Author: editor.udayarashmi@gmail.com

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ರವರು ನಿಡಗುಂದಿ ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೫೦ರ ಯಲಗೂರು ಕ್ರಾಸ್ ಬಳಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಲೋಕಸಭಾ ಚುನಾವಣೆ ೨೦೨೪ರ ಹಿನ್ನೆಲೆಯಲ್ಲಿ ನಿಡಗುಂದಿ ತಾಲೂಕು ವ್ಯಾಪ್ತಿಯ ಯಲಗೂರು ಕ್ರಾಸ್ ಬಳಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಲು ಜಿಲ್ಲಾ ಗಡಿ ಭಾಗ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಕಂದಾಯ, ಪೋಲಿಸ್, ಕೆಬಿಜೆಎನ್‌ಎಲ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಈ ವೇಳೆ ಮಾತನಾಡಿದ ಜಿ.ಪಂ. ಸಿಇಓ ರಿಷಿ ಆನಂದ ರವರು ಲೋಕಸಭೆ ಚುನಾವಣಾ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಗೆ ಯಾಗಿದ್ದು, ಜಿಲ್ಲೆಯಿಂದ ಹೊರಹೋಗುವ ಮತ್ತು ಆಗಮಿಸುವ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡು ಬಂದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ವಾಹನ ತಪಾಸಣೆ ಮಾಡಿದ ವರದಿಯನ್ನು ವಹಿಯಲ್ಲಿ…

Read More

ವಿಜಯಪುರ: ನಗರದಲ್ಲಿ ಎಸ್.ಬಿ.ಗ್ರೂಫ್ ವತಿಯಿಂದ ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಗ್ರುಫ್ ಸದಸ್ಯರು ಪೂರ್ವಯೋಜಿತವಾಗಿ ತಯಾರಿ ಮಾಡಿಕೊಂಡ ಬಣವನ್ನು ಗೆಳೆಯರ ಮನೆಗೆ ಹೋಗಿ ಬಣ್ಣ ಹಂಚುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.ಗ್ರುಫ್‌ನ ಅಧ್ಯಕ್ಷ ಶರಣು ಬಿ. ಬ್ಯಾಳಿ ಮಾತನಾಡಿ, ಧರ್ಮದ ಕಟ್ಟುಪಾಡುಗಳನ್ನು ಮೀರಿ ಎಲ್ಲರೂ ಹಿಗ್ಗಿನಿಂದ ಆಚರಿಸುವ ಹಬ್ಬ- ಹೋಳಿ, ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯುವಂತಾಗಲಿ , ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟು , ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶ. ಹಬ್ಬ ಯಾವುದೇ ಇರಲಿ ಮೋಜು, ಮಸ್ತಿ , ಸಂಭ್ರಮಕ್ಕೆ ಕೊರತೆ ಇರಬಾರದು ಅನ್ನೋದು ಎಲ್ಲರ ಅಂಬೋಣ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಗತ್ತಿನ ಏಕೈಕ ದೇಶ ನಮ್ಮದು, ಹೋಳಿ ಹುಣ್ಣಿಮೆಯಿಂದ ರಂಗಪಂಚಮಿಯವರೆಗೆ ಐದು ದಿನಗಳ ಕಾಲ ಭರ್ಜರಿ ಸಂಭ್ರಮ , ಸಡಗರ, ಗೌಜಿ, ಗದ್ದಲ ತುಂಬಿದ ಭರಪೂರ ಆಚರಣೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಐದು ದಿನವೂ ಅದ್ಧೂರಿ ತಯಾರಿ, ಆಡಂಬರ, ಸಂಭ್ರಮ ಮನೆ ಮಾಡಿರುತ್ತದೆ.…

Read More

ಚಿಮ್ಮಡ: ಹೋಳಿ ಹಬ್ಬದ ನಿಮಿತ್ಯ ನಡೆಯುವ ಕಾಮದಹಣದ ಸಂಭ್ರಮಕ್ಕಾಗಿ ಸಂಗ್ರಹಿಸಲಾಗುವ ಸೌದೆ, ಕಟ್ಟಿಗೆಯ ಜೊತೆಗೆ ಉಪಯುಕ್ತ ವಸ್ತುಗಳನ್ನು ಎತ್ತಿಕೊಂಡು ಬಂದು ಗುಡ್ಡೆಹಾಕಿ ದಹಿಸುವುದರಿಂದ ಲಕ್ಷಾಂತರ ರೂ. ಬೆಲೆಬಾಳುವ ಅಮೂಲ್ಯ ವಸ್ತುಗಳು ಸುಟ್ಟು ಕರಕಲಾಗುತ್ತಿರುವ ಪರಿಣಾಮ ಅವುಗಳನ್ನು ಕಳೆದುಕೊಂಡವರು ಪರಿತಪಿಸುವಂತಾಗಿದೆ.ಕಾಮನ ಹಬ್ಬದ ಪ್ರತೀತಿಯಂತೆ ರೈತರ ಮನೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಕಟ್ಟಿಗೆಯ ವಸ್ತುಗಳು, ಗದ್ದೆಯಲ್ಲಿ ದೊರೆಯುವ ನಿರುಪಯೋಗಿ ಸೌದೆಗಳನ್ನು ಮನೆಯ ಮಾಲೀಕನಿಂದ ಪಡೆದು ಅವುಗಳನ್ನು ಸಂಗ್ರಹಿಸಿ ದಹಿಸಬೇಕು ಆದರೆ ಇಲ್ಲಿ ಸಾವಿರಾರು ರೂ ಬೆಲೆಬಾಳುವ ತೊಲೆಗಳು, ನಾಟುಗಳು, ಏಣಿ, ಮನೆಯ ಚೌಕಟ್ಟು, ಕುರ್ಚಿ, ಟೈರು ಸೇರಿದಂತೆ ಹಲವಾರು ಉಪಯುಕ್ತ ವಸ್ತುಗಳು ಮಾತ್ರವಲ್ಲದೇ ಮಗಳ ಬಾನಂತನಕ್ಕಾಗಿ ತಾಯಿ ಸಂಗ್ರಹಿಸಿಟ್ಟಿದ್ದ ಕುಳ್ಳು (ಸಗಣಿಯ ಬೆರಣಿ)ಗಳನ್ನು ಸಹ ರಾತ್ರಿ ವೇಳೆಯಲ್ಲಿ ಎತ್ತಿಕೊಂಡು ಬಂದು ದಹಿಸಲು ಗುಡ್ಡೆ ಹಾಕಲಾಗಿದ್ದು ಇದರಿಂದ ವಸ್ತುಗಳನ್ನು ಕಳೆದುಕೊಂಡವರು ಮಮ್ಮಲ ಮರಗುವಂತಾಗಿದೆ. ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

Read More

– ಬಸವರಾಜ ನಂದಿಹಾಳ ಬಸವನಬಾಗೇವಾಡಿ: ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಕಾಮದಹನದ ಮರುದಿನ ಉತ್ತರ ಕರ್ನಾಟಕ ಭಾಗದ ಜನರು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಆರಂಭಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಂಬಿಗಳೊಂದಿಗೆ ತೆರಳುವದು ಕಂಡು ಬಂದಿತ್ತು.ಮಲ್ಲಯ್ಯನ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಪಯಣ ಬೆಳೆಸಿದರು. ಯುಗಾದಿ ಪಾಡ್ಯದಂದು ನಡೆಯುವ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.ಈಚೆಗೆ ಪ್ರತಿ ಗ್ರಾಮದಿಂದಲೂ ಶ್ರೀಶೈಲ ಪಾದಯಾತ್ರೆ ಕಮಿಟಿ ರಚನೆಯಾಗಿದ್ದು. ಈ ಕಮೀಟಿ ನೇತೃತ್ವದಲ್ಲಿ ಜನರು ತಮ್ಮ ಪಾದಯಾತ್ರೆ ಬೆಳೆಸುತ್ತಿದ್ದಾರೆ. ಯುವಕರು, ಹಿರಿಯರು, ಕಿರಿಯರು, ಮಹಿಳೆಯರು ಒಂದಾಗಿ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ನಾಮಸ್ಮರಣೆ ಮಾಡುತ್ತಾ ಪಾದಯಾತ್ರೆ ಮಾಡುತ್ತಾರೆ. ೧೦ ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು ಏ.3 ರಂದು ಶ್ರೀಶೈಲಕ್ಕೆ ತಲುಪುತ್ತಾರೆ. ಯಗಾದಿ ಅಮವಾಸ್ಯೆ, ಪಾಡ್ಯದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ, ರಥೋತ್ಸವ, ಭ್ರಮರಾಂಬೆದೇವಿಯ ಪಡೆದು…

Read More

– ಇಲಾಹಿ ಇ ಜಮಖಂಡಿ ಚಿಮ್ಮಡ: ಬಣ್ಣ ಆಡುವುದೇ ಹೋಳಿ ಹಬ್ಬದಲ್ಲಿ ಪ್ರಧಾನ. ಅದಕ್ಕೆಂದೇ ಅದು ರಂಗಿನ ಹಬ್ಬವೆಂದು ದೇಶಾದ್ಯಂತ ಮನೆಮಾತಾಗಿದ್ದರೂ ಇಲ್ಲೊಂದು ಗ್ರಾಮದಲ್ಲಿ ಬಣ್ಣದಾಟವಿಲ್ಲದೆಯೇ ಪ್ರತೀವರ್ಷ ಹೋಳಿ ಆಚರಣೆ ನಡೆಯುತ್ತಿರುವುದು ಈ ಭಾಗದಲ್ಲಿ ವಿಶೇಷವೆನಿಸಿದೆ.ರಬಕವಿ-ಬನಹಟ್ಟಿ ತಾಲೂಕು ಚಿಮ್ಮಡ ಗ್ರಾಮದಲ್ಲಿ ಯಾವುದೇ ಬಣ್ಣ ಎರಚದೆ ಕಳೆದ ಮೂವತೈದು ವರ್ಷಗಳಿಂದ ವಿಶಿಷ್ಟ ರೀತಿಯ ಹೋಳಿ ಆಚರಣೆಗೆ ಮನೆಮಾತಾಗಿದೆ.ಹೋಳಿಹಬ್ಬ ಬಂತೆಂದರೆ ಹಳೆ ಬಟ್ಟೆ ಧರಿಸಿ ಎಲ್ಲರು ಬಣ್ಣದಾಟಕ್ಕೆ ಅಣಿಯಾಗುತ್ತಾರೆ. ಆದರೆ ಇಲ್ಲಿನ ದರ್ಜಿಗಳಿಗೆ ಹೋಳಿ ಹಬ್ಬದ ಸಮಯದಲ್ಲಿ ಹಗಲು ರಾತ್ರಿ ಕೆಲಸ. ಕಬ್ಬು ಕಡಿಯುವವರ ತಂಡಗಳು, ಆಲೆಮನೆ ತಂಡಗಳು, ಗೌಂಡಿ(ಮೇಸ್ತ್ರಿ)ಗಳ ತಂಡಗಳು, ಇಡೀ ತಂಡಕ್ಕೆ ಒಂದೇ ಬಣ್ಣದ ಬಟ್ಟೆ ಖರೀದಿಸಿ ಹೊಲಿಯಲು ಹಾಕುತ್ತಾರೆ ಹುಣ್ಣಿಮೆಯ ಮಾರನೆ ದಿನ (ಕರೀದಿನ) ಎಲ್ಲರು ಒಮ್ಮೆಗೆ ಹೊಸ ಬಟ್ಟೆ ಧರಿಸಿ ಹೋಳಿ ಹಾಡುಗಳನ್ನು ಹಾಡುತ್ತಾ ಊರು ಸುತ್ತುವುದನ್ನು ನೋಡಿದರೆ ಜನಪದ ಕಲೆ ಇನ್ನು ಜೀವಂತವಿದೆ ಅನ್ನಿಸದಿರದು.ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ದಿನ ಬಣ್ಣ ಎರಚಾಡದಂತೆ ಗ್ರಾಮ ಪಂಚಾಯತಿಯಿಂದ ಡಂಗುರ, ಧ್ವನಿವರ್ಧಕಗಳ…

Read More

ಗಬಸಾವಳಗಿ & ಬಿಸನಾಳ ಸಿಂದಗಿ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಸಿಂದಗಿ: ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಜಾಗೆ ಬಿಟ್ಟು ಕದಲುವುದಿಲ್ಲ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ, ಮನವಿಯನ್ನೂ ಸಲ್ಲಿಸಲಾಗಿದೆ, ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ ನಾಳೆಯಿಂದ ಉಪವಾಸ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಹೇಳಿದರು.ಆಲಮೇಲ ತಾಲೂಕಿಗೆ ಸೇರ್ಪಡೆಯಾದ ಗಬಸಾವಳಗಿ ಹಾಗೂ ಬಿಸಾನಾಳ ಗ್ತಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಮುಂದು ವರೆಸುವಂತೆ ಪಟ್ಟಣದ ಖಾಸಗಿ ಹೋಟಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಲೋಕಸಭೆ ಚುನಾವಣೆಯಲ್ಲಿ ನಾವ್ಯಾರೂ ಹಕ್ಕು ಚಲಾಯಿಸುವುದಿಲ್ಲ, ಹೋರಾಟ ನಿಲ್ಲಿಸುವುದಿಲ್ಲ. ಆಲಮೇಲ ಪಟ್ಟಣ ತಾಲೂಕಾಗಿ ಪರಿವರ್ತನೆಯಾಗುತ್ತಿದ್ದಂತೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಮೀಪದ ಸಿಂದಗಿಯನ್ನು ಬಿಟ್ಟು ಆಲಮೇಲ ತಾಲೂಕಿಗೆ ಸೇರಿಸಿರುವುದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಗಬಸಾವಳಗಿಯಲ್ಲಿ ಉಭಯ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನ್ಯಾಯಾಲಯ, ತಾಲೂಕು ಕಚೇರಿ ಕೆಲಸಗಳಿಗೆ ೪೦ ಕಿ.ಮೀ.ದೂರದ ಆಲಮೇಲ ಪಟ್ಟಣಕ್ಕೆ ತೆರಳಬೇಕಾಗಿದೆ. ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಯಾವುದೇ ಪ್ರಮಾಣ ಪತ್ರ…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಹೋಳಿ ಹುಣ್ಣಿಮೆ ಅಂಗವಾಗಿ ಬರದ ನಡುವೆಯೂ ಕಾಮ ದಹನ ಸಡಗರ ಸಂಭ್ರಮದಿಂದ ನಡೆಯಿತು.ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಹಲಗೆ ನಾದದೊಂದಿಗೆ ಅಲ್ಲಲ್ಲಿ ಸುತ್ತಾಡಿ ಕಟ್ಟಿಗೆ ಸಂಗ್ರಹಿಸುತ್ತಿರುವುದು ಕಂಡು ಬಂದಿತು. ಮನೆಗಳಲ್ಲಿ ಮಕ್ಕಳೊಂದಿಗೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಮನೆಯ ಮುಂದೆ ಕಾಮ ದಹನ ಮಾಡಿದರು. ಸಂಜೆ ಪಟ್ಟಣದ ವಿವಿಧ ಬಡಾವಣೆಗಳ ವಿಶಾಲ ಜಾಗೆಯಲ್ಲಿ ಕಟ್ಟಿಗೆ ಜೋಡಿಸಿ ಸುತ್ತಲೂ ರಂಗವಲ್ಲಿ ಚಿತ್ತಾರ ಬಿಡಿಸಿದರು. ಸೂರ್ಯಾಸ್ಥ ಸಮಯವಾಗುತ್ತಿದ್ದಂತೆ ಸಾಮೂಹಿಕ ಪೂಜೆ ಸಲ್ಲಿಸಿದ ನಂತರ ಕಾಮ ದಹನ ಮಾಡಲಾಯಿತು. ಕೆಲವರು ಹೋಳಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಪಟ್ಟಣದ ಸಾರಂಗಭಾವಿ ಹತ್ತಿರ ಹೋಳಿ ಹಬ್ಬದ ಹಾಡುಗಳನ್ನು ಹಾಡಿ ಸಂಭ್ರಮಿಸಲಾಯಿತು. ಹಲಗೆ ನಾದದೊಂದಿಗೆ ಕೆಲವರ ಮನೆಯ ಮುಂದೆಯೂ ಕಾಮದಹನ ಮಾಡುತ್ತಿರುವುದು ವಿವಿಧೆಡೆ ಕಂಡುಬಂದಿತು.ಪದಕಿ ಪೂಜೆ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹೋಳಿ ಹುಣ್ಣಿಮೆ ದಿನದಂದು ಮಾಡುವ ಪದಕಿ ಪೂಜೆಯನ್ನು ಕುಟುಂಬ ಸದಸ್ಯರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮಾತಂಗಿಯರನ್ನು ಮನೆಗೆ ಆಹ್ವಾನಿಸಿ ಮನೆಯ ಪಡಸಾಲೆಯಲ್ಲಿ…

Read More

ಬಸವನಬಾಗೇವಾಡಿ: ಲೋಕಸಭಾ ಚುನಾವಣೆ ಅಂಗವಾಗಿ ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ, ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಮಾ.27 ರಂದು ಸಂಜೆ 4 ಗಂಟೆಗೆ ತಾಲೂಕಿನ ಮನಗೂಳಿಯ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ಮುಖಂಡ ಶೇಖರ ಗೊಳಸಂಗಿ ಅವರ ತೋಟದ ಮನೆಯಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಸಭೆಯಲ್ಲಿ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ವಿಜಯಪುರ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು. ಈ ಸಭೆಗೆ ಮತಕ್ಷೇತ್ರದ ಎಲ್ಲ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಆಗಮಿಸಬೇಕೆಂದು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುತ್ತಿದೆ. ಇದರಿಂದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್…

Read More

ಕಲಕೇರಿ: ಸಮೀಪದ ಆಸ್ಕಿ, ಬೆಕಿನಾಳ ಹಾಗೂ ಹುಣಶ್ಯಾಳ ಕೆರೆ ನೀರು ತುಂಬಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಭೆ ಮಾಡಿ ಆಗ್ರಹಿಸಿರುವ ಹಿನ್ನೆಲೆಯಲ್ಲಿ ತಾಳಿಕೋಟಿ ತಹಶಿಲ್ದಾರರಾದ ಕೀರ್ತಿ ಚಾಲಕ ಅವರು ಬೆಕಿನಾಳ ಗ್ರಾಮಕ್ಕೆ ಬೇಟಿ ನೀಡಿ ಒಂದೆರಡು ದಿನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಮತ್ತು ಕೆರೆ ನೀರು ತುಂಬಿಸುವ ನಿಟ್ಟಿನಲ್ಲಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು,ಜೊತೆಗೆ ಇನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಒಂದು ವಾರದಲ್ಲಿ ಈ ಎಲ್ಲಾ ಕೆರೆಗಳನ್ನು ತುಂಬುವುದಾಗಿ ಭರವಸೆ ನೀಡಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಅವರು ಮಾತನಾಡಿ, ಈ ಬಾರಿ ಭೀಕರ ಬರಗಾಲದಿಂದ ಇಡೀ ರಾಜ್ಯವೇ ಹನಿ ನೀರಿಗಾಗಿ ಪರಿತಪಿಸುವಂತಾಗಿದೆ, ಈ ಭಾಗದ ಜನ ಜಾನುವಾರಗಳಿಗೆ ನೀರಿನ ಅಭಾವ ಈ ಬಾರಿ ಸಾಕಷ್ಟು ಎದ್ದು ಕಾಣುತ್ತಿದೆ, ಕೂಡಲೇ ಕೆರೆ ನೀರು ತುಂಬಿಸುವಂತಹ ಕೆಲಸ ಜಿಲ್ಲಾಡಳಿತ ಹಾಗೂ ತಾಲೂಕಾ…

Read More

ಇಂಡಿ: ನಾಲ್ಕು ದಶಕದ ಹಿಂದೆ ಪಡನೂರಿನ‌ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು. ಗ್ರಾಮದ ಖಗೋಳ ವಿಜ್ಞಾನಿ ಸುಮಾರು ೧೬ ಖಗೋಳ ಸಿದ್ಧಾಂತಗಳ ಸ್ವತಃ ಸಂಶೋಧನೆ ಮಾಡಿ, ಅವುಗಳಲ್ಲಿ ಪ್ರಖರವಾದ ಕೆಲವು ಸಿದ್ಧಾಂತಗಳನ್ನು ಸುಮಾರು ೩೬ ರಾಷ್ಟ್ಟಗಳಿಗೆ ಸಲ್ಲಿಸಿದ ಕೀರ್ತಿ ವಿಜ್ಞಾನಿ ಡಾ|| ಆರ್ ಸಿ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ, ಸಾಹಿತಿ ದಶರಥ ಕೋರಿ ಹೇಳಿದರು.ತಾಲ್ಲೂಕಿನ ಹೊಸ ಪಡನೂರ ಗ್ರಾಮದ ಸರಕಾರ ಪ್ರಾಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.ಅಮೇರಿಕಾ ದೇಶವು ಅಪೋಲೋ ನೌಕೆ ಚಂದ್ರನಲ್ಲಿಗೆ ಕಳುಹಿಸಿ, ಅಲ್ಲಿಂದ ಕಲ್ಲು-ಮಣ್ಣು ಪರೀಕ್ಷೆ ಕೊಡುವ ಮುನ್ನವೇ, ಖಗೋಳ ವಿಜ್ಞಾನಿ‌ ಡಾ|| ಆರ್ ಸಿ ಹಿರೇಮಠ ಅವರು, ಚಂದ್ರನ ನಿಕ್ಷೇಪಗಳಾದ ಕಲ್ಲು-ಮಣ್ಣಿನ್ನು ನಿಖರ ಮಾಹಿತಿಯನ್ನು ಅಮೇರಿಕ ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದರು. ಈ ಮಹತ್ವದ ಸಂಶೋಧನಾ ವರದಿಗೆ ಅಮೇರಿಕ‌ ಅಧ್ಯಕ್ಷ ಅಭಿನಂದನೆ ಸಲ್ಲಿಸಿದರು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ದೆಹಲಿಯಲ್ಲಿ ಡಾII ಆರ್ ಸಿ ಹಿರೇಮಠರವರಿಗೆ ಸನ್ಮಾನವಾಗಿತ್ತು. ಇಂತಹ…

Read More