– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಕಾಮದಹನದ ಮರುದಿನ ಉತ್ತರ ಕರ್ನಾಟಕ ಭಾಗದ ಜನರು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಆರಂಭಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಂಬಿಗಳೊಂದಿಗೆ ತೆರಳುವದು ಕಂಡು ಬಂದಿತ್ತು.
ಮಲ್ಲಯ್ಯನ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಪಯಣ ಬೆಳೆಸಿದರು. ಯುಗಾದಿ ಪಾಡ್ಯದಂದು ನಡೆಯುವ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.ಈಚೆಗೆ ಪ್ರತಿ ಗ್ರಾಮದಿಂದಲೂ ಶ್ರೀಶೈಲ ಪಾದಯಾತ್ರೆ ಕಮಿಟಿ ರಚನೆಯಾಗಿದ್ದು. ಈ ಕಮೀಟಿ ನೇತೃತ್ವದಲ್ಲಿ ಜನರು ತಮ್ಮ ಪಾದಯಾತ್ರೆ ಬೆಳೆಸುತ್ತಿದ್ದಾರೆ. ಯುವಕರು, ಹಿರಿಯರು, ಕಿರಿಯರು, ಮಹಿಳೆಯರು ಒಂದಾಗಿ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ನಾಮಸ್ಮರಣೆ ಮಾಡುತ್ತಾ ಪಾದಯಾತ್ರೆ ಮಾಡುತ್ತಾರೆ. ೧೦ ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು ಏ.3 ರಂದು ಶ್ರೀಶೈಲಕ್ಕೆ ತಲುಪುತ್ತಾರೆ. ಯಗಾದಿ ಅಮವಾಸ್ಯೆ, ಪಾಡ್ಯದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ, ರಥೋತ್ಸವ, ಭ್ರಮರಾಂಬೆದೇವಿಯ ಪಡೆದು ಧನ್ಯತೆಯಿಂದ ಪುನೀತರಾಗುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಇಂದಿಗೂ ಮಲ್ಲಯ್ಯನ ಭಕ್ತರು ಶ್ರೀಶೈಲ ಪಾದಯಾತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಪಟ್ಟಣದಿಂದಲೂ ಹಲವಾರು ಪಾದಯಾತ್ರಿಗಳು ಶ್ರೀಶೈಲಕ್ಕೆ ತೆರಳುವ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಮೂಲ ಜೀರ್ಣೋದ್ಧಾರಕ ದಿ.ಶಂಕ್ರೆಪ್ಪ ಸಿಂಹಾಸನ ಪ್ರತಿಮೆ ಸಮೀಪ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳಿಗೆ ಗುರುಸಂಗಯ್ಯ ಮಠಪತಿ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ ಸೇರಿದಂತೆ ವಿವಿಧ ಗುರುಗಳಿಂದ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಮಲ್ಲಯ್ಯನ ಕಂಬಿ ಹಾಡುಗಳನ್ನು ಭಕ್ತರು ಹಾಡಿದರು. ಮಂಗಳಾರತಿ ಆದ ನಂತರ ಕಂಬಿ ಕಟ್ಟೆಗೆ ತೆರಳಿ ಅಲ್ಲಿ ಶ್ರೀಬಸವೇಶ್ವರ ಕಾರ, ಜೀಪ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘವು ವ್ಯವಸ್ಥೆ ಮಾಡಲಾಗಿದ್ದ ಉಪಹಾರ ಪ್ರಸಾದ ಜನರು ಸ್ವೀಕರಿಸಿದರು. ಅಲ್ಲಿ ಮತ್ತೆ ಮಂಗಳಾರತಿ ಆದ ನಂತರ ಪಾದಯಾತ್ರಿಗಳಿಗೆ, ಕಂಬಿಗಳಿಗೆ ಬೀಳ್ಕೊಟ್ಟರು. ಕೆಲವರು ಹೂವಿನಹಿಪ್ಪರಗಿ ಗ್ರಾಮದವರಿಗೂ ತೆರಳಿ ಕಂಬಿಗಳಿಗೆ, ಪಾದಯಾತ್ರಿಗಳಿಗೆ ಬೀಳ್ಕೊಟ್ಟರು. ಪಾದಯಾತ್ರೆ ತೆgಳುವ ಮಾರ್ಗದಲ್ಲಿ ಪಾದಯಾತ್ರಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ದಾಸೋಹ, ವೈದ್ಯಕೀಯ ವ್ಯವಸ್ಥೆಗಾಗಿ ಸಾಮಗ್ರಿಗಳನ್ನು ಹೊತ್ತ ವಾಹನಗಳು ತೆರಳಿದವು.
ಈ ಸಂದರ್ಭದಲ್ಲಿ ಬಸವರಾಜ ಹಾರಿವಾಳ,ಸದಪ್ಪ ಅರಕೇರಿ, ಶ್ರೀಶೈಲ ಮಠಪತಿ, ಮಲ್ಲಯ್ಯ ನರಸಲಗಿಮಠ, ಬಸಪ್ಪ ಏವೂರ, ಶಿವಲಿಂಗ ಹಾರಿವಾಳ, ಬಸವಂತ ಅಡಗಿಮನಿ, ಮಹೇಶ ನಿಡಗುಂದಿ, ಎಸ್.ಎಸ್.ಬಶೆಟ್ಟಿ, ವೀರಭದ್ರಪ್ಪ ಸಂಗಮ, ರಮೇಶ ಚಿಕ್ಕೊಂಡ, ಮಹೇಶ ಜಗದಾಳೆ, ಮಲ್ಲಪ್ಪ ಕೂಡಗಿ, ಬಸವರಾಜ ಅಂಗಡಿ, ಬಾಬು ನಿಡಗುಂದಿ, ಶೇಖಪ್ಪ ಕ್ವಾಟಿ, ಮಹೇಶ ಜಗದಾಳೆ, ಮೀರಾಸಾಬ ಕೊರಬು, ಶರಣು ನಾಲತವಾಡ, ಮಹಾದೇವ ಅಂಗಡಿ,ಬಾಬು ಕುಂಟೋಜಿ, ಸಂಗಪ್ಪ ಕೂಡಗಿ, ಶಿವಪ್ಪ ಖ್ಯಾಡದ, ಸಚೀನ ಗಂಜಿಹಾಳ,ರಮೇಶ ಉಕ್ಕಲಿ, ಪಾವಡೆಪ್ಪ ಕೊಂಡಗೂಳಿ, ಸುಭಾಸ ಹಡಪದ, ಶ್ರೀಬಸವೇಶ್ವರ ಕಾರ, ಜೀಪ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಹಿರೇಮಠ, ಮುತ್ತು ಮಸೂತಿ, ಶಾಂತಪ್ಪ ತೆಲಗಿ, ಶರಣು ಮನಗೂಳಿ, ಕುಮಾರ ಪಾಟೀಲ, ಶಿವಾನಂದ ಚಿನಿವಾಲ, ಸಂಗನಗೌಡ ಪಾಟೀಲ, ಬಸು ಮಾಲಗಾರ, ರಮೇಶ ಹೆಬ್ಬಾಳ, ಲಲಿತಾ ಗಬ್ಬೂರ, ಮುದಕವ್ವ ನಾಗೂರ, ಮಹಾದೇವಿ ಹಾರಿವಾಳ, ಗಂಗಾಬಾಯಿ ಬಾಗೇವಾಡಿ, ಸಾವಿತ್ರಿ ಬ್ಯಾಳಿ, ಸುವರ್ಣ ಕೂಡಗಿ, ಸವಿತಾ ಮಠಪತಿ, ರೇಣುಕಾ ಮಸಬಿನಾಳ, ಅಶ್ವಿನ ಹಾರಿವಾಳ, ಅಂಜಕ್ಕ ಗಬ್ಬೂರ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

