Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಾ.೩೧ ಮತ್ತು ಏಪ್ರಿಲ್ ೧೪ರಂದು ‘ಆಳ್ವಾಸ್ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ’ (ಸಿಬಿಎಸ್‌ಸಿ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮ) ಮೂಡುಬಿದಿರೆ: ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ’ವು ಈ ಬಾರಿ ಪಿಯುಸಿ (ಪದವಿ ಪೂರ್ವ) ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ ೧೦ ಕೋಟಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಫೋಷಿಸಿದೆ.೧೦ನೇ ತರಗತಿ (ಎಸ್ಸೆಸ್ಸೆಲ್ಸಿ)ಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಬರೆಯಬಹುದು.ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ…
ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ, ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ ಅಜಮನಿ ಅವರ ಮಾರ್ಗದರ್ಶನದಂತೆ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ ಅವರು ನೂತನ ಕೋಲಾರ ತಾಲೂಕಿನ ಪದಾಧಿಕಾರಿಗಳಿಗೆ ಜಿಲ್ಲಾ ಕಛೇರಿಯಲ್ಲಿ ಆದೇಶ ಪ್ರತಿ ನೀಡಿ ಸಂಘಟನೆಯ ಬಗ್ಗೆ ತಿಳಿ ಹೇಳಿದರು.ತಾಲೂಕಿನ ಯಾವುದೇ ವಿದ್ಯಾರ್ಥಿಗೆ ಸಮಸ್ಯೆಯಾದರೆ ತಕ್ಷಣದಲ್ಲಿ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಅವರು ಹೇಳಿದರು.ಈ ವೇಳೆ ಕೋಲಾರ ತಾಲೂಕಾ ಸಂಚಾಲಕರಾಗಿ ಬಸವರಾಜ ಚಲವಾದಿ, ಸಹ ಸಂಚಾಲಕರಾಗಿ ಶರಣಪ್ಪ ರೊಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಕುದರಿ, ಸಾಂಸ್ಕೃತೀಕ ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಮು ತಳಕೇರಿ, ಸಾಮಾಜಿಕ ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ಖಜಾಪೂರ, ಖಜಾಂಚಿಯಾಗಿ ದೀಪಕ ರೋಳ್ಳಿ, ಮಾಧ್ಯಮ ವಕ್ತಾರರಾಗಿ ರಾಜು ಕೋರ್ತಿ, ಸಂಘಟನಾ ಸಂಪರ್ಕ ಕಾರ್ಯದರ್ಶಿಯಾಗಿ ಬಸವರಾಜ ಚಂ ಚ¯ವಾದಿ, ಸಂಘಟನಾ ಕಾರ್ಯದರ್ಶಿಯಾಗಿ ಯಮನಪ್ಪ ಹೊಸಮನಿ ಅವರನ್ನು ಆಯ್ಕೆ ಮಾಡಿ ಆದೇಶ ಪ್ರತಿ ನೀಡಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ…
ವಿಜಯಪುರ: ಜಿಲ್ಲಾ ಕಾಂಗ್ರೆಸ ಪರಿಶಿಷ್ಠ ಜಾತಿಯ ಅಧ್ಯಕ್ಷ ರಮೇಶ ಗುಬ್ಬೆವಾಡ ಅವರು ಗುರುವಾರದಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾದೇವ ಚಲವಾದಿ ಅವರಿಗೆ ಪರಿಶಿಷ್ಠ ಜಾತಿಯ ಜಿಲ್ಲಾ ಸಂಘಟನಾ ಕಾರ್ಯದಶಿಯಾಗಿ ಆದೇಶ ಪ್ರತಿ ನೀಡಿ ಪಕ್ಷದ ತತ್ವ ಹಾಗೂ ಸಿದ್ದಾಂತಗಳ ಕುರಿತು ಹೇಳಿದರುಈ ವೇಳೆ ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ಕಾಂಗ್ರೆಸ್ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಜಿಲ್ಲೆಯ ಮುಖಂಡರುಗಳ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಬೇಕು, ಪಕ್ಷದ ಎಲ್ಲಾ ಜನಪರ ಯೋಜನೆಗಳನ್ನು ಜಿಲ್ಲೆಯ ಮನೆ ಮನೆಗೂ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದಾಗಿದೆ, ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹಗಲಿರುಳು ಪಕ್ಷದ ಅಭ್ಯರ್ಥಿಯ ಪರವಾಗಿ ಜಿಲ್ಲೆಯ ಮನೆ ಮನೆಗೂ ತೆರಳಿ ಮತಯಾಚನೆ ಮಾಡುವುದರ ಮೂಲಕ ರಾಜು ಆಲಗೂರ ಅವರನ್ನು ಬಹುಮತದಿಂದ ಆರಿಸಿ ತರಬೇಕಾದ ಶ್ರದ್ದೆ ಹಾಗೂ ನಿಷ್ಠೆಯ ಕೆಲಸ ಮಾಡಬೇಕಿದೆ ಎಂದರುಈ ಸಂದರ್ಬದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ, ಮುಖಂಡರಾದ ಅಬ್ದುಲ್ ಹಮ್ಮೀದ ಮುಶ್ರೀಫ, ವಸಂತ ಹೊನಮೊಡೆ ಸೇರಿದಂತೆ ಅನೇಕರ ಕಾಂಗ್ರೆಸ್ ಮುಖಂಡರು…
“ಆರೋಗ್ಯ ಅಂಗಳ” – ರೇಷ್ಮಾ ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇದೆ. ಇದರೊಂದಿಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಬೇಸಿಗೆಯಲ್ಲಿ ಕೆಲವು ಸಾಮಾನ್ಯ ಕಾಯಿಲೆಗಳು ಬಾಧಿಸುವುದು ಸಹಜ. ಹಾಗಂತ ಅವುಗಳನ್ನು ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ. ಬಿರುಬೇಸಿಗೆಯಲ್ಲಿ ಕಾಣಿಸುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಬೇಸಿಗೆಯಲ್ಲಿ ಆರೋಗ್ಯ ಕಾಳಜಿಯ ಕುರಿತ ಟಿಪ್ಸ್ ಇಲ್ಲಿದೆ.ಸಾಮಾನ್ಯವಾಗಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ಅಂತ್ಯದವರೆಗೆ ಬಿಸಿಲು ಜೋರಾಗಿರುತ್ತದೆ. ಆದರೆ ಈ ವರ್ಷ ಬಿಸಿಲಿನ ಪ್ರತಾಪ ಇನ್ನೂ ಜೋರಿದೆ. ಬಿಸಿಲು ಏರಿಕೆಯಾದಷ್ಟೂ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತವೆ.ಬೇಸಿಗೆಯಲ್ಲಿ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವರ್ಷ ಬಿಸಿಲಿನ ಧಗೆ ಹೆಚ್ಚಿರುವ ಕಾರಣಕ್ಕೆ ಕಾಯಿಲೆಗಳ ಪ್ರಮಾಣವೂ ಹೆಚ್ಚಿದೆ. ಬೇಸಿಗೆಯಲ್ಲಿ ಕಾಣಿಸುವ ಸಾಮಾನ್ಯ ಕಾಯಿಲೆಗಳನ್ನು ಅಸಡ್ಡೆ ಮಾಡಬಾರದು. ಇದರಿಂದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ತಾಪಮಾನದ ಏರಿಕೆಯು ದೇಹದ ಯಾವುದೋ ಒಂದು ಭಾಗದ ಮೇಲೆ ಮಾತ್ರವಲ್ಲ; ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಚರ್ಮ, ಕಣ್ಣು, ಉಸಿರಾಟದ ಸಮಸ್ಯೆ ಇವು…
ಜಾತಿ ಆಧಾರಿತ ಹತ್ಯೆ ತಡೆಯಲು ಪ್ರತ್ಯೇಕ ಕಾಯಿದೆ ಜಾರಿಗೆ ಚೆನ್ನೈನಲ್ಲಿ ನಡೆದ ಸಮಾವೇಶವೊಂದರಲ್ಲಿ ದಲಿತ ವಿದ್ವಾಂಸರು ಒತ್ತಾಯಿಸಿದ್ದಾರೆ.ಮಾನವ ಹಕ್ಕುಗಳ ಸಂಘಟನೆ ಪೀಪಲ್ಸ್ ವಾಚ್‌ನ ಆಶೀರ್ವತಮ್ ಸಮಾವೇಶದಲ್ಲಿ ಮಾತನಾಡಿದ್ದು, ಗರ್ಭಿಣಿ ದಲಿತ ಯುವತಿಯನ್ನು ಸವರ್ಣಿಯ ಜಾತಿಯ ಪುರುಷರ ಗುಂಪು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದರು. ನಾವು ಮಾನವ ಹಕ್ಕುಗಳ ರಕ್ಷಕರಾಗಿ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಪೊಲೀಸ್ ಅಧಿಕಾರಿಗಳು ನಮ್ಮನ್ನು ತಡೆದಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಲ್ಲಿ ‘ಕಾನೂನು ಅಡೆತಡೆಗಳು ಮತ್ತು ಮಧ್ಯಸ್ಥಿಕೆಗಳಲ್ಲಿನ ಸವಾಲುಗಳು’ ಕುರಿತು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಆಶೀರ್ವತಮ್, ಗರ್ಭಿಣಿ ದಲಿತ ಸಂತ್ರಸ್ತೆ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಸಂತ್ರಸ್ತೆ ಅನುಭವಿಸಿದ ಅಗ್ನಿಪರೀಕ್ಷೆಯನ್ನು ವಿವರಿಸಿದಾಗ ಸಭಾಂಗಣವೆಲ್ಲ ಮೌನವಾಗಿತ್ತು.ಸಮಾವೇಶದಲ್ಲಿ ಜಾತಿ ಹತ್ಯೆ ಮತ್ತು ಯಾವ ರೀತಿ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗಿದೆ. ಭಾಗವಹಿಸಿದವರೆಲ್ಲರೂ ತಮಿಳುನಾಡಿನಲ್ಲಿ ಜಾತಿ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.2016ರಲ್ಲಿ ಅರಿಯಲೂರಿನಲ್ಲಿ ಪರಿಶಿಷ್ಟ…
ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಇಡೀ ರಾತ್ರಿ ಓದದೇ, ಸರಿಯಾದ ಸಮಯಕ್ಕೆ ಊಟವನ್ನು ಮಾಡಿ ಬೇಗ ಮಲಗಬೇಕು. ಕನಿಷ್ಟ, ಏಳೆಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿಮ್ಮ ಮನಸ್ಸಿನಲ್ಲಿಯ ಭಯ ಹೋಗಲಾಡಿಸಲು ಪ್ರಯತ್ನಿಸಬೇಕು ಎಂದು ಶಿಕ್ಷಕ ಟಿ.ಡಿ.ಲಮಾಣಿ ಹೇಳಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಹಿನ್ನೆಲೆ ಪರೀಕ್ಷಾ ವಿದ್ಯಾರ್ಥಿಗಳಿಗೆ ಮಾಧ್ಯಮದ ಮೂಲಕ ಸಲಹೆ ನೀಡಿದ ಅವರು, ಪರೀಕ್ಷೆಯ ಸಮಯದಲ್ಲಿ ಸಂಪೂರ್ಣವಾಗಿ ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಕರಿದ, ಮಸಾಲೆ ಪದಾರ್ಥಗಳನ್ನು ಸೇವಿಸದಿರಲು, ಹಣ್ಣುಗಳನ್ನು, ಹಣ್ಣಿನ ರಸಗಳನ್ನು, ನೀರನ್ನು ಹೆಚ್ಚಾಗಿ ಸೇವಿಸುವಂತೆ, ಕಾಫಿ, ಟೀ ಕುಡಿಯದಂತೆ, ಹಿಂದಿನ ದಿನದ ರಾತ್ರಿಯೇ ಪೆನ್, ಪೆನ್ಸಿಲ್, ಹಾಲ್ ಟಿಕೆಟ್ ಮತ್ತಿತರ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧವಿರಿಸಿಕೊಳ್ಳುವಂತೆ, ಮತ್ತೊಮ್ಮೆ ನಿಮ್ಮ ಪರೀಕ್ಷೆಯ ಟೈಂ ಟೇಬಲ್ ಚೆಕ್ ಮಾಡಿಕೊಳ್ಳುವಂತೆ, ಪರೀಕ್ಷೆಯ ದಿನ ಪರೀಕ್ಷೆಯ ಟೈಂಗೆ ಕನಿಷ್ಟ ಅರ್ಧ ಗಂಟೆಯ ಮೊದಲಾದರೂ ಎಕ್ಸಾಮ್ ಸೆಂಟರ್‌ಗೆ ಹೋಗಬೇಕೆಂಬುದನ್ನು ನೆನಪಿಟ್ಟುಕೊಳ್ಳುವಂತೆ, ಪಾಲಕರ ಆಶೀರ್ವಾದ ಪಡೆದುಕೊಳ್ಳುವಂತೆ, ಬ್ರೆಕ್ ಫಾಸ್ಟ್ ಮಾಡದೇ ಹೋಗದಿರುವಂತೆ, ಪರೀಕ್ಷೆಯ ಮುನ್ನ ಅನಗತ್ಯವಾಗಿ…
ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಬಳಿಯ ಚಕ್‌ಪೋಸ್ಟ್ ಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಪರಿಶೀಲಿಸಿದರು.ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಭಗವಾನ್, ತಹಶೀಲ್ದಾರ ಬಸವರಾಜ ನಾಗರಾಳ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ತಾ.ಪಂ ಇಓ ಎಸ್.ಎಸ್.ಮೇಲ್ಮನಿ ಸೇರಿದಂತೆ ಮತ್ತೀತರರು ಇದ್ದರು.
ಸಿಂದಗಿ: ನೂರಾರು ಕಿಲೋಮೀಟರ್ ದೂರದಿಂದ, ನೂರಾರೂ ಅಡಿ ಆಳದಲ್ಲಿರುವ ಜಲಮೂಲಗಳಿಂದ ಮನೆ ಮನೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇಷ್ಟೆಲ್ಲ ಪರಿಶ್ರಮದೊಂದಿಗೆ ಲಭ್ಯವಾಗುವ ಜೀವ ಜಲವನ್ನು ಮಿತವಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ ಹೇಳಿದರು.ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್‌ನಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಜಲ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.ವಿಶ್ವ ಜಲ ದಿನದ ಈ ವರ್ಷದ ಥೀಮ್ ಶಾಂತಿಗಾಗಿ ನೀರು. ಇದು ಪ್ರಪಂಚದ ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ನೀರು ವಹಿಸುವ ನಿರ್ಣಾಯಕ ಪಾತ್ರವನ್ನು ಕೇಂದ್ರೀಕರಿಸುತ್ತದೆ. ಭೂಮಿ ಮೇಲಿನ ಎಲ್ಲ ಜೀವರಾಶಿಗಳಿಗೆ ನೀರು ಅತ್ಯವಶ್ಯ. ರೈತಾಪಿ ವರ್ಗ ಸೇರಿದಂತೆ ಪ್ರತಿಯೊಬ್ಬರೂ ಜೀವ ದ್ರವ್ಯ ಮಳೆಯನ್ನೇ ನಂಬಿಕೊಂಡಿದ್ದಾರೆ. ಹಾಗಾಗಿ ಮಿತ ಪ್ರಮಾಣದಲ್ಲಿ ನೀರು ಸದ್ಬಳಕೆಯಾಗಬೇಕು ಎಂದು ಹೇಳಿದರು.ಈ ವೇಳೆ ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಸೇರಿದಂತೆ ಸಿಬ್ಬಂದಿಗಳಾದ ಶ್ರೀಶೈಲ ಹೂಗಾರ, ಅಂಬಿಕಾ ಕರಿಶೆಟ್ಟಿ ಹಾಗೂ ಮಕ್ಕಳು ಭಾಗವಹಿಸಿದ್ದರು.
ವಿ.ಆರ್.ಜಿ ಶಿಕ್ಷಣ ಸಂಸ್ಥೆಯ ಕಿಡ್ಜೀ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಸಿಂದಗಿ: ಆರೋಗ್ಯಪೂರ್ಣ ಮನಸ್ಸು ಆರೋಗ್ಯ ಪೂರ್ಣ ದೈಹಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಚಿಕ್ಕ ಮಕ್ಕಳ ವಿದ್ಯಾಭ್ಯಾಸ ಪ್ರಾರಂಭದ ಹಂತದಲ್ಲಿ ಆಟ ಪಾಠಗಳಿಂದ ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಸಹಕಾರಿ ಆದಾಗ ಮಾತ್ರ ಶಿಕ್ಷಣ ಸಂಸ್ಥೆಗಳ ಧ್ಯೇಯೋದ್ದೇಶಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ವಿ.ಆರ್.ಜಿ ಶಿಕ್ಷಣ ಸಂಸ್ಥೆಯವರ ಕಿಡ್ಜೀ ಶಾಲೆಯು ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅತ್ಯಂತ ಶಿಸ್ತಿನಿಂದ ಕೂಡಿರುವ ಉತ್ತಮ ಗುಣಮಟ್ಟದ, ಉತ್ತಮ ಕರ್ತೃತ್ವ ಶಕ್ತಿಯನ್ನು ಹೊಂದಿರುವ ಶಿಕ್ಷಕ, ಶಿಕ್ಷಕಿಯರ ವೃಂದವು ಶಾಲೆಯನ್ನ ಉನ್ನತ ಹಂತಕ್ಕೆ ತಂದು ನಿಲ್ಲಿಸಿದೆ. ಉದ್ಯಮವನ್ನೇ ಉಸಿರಾಗಿಸಿಕೊಂಡಿದ್ದ ಗುತ್ತೇದಾರ್ ಕುಟುಂಬ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದ್ದು ತುಂಬಾ ಸಂತೋಷದ ವಿಷಯ. ಮುಂಬರುವ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಯು ಪದವಿ ಶಿಕ್ಷಣದವರೆಗೂ ತನ್ನ ಬಾಹು ವಿಸ್ತರಿಸಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರ್ಬನ್ ಬ್ಯಾಂಕಿನ ನಿರ್ದೇಶಕ ಶರಣಪ್ಪ ವಾರದ, ದೈಹಿಕ…
ಮುದ್ದೇಬಿಹಾಳ: ಸ್ವಾತಂತ್ರ‍್ಯ ಬಂದು ೭೫ವರ್ಷ ಪೂರ್ಣವಾದರೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕೇವಲ ಬಿಟ್ಟಿಚಾಕರಿ ಕೆಲಸಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡಿರುತ್ತಾರೆ ಎಂದು ಶಿಕ್ಷಕ ಬಿ.ಟಿ.ಭಜಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಚ್ಛಿತ ವ್ಯಕ್ತಿಗಳು ಆಡಳಿತ ಮಂಡಳಿ ನಿರ್ಮಿಸಿಕೊಂಡು ಸರಕಾರದ ಪರವಾನಿಗೆ ಪಡೆದು, ಸರಕಾರವು ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ಅನುದಾನ ರಹಿತ ಶಾಲೆಗಳ ಶಿಕ್ಷಕರುಗಳು ಸಮಾನ ಅಥವಾ ಸಮಾನಕ್ಕೆ ಹತ್ತಿರವಾಗಿಯಾದರೂ ನಮ್ಮನ್ನು ನೋಡಿಕೊಳ್ಳಬೇಕು. ಇತ್ತೀಚೆಗೆ ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ಬೆಂಗಳೂರ ರವರು ಎಸ.ಎಸ್.ಎಲ್.ಸಿ ಆಂತರಿಕ ಅಂಕಗಳ ಪರಿಶೀಲನೆಗೆ ತ್ರಿಸದಸ್ಯ ಸಮಿತಿಯನ್ನು ರಚಿಸುವ ಸಂಬಂಧ ಪತ್ರ ಸಂಖ್ಯೆ: ಸಿ೧../ಅಅಇ/ತ್ರಿ.ಸ/ಸ/೯೦/೨೦೨೩-೨೪ ದಿನಾಂಕ: ೧೩.೦೨.೨೦೨೪ ಹೊರಡಿಸಿ ಕೇವಲ ಸರಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರುಗಳಿಗೆ ಮಾತ್ರ ಅವಕಾಶಗಳನ್ನು ನೀಡಿದ್ದಾರೆ. ಇದನ್ನು ನೋಡಿದಾಗ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಮರೆತಂತಿದೆ. ಆಂತರಿಕ ಅಂಕ ಪರಿಶೀಲನಾ ಸಮಿತಿಯಲ್ಲಿ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡಲು ಅನುದಾನ ರಹಿತ ಶಿಕ್ಷಕರುಗಳಿಗೆ…
