ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಇಡೀ ರಾತ್ರಿ ಓದದೇ, ಸರಿಯಾದ ಸಮಯಕ್ಕೆ ಊಟವನ್ನು ಮಾಡಿ ಬೇಗ ಮಲಗಬೇಕು. ಕನಿಷ್ಟ, ಏಳೆಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿಮ್ಮ ಮನಸ್ಸಿನಲ್ಲಿಯ ಭಯ ಹೋಗಲಾಡಿಸಲು ಪ್ರಯತ್ನಿಸಬೇಕು ಎಂದು ಶಿಕ್ಷಕ ಟಿ.ಡಿ.ಲಮಾಣಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಹಿನ್ನೆಲೆ ಪರೀಕ್ಷಾ ವಿದ್ಯಾರ್ಥಿಗಳಿಗೆ ಮಾಧ್ಯಮದ ಮೂಲಕ ಸಲಹೆ ನೀಡಿದ ಅವರು, ಪರೀಕ್ಷೆಯ ಸಮಯದಲ್ಲಿ ಸಂಪೂರ್ಣವಾಗಿ ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಕರಿದ, ಮಸಾಲೆ ಪದಾರ್ಥಗಳನ್ನು ಸೇವಿಸದಿರಲು, ಹಣ್ಣುಗಳನ್ನು, ಹಣ್ಣಿನ ರಸಗಳನ್ನು, ನೀರನ್ನು ಹೆಚ್ಚಾಗಿ ಸೇವಿಸುವಂತೆ, ಕಾಫಿ, ಟೀ ಕುಡಿಯದಂತೆ, ಹಿಂದಿನ ದಿನದ ರಾತ್ರಿಯೇ ಪೆನ್, ಪೆನ್ಸಿಲ್, ಹಾಲ್ ಟಿಕೆಟ್ ಮತ್ತಿತರ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧವಿರಿಸಿಕೊಳ್ಳುವಂತೆ, ಮತ್ತೊಮ್ಮೆ ನಿಮ್ಮ ಪರೀಕ್ಷೆಯ ಟೈಂ ಟೇಬಲ್ ಚೆಕ್ ಮಾಡಿಕೊಳ್ಳುವಂತೆ, ಪರೀಕ್ಷೆಯ ದಿನ ಪರೀಕ್ಷೆಯ ಟೈಂಗೆ ಕನಿಷ್ಟ ಅರ್ಧ ಗಂಟೆಯ ಮೊದಲಾದರೂ ಎಕ್ಸಾಮ್ ಸೆಂಟರ್‌ಗೆ ಹೋಗಬೇಕೆಂಬುದನ್ನು ನೆನಪಿಟ್ಟುಕೊಳ್ಳುವಂತೆ, ಪಾಲಕರ ಆಶೀರ್ವಾದ ಪಡೆದುಕೊಳ್ಳುವಂತೆ, ಬ್ರೆಕ್ ಫಾಸ್ಟ್ ಮಾಡದೇ ಹೋಗದಿರುವಂತೆ, ಪರೀಕ್ಷೆಯ ಮುನ್ನ ಅನಗತ್ಯವಾಗಿ ನೀರನ್ನು ಹೆಚ್ಚಾಗಿ ಕುಡಿಯದಿರುವಂತೆ, ಹಾಲ್‌ಟಿಕೆಟ್, ಎರಡು ಪೆನ್, ಪೆನ್ಸಿಲ್ ತೆಗೆದುಕೊಂಡು ಹೋಗುವಂತೆ, ಪರೀಕ್ಷಾ ದಿನದಂದೆ ಹೊಸ ಪೆನ್ನನ್ನು ಖರೀದಿಸದಿರುವಂತೆ, ಪರೀಕ್ಷೆ ಬರೆಯುವಾಗ ಮೊದಲು ಪ್ರಶ್ನೆ ಪತ್ರಿಕೆಯನ್ನು ಓದುವಂತೆ, ನಿಮಗೆ ಚೆನ್ನಾಗಿ ಗೊತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ, ಬರಹ ಉತ್ತಮವಾಗಿರುವಂತೆ, ಉತ್ತರಗಳನ್ನು ಪ್ರಶ್ನೆಗೆ ಸಂಬಂಧಿಸಿದಂತೆ ಅರ್ಥವಾಗುವಂತೆ ಬರೆಯುವಂತೆ, ಉತ್ತರ ಪತ್ರಿಕೆಯಲ್ಲಿ ಮುಖ್ಯ ಅಂಶಗಳಿಗೆ ಅಂಡರ್‌ಲೈನ್ ಮಾಡುವಂತೆ, ಉತ್ತರ ಪತ್ರಿಕೆಯಲ್ಲಿ ಚಿತ್ಕಾಟವನ್ನು ಹಾಕದಿರುವಂತೆ, ಬರಹ ಶುದ್ಧವಾಗಿರುವಂತೆ, ಇನ್ನು ೫ ನಿಮಿಷ ಇರುವ ಮುಂಚೆಯೇ ನೀವು ಬರೆದ ಎಲ್ಲಾ ಉತ್ತರಗಳನ್ನು ನಿಮ್ಮ ಹಾಲ್‌ಟಿಕೆಟ್ ಸಂಖ್ಯೆಯನ್ನು ಮತ್ತೊಮ್ಮೆ ಚೆಕ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

