣ: ಮನೆಯಿಂದ ಹೊರಗೆ ಹೋದ ಯುವಕ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವತಗಾಂವ ಗ್ರಾಮದ ನಿವಾಸಿ ಮಾಳಪ್ಪ ಬೀರಪ್ಪ ಸಾಲಮಳಗಿ(೨೩) ಯುವಕ ಕಾಣೆಯಾದ ಯುವಕ. ಜನೆವರಿ ೧೮. ೨೦೨೪ರಂದು ಮದ್ಯಾಹ್ನ ೧ ಗಂಟೆಯ ಸುಮಾರಿಗೆ ಹೊರಗೆ ಹೋದ ಯುವಕ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಯುವಕನ ದೊಡ್ಡಪ್ಪ ರೇವಪ್ಪ ಮನಗೇನಿಯವರು ದೂರು ದಾಖಲಿಸಿದ್ದಾರೆ. ಕಾಣೆಯಾದ ಮಾಳಪ್ಪ ೫.೨ ಎತ್ತರ, ಮೈಯಿಂದ ಸಧೃಢ, ಗೋಧಿ ಬಣ್ಣ, ಉದ್ದ ಮೂಗು, ಸ್ವಲ್ಪ ದಾಡಿ ಮೀಸೆ, ತಲೆಯಲ್ಲಿ ಕರಿಯ ಕೂದಲುಗಳಿವೆ. ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ಮೈಮೇಲೆ ಚಾಕಲೇಟ್ ಬಣ್ಣದ ಪುಲ್ ತೋಳಿನ ಅಂಗಿ ಹಾಗೂ ಕರಿ ಬಣ್ಣದ ಪ್ಯಾಂಟನ್ನು ತೊಟ್ಟಿದ್ದ ಈ ಪ್ರಕಾರದ ಚಹರೆಪಟ್ಟಿ ಇರುವ ವ್ಯಕ್ತಿಯು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಪತ್ತೆಯಾದಲ್ಲಿ ಮಾನ್ಯ ಎಸ್.ಪಿ. ಸಾಹೇಬರು ವಿಜಯಪುರರವರಿಗಾಗಲೀ ಅಥವಾ ವಿಜಯಪುರ ಕಂಟ್ರೋಲ್ ರೂಂಗಾಗಲೀ ಅಥವಾ ಚಡಚಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರಿಗಾಗಲೀ ಮಾಹಿತಿ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಚಡಚಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ. ೨೭೮೦೧೩(೦೮೪೨೨), ಪಿಎಸ್‌ಐ ಮೊ.ನಂ. ೯೪೮೦೮೦೪೨೫೫, ಸಿಪಿಐ ಮೊ.ನಂ. ೯೪೮೦೮೦೪೨೩೪ ಸಂಪರ್ಕಿಸಬೇಕಾಗಿ ಕೊರಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

