ಮುದ್ದೇಬಿಹಾಳ: ನೀರಿನ ಮೂಲಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕು. ನಿಸರ್ಗ ನಮಗೆಲ್ಲ ನೀಡಿರುವ ಅಮೂಲ್ಯವಾದ ಸಂಪತ್ತು ನೀರು ಎಂದು ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.
ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಕೆರೆಯಂಗಳದಲೊಂದು ಸುತ್ತು” ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕೆರೆಯ ಸುತ್ತಲೂ ಬೆಳೆದಿರುವ ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಲಾಗಿದೆ. ಟೆಂಡರ್ ಕರೆಯಬೇಕೆಂದರೆ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿದೆ. ಆದರೆ ಲಭ್ಯವಿರುವ ಸ್ವಚ್ಛತಾ ಕಾರ್ಮಿಕರನ್ನು ಬಳಸಿಕೊಂಡು ಕೆರೆಯ ಸುತ್ತಲಿನ ವಾಯುವಿಹಾರ ಪಥವನ್ನು ಸ್ವಚ್ಛಗೊಳಿಸಲಾಗುವುದು. ಕೆರೆಯ ಸ್ವಚ್ಛತೆ, ಇನ್ನಷ್ಟು ಚಂದದ ವಾಯು ವಿಹಾರ ಪಥ ನಿರ್ಮಾಣ, ಕೆರೆಯಲ್ಲಿ ಮನರಂಜನಾ ದೋಣಿಗಳನ್ನು ಬಳಸುವುದು. ಮಕ್ಕಳಿಗೆ ಮನರಂಜನಾ ಉದ್ಯಾನ ನಿರ್ಮಿಸಲು ಉದ್ದೇಶಿಸಿಸಲಾಗಿದೆ ಎಂದರು.
ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಮಾತನಾಡಿದರು.
ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ಮಾತನಾಡಿದರು.
ಅಭಿಯಾನದಲ್ಲಿ ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ, ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಸದಸ್ಯರಾದ ಕಿರಣ ಕಡಿ, ಸುರೇಶ ಕಲಾಲ, ಅಮರೇಶ ಗೂಳಿ, ಡಾ.ವಿಜಯಕುಮಾರ ಗೂಳಿ, ಶ್ರೀಶೈಲ ಮರೋಳ, ಪುಟ್ಟು ಕಡಕೋಳ, ಗುರುರಾಜ ದೊಡ್ಡಿಹಾಳ, ಗುಲಾಮ ಮಹಮ್ಮದ ದಫೇದಾರ, ಪುರಸಭೆ ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ರಾಮಣ್ಣ ಚಲವಾದಿ, ಡಾ.ಚಂದ್ರಶೇಖರ ಶಿವಯೋಗಿಮಠ, ಫಾರೂಖ ನಡಗೇರಿ, ಪ್ರವೀಣ ಪಾಟೀಲ, ಅಶೋಕ ಚಿನಿವಾರ, ಪರಮಾನಂದ ಪಾಟೀಲ ಸೇರಿದಂತೆ ಪುರಸಭೆಯ ಕಾರ್ಮಿಕರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

