ಬ್ರಹ್ಮದೇವನಮಡು: ಸಮೀಪದ ನಾಗ ಅಲ್ಲಾಪೂರ ಗ್ರಾಮದ ಬಳಿಯ ಚೆಕ್ ಪೋಸ್ಟ್ ನಲ್ಲಿ ಯಡ್ರಾಮಿ ಪೊಲೀಸರು ಬುಧುವಾರ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ರೂ.೨ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಕಡೆಯಿಂದ ಬಂದ ಬುಲೇರೋ ಪಿಕ್ ಆಫ್ ವಾಹನದಲ್ಲಿ ಸಾಗಿಸುತ್ತಿದ್ದ ೧ ಲಕ್ಷ ರೂ.ಗಳನ್ನು ಹಾಗೂ ಹದ್ನೂರ ಕಡೆಯಿದ ನಾಗ ಅಲ್ಲಾಪೂರ ಚೆಕ್ ಪೊಸ್ಟ್ ಕಡೆಗೆ ಬಂದ ಟಾಟಾ ನೆಕ್ಷನ್ ಕಾರನ್ನು ನಿಲ್ಲಿಸಿ ಚೆಕ್ ಮಾಡಲಾಗಿ ನಗದು ೧ ಲಕ್ಷ ರೂ.ಗಳನ್ನು ಯಾವುದೇ ಅಧಿಕೃತ ಹಣದ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಾಗ ಅಲ್ಲಾಪೂರ ಬಳಿ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸತ್ತಿದ್ದ ಸಮಯದಲ್ಲಿ ಎಸ್.ಎಸ್.ಟಿ ತಂಡ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡಿದ್ದಿದ್ದಾರೆ.
ಈ ವೇಳೆ ಎ.ಆರ್.ಓ ರಹಿಮಾನ್ ಪಟೇಲ,ಯಡ್ರಾಮಿ ಪಿಎಸೈ ವಿಶ್ವನಾಥ ಮದರಡ್ಡಿ, ಪಿಎಸೈ ವೆಂಕಟೇಶ ನಾಯಕ ಸೇರಿದಂತೆ ಎಸ್.ಎಸ್.ಟಿ ತಂಡ ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು. ಯಡ್ರಾಮಿ ಪೋಲಿಸ್ ಠಾಣೆ ವ್ಶಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

