ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ, ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ ಅಜಮನಿ ಅವರ ಮಾರ್ಗದರ್ಶನದಂತೆ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ ಅವರು ನೂತನ ಕೋಲಾರ ತಾಲೂಕಿನ ಪದಾಧಿಕಾರಿಗಳಿಗೆ ಜಿಲ್ಲಾ ಕಛೇರಿಯಲ್ಲಿ ಆದೇಶ ಪ್ರತಿ ನೀಡಿ ಸಂಘಟನೆಯ ಬಗ್ಗೆ ತಿಳಿ ಹೇಳಿದರು.
ತಾಲೂಕಿನ ಯಾವುದೇ ವಿದ್ಯಾರ್ಥಿಗೆ ಸಮಸ್ಯೆಯಾದರೆ ತಕ್ಷಣದಲ್ಲಿ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಅವರು ಹೇಳಿದರು.
ಈ ವೇಳೆ ಕೋಲಾರ ತಾಲೂಕಾ ಸಂಚಾಲಕರಾಗಿ ಬಸವರಾಜ ಚಲವಾದಿ, ಸಹ ಸಂಚಾಲಕರಾಗಿ ಶರಣಪ್ಪ ರೊಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಕುದರಿ, ಸಾಂಸ್ಕೃತೀಕ ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಮು ತಳಕೇರಿ, ಸಾಮಾಜಿಕ ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ಖಜಾಪೂರ, ಖಜಾಂಚಿಯಾಗಿ ದೀಪಕ ರೋಳ್ಳಿ, ಮಾಧ್ಯಮ ವಕ್ತಾರರಾಗಿ ರಾಜು ಕೋರ್ತಿ, ಸಂಘಟನಾ ಸಂಪರ್ಕ ಕಾರ್ಯದರ್ಶಿಯಾಗಿ ಬಸವರಾಜ ಚಂ ಚ¯ವಾದಿ, ಸಂಘಟನಾ ಕಾರ್ಯದರ್ಶಿಯಾಗಿ ಯಮನಪ್ಪ ಹೊಸಮನಿ ಅವರನ್ನು ಆಯ್ಕೆ ಮಾಡಿ ಆದೇಶ ಪ್ರತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಪೂಜಾರಿ, ಸುರೇಶ ಕಣಕಾಲ, ಅಲಭಾಕ್ಷ ಫಿಂಜಾರ, ರಾವೂತಪ್ಪ ಕವಲಗಿ, ಪ್ರಕಾಶ ಛಲವಾದಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

