ಮುದ್ದೇಬಿಹಾಳ: ಸ್ವಾತಂತ್ರ‍್ಯ ಬಂದು ೭೫ವರ್ಷ ಪೂರ್ಣವಾದರೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕೇವಲ ಬಿಟ್ಟಿಚಾಕರಿ ಕೆಲಸಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡಿರುತ್ತಾರೆ ಎಂದು ಶಿಕ್ಷಕ ಬಿ.ಟಿ.ಭಜಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಚ್ಛಿತ ವ್ಯಕ್ತಿಗಳು ಆಡಳಿತ ಮಂಡಳಿ ನಿರ್ಮಿಸಿಕೊಂಡು ಸರಕಾರದ ಪರವಾನಿಗೆ ಪಡೆದು, ಸರಕಾರವು ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ಅನುದಾನ ರಹಿತ ಶಾಲೆಗಳ ಶಿಕ್ಷಕರುಗಳು ಸಮಾನ ಅಥವಾ ಸಮಾನಕ್ಕೆ ಹತ್ತಿರವಾಗಿಯಾದರೂ ನಮ್ಮನ್ನು ನೋಡಿಕೊಳ್ಳಬೇಕು. ಇತ್ತೀಚೆಗೆ ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ಬೆಂಗಳೂರ ರವರು ಎಸ.ಎಸ್.ಎಲ್.ಸಿ ಆಂತರಿಕ ಅಂಕಗಳ ಪರಿಶೀಲನೆಗೆ ತ್ರಿಸದಸ್ಯ ಸಮಿತಿಯನ್ನು ರಚಿಸುವ ಸಂಬಂಧ ಪತ್ರ ಸಂಖ್ಯೆ: ಸಿ೧../ಅಅಇ/ತ್ರಿ.ಸ/ಸ/೯೦/೨೦೨೩-೨೪ ದಿನಾಂಕ: ೧೩.೦೨.೨೦೨೪ ಹೊರಡಿಸಿ ಕೇವಲ ಸರಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರುಗಳಿಗೆ ಮಾತ್ರ ಅವಕಾಶಗಳನ್ನು ನೀಡಿದ್ದಾರೆ. ಇದನ್ನು ನೋಡಿದಾಗ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಮರೆತಂತಿದೆ. ಆಂತರಿಕ ಅಂಕ ಪರಿಶೀಲನಾ ಸಮಿತಿಯಲ್ಲಿ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡಲು ಅನುದಾನ ರಹಿತ ಶಿಕ್ಷಕರುಗಳಿಗೆ ಅರ್ಹತೆಗಳಿರುವುದಿಲ್ಲವೆಂದರೆ ಮುಂದಿನ ವಾರ್ಷಿಕ ಪರೀಕ್ಷೆಯ ತಾತ್ವಿಕ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಹಾಜರಾಗದಿದ್ದ ಶಾಲೆಗಳ ಫಲಿತಾಂಶವನ್ನು ತಡೆಹಿಡಿಯುವ ಕಾರ್ಯ ಪರೀಕ್ಷಾ ಮಂಡಳಿಯಿಂದಾಗುತ್ತಿದೆ. ಅಲ್ಲದೆ ದಿನಾಂಕ: ೧೩.೦೩.೨೦೨೪ರಂದು ಕೊಠಡಿ ಮೇಲ್ವಿಚಾರಕರುಗಳ ನೇಮಕಾತಿಯ ಪತ್ರಗಳಲ್ಲಿಯೂ ಇದೇ ನಿಯಮವನ್ನು ಪಾಲಿಸಿ ಸರಕಾರಿ, ಅನುದಾನಿತ ಶಿಕ್ಷಕರುಗಳಿಗಷ್ಟೆ ಅವಕಾಶ ನೀಡಿದೆ. ಈ ವಿಷಯಗಳನ್ನು ಅವಲೋಕಿಸಿದಾಗ ಖಾಸಗಿ ಅನುದಾನ ರಹಿತ ಶಾಲೆಯ ಶಿಕ್ಷಕರುಗಳು ಇಲಾಖೆ ಹಿಡಿತದಲ್ಲಿರುವುದಿಲ್ಲ. ತಪ್ಪನ್ನು ಎಸಗಿದಲ್ಲಿ ಶಿಕ್ಷೆ ನೀಡಲಾಗುವುದಿಲ್ಲವೆಂದು ಸರಕಾರದ ಉತ್ತರವಾಗಿರುತ್ತದೆ. ನಮಗೆ ಆಂತರಿಕ ಪರಿಶೀಲನಾ ಸಮಿತಿಯಲ್ಲಿ ತ್ರಿಸದಸ್ಯರ ಪೈಕಿ ಸಾಮಾನ್ಯ ಸದಸ್ಯರನ್ನಾಗಿಯಾದರೂ ಮಾಡಿ ಆಂತರಿಕ ಅಂಕ ಪರಿಶೀಲನೆಗೆ ನಮಗೆ ಅಧಿಕಾರವಿಲ್ಲವೆಂದರೆ ಬಾಹ್ಯ ಅಂಕ ಪರಿಶೀಲನೆಗೆ ಅರ್ಹತೆ ಇದೆಯೆಂದು ಹೇಳುವುದಾದರು ಹೇಗೆ? ಅಲ್ಲದೆ ಪ್ರತಿ ವರ್ಷ ತಪ್ಪನ್ನು ಎಸಗುತ್ತಿರುವ ವಿಷಯ ರಾಜ್ಯವ್ಯಾಪಿಯಾಗಿ ಮಾಧ್ಯಮದ ಮೂಲಕಬರುತ್ತಿದ್ದು ತಪ್ಪಿತಸ್ಥರ ಮೇಲೆ ತೆಗೆದುಕೊಂಡ ಗಮನಾರ್ಹವಾದ ಕ್ರಮಗಳಾದರೂ ಯಾವುದಿದೆ? ಈ ಬಗ್ಗೆ ಇಲಾಖೆಯೆ ಪರಾಮರ್ಶಿಸಿಕೊಳ್ಳಲಿ.
ಬಿಟ್ರಿಷ್ ಆಳ್ವಿಕೆ ವೇಳೆಯಲ್ಲಿ ಭಾರತೀಯರಿಗೆ ಕೇವಲ ಸಾಮಾನ್ಯ ಸೈನಿಕ ಹುದ್ದೆಯೆನ್ನುವ ರೀತಿಯಲ್ಲಿ ಖಾಸಗಿ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಕ್ರೀಡಾ ಕೂಟ, ತರಬೇತಿ, ತಾತ್ವಿಕ ವಿಷಯ ಪತ್ರಿಕೆಗಳ ತಪಾಸಣೆ ಇತ್ಯಾದಿ ಚಾಕರಿಗಳಿಗಷ್ಟೆ ಸೀಮಿತವಾಗಿದೆ. ಅಲ್ಲದೆ ಇದೇ ನಿಯಮ ಪಾಲನೆ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಗಳಿಗೆ ಅನ್ವಯಿಸದೆ ಇರುವುದು ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಾರ್ಷಿಕ ಪರೀಕ್ಷೆಯಲ್ಲಿ ಅನುದಾನ ರಹಿತ ಶಾಲೆಯವರು ಯಾವುದೇ ನಿಯಂತ್ರಣವನ್ನು ಹೊಂದಿಲ್ಲವೆಂದು ನಮ್ಮನ್ನು ಕಡೆಗಣಿಸದೆ ನಮಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನ, ಪ್ರಶ್ನೆಪತ್ರಿಕೆ ಪಾಲಕರ ಅಧಿಕಾರ ನೀಡುವುದು ಬೇಡ, ಸ್ಥಾನಿಕ ಜಾಗ್ರತ ದಳ, ಮೋಬೈಲ್ ಕಸ್ಟೋಡಿಯನ್, ಕೊಠಡಿ ಮೇಲ್ವಿಚಾರಕರು, ಆಂತರಿಕ ಅಂಕಗಳ ತ್ರಿಸದಸ್ಯ ಸಮಿತಿಯ ಓರ್ವ ಸದಸ್ಯ ಇತ್ಯಾದಿ ಕೆಲಸಗಳಲ್ಲಾದರೂ ತೊಡಗಿಸಿಕೊಂಡು ಅವಕಾಶ ಕಲ್ಪಸಿಕೊಡಬೇಕು ಇಲ್ಲವಾದಲ್ಲಿ ಬಾಹ್ಯ ಉತ್ತರ ಪತ್ರಿಕೆಯ ಮೌಲ್ಯಮಾಪನದ ಮೇಲೆ ಆಸಕ್ತಿಯುಳ್ಳ ಶಿಕ್ಷಕರು ಮಾತ್ರ ಹಾಜರಾಗುತ್ತಾರೆ. ಕಡ್ಡಾಯವೆನ್ನುವ ಒತ್ತಡ ಹೇರಬಾರದೆಂದು ಮುದ್ದೇಬಿಹಾಳ ತಾಲೂಕಿನ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರುಗಳು ಇಲಾಲೆಯ ಮುಖ್ಯಸ್ಥರಿಗೆ, ಶಿಕ್ಷಣ ಸಚಿವರಿಗೆ, ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳಿಗೆ ಲಿಖಿತ ಪತ್ರ ವ್ಯವಹಾರಗಳನ್ನು ಮಾಡಿದ್ದೇವೆ. ಈ ಸಂದರ್ಭದಲ್ಲಿ ತಾಲೂಕಿನ ಬೇರೆ ಬೇರೆ ಅನುದಾನ ರಹಿತ ಶಾಲಾ ಶಿಕ್ಷಕರುಗಳಾದ ರಾಮಚಂದ್ರ ಹೆಗಡೆ, ವಿಜಯಕುಮಾರ ಹೊಸಗೌಡ್ರ, ಬಿ.ಆರ್.ಬೆಳ್ಳಿಕಟ್ಟಿ, ವಿನೋದ ಪಟಗಾರ, ವಿಜಯಕುಮಾರ ಹೊಸಗೌಡ್ರ, ಅನ್ನಪೂರ್ಣ ನಾಗರಾಳ, ಬಸವರಾಜ ಹಿಪ್ಪರಗಿ, ಸೇರಿದಂತೆ ೬೦ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರುಗಳು ಸಹಿ ಸಂಗ್ರದ ಮೂಲಕ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

