ಕಲಕೇರಿ: ಸಮೀಪದ ಆಸ್ಕಿ, ಬೆಕಿನಾಳ ಹಾಗೂ ಹುಣಶ್ಯಾಳ ಕೆರೆ ನೀರು ತುಂಬಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಭೆ ಮಾಡಿ ಆಗ್ರಹಿಸಿರುವ ಹಿನ್ನೆಲೆಯಲ್ಲಿ ತಾಳಿಕೋಟಿ ತಹಶಿಲ್ದಾರರಾದ ಕೀರ್ತಿ ಚಾಲಕ ಅವರು ಬೆಕಿನಾಳ ಗ್ರಾಮಕ್ಕೆ ಬೇಟಿ ನೀಡಿ ಒಂದೆರಡು ದಿನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಮತ್ತು ಕೆರೆ ನೀರು ತುಂಬಿಸುವ ನಿಟ್ಟಿನಲ್ಲಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು,
ಜೊತೆಗೆ ಇನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಒಂದು ವಾರದಲ್ಲಿ ಈ ಎಲ್ಲಾ ಕೆರೆಗಳನ್ನು ತುಂಬುವುದಾಗಿ ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಅವರು ಮಾತನಾಡಿ, ಈ ಬಾರಿ ಭೀಕರ ಬರಗಾಲದಿಂದ ಇಡೀ ರಾಜ್ಯವೇ ಹನಿ ನೀರಿಗಾಗಿ ಪರಿತಪಿಸುವಂತಾಗಿದೆ, ಈ ಭಾಗದ ಜನ ಜಾನುವಾರಗಳಿಗೆ ನೀರಿನ ಅಭಾವ ಈ ಬಾರಿ ಸಾಕಷ್ಟು ಎದ್ದು ಕಾಣುತ್ತಿದೆ, ಕೂಡಲೇ ಕೆರೆ ನೀರು ತುಂಬಿಸುವಂತಹ ಕೆಲಸ ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಮಾಡಬೇಕು, ನಿಮ್ಮ ಮಾತಿಗೆ ಗೌರವ ಕೊಟ್ಟು ಇನ್ನು ಒಂದು ವಾರ ಕಾಯುತ್ತೇವೆ, ನೀರು ಬರದಿದ್ದ ಪಕ್ಷದಲ್ಲಿ ರೈತ ಸಂಘದಿಂದ ಕೆರೆಯಲ್ಲಿಯೇ ಕುಳಿತು ನೀರು ಬರುವವರೆಗೂ ಹೋರಾಟ ಮಾಡಲಾಗುವದು ಎಂದರು.
ಇದೇ ವೇಳೆ ಬೆಕಿನಾಳ, ವಣಿಕಿಹಾಳ, ತುರಕುನಗೇರಿ, ಬೂದಿಹಾಳ ಪಿ.ಟಿ, ಹಾಳ ಗುಂಡಕನಾಳ, ಬನ್ನೆಟ್ಟಿ ಪಿ.ಟಿ, ಜಲಪೂರ ಗ್ರಮಗಳಿಗೆ ೩-೪ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಬೆಕಿನಾಳ ಗ್ರಾ.ಪಂ ಅಧ್ಯಕ್ಷರಾದ ಭಾಗ್ಯಶ್ರೀ ರವೀಂದ್ರ ಸುಧಾಕರ ಅವರು ತಹಶಿಲ್ದಾರರ ಅವರಿಗೆ ಮನವಿ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ, ಎ.ಇ, ಹಾಗೂ ಎಇಇ, ಗ್ರಾ.ಪಂ ಸದಸ್ಯರಾದ ಶ್ರೀಶೈಲ ಸಜ್ಜನ, ಮರಲಿಂಗಪ್ಪ ನಾಟಿಕಾರ, ಚಂದುಗೌಡ ಪಾಟೀಲ, ಮಲ್ಲಪ್ಪ ತಿಪ್ಪನೆಟ್ಟಿ, ಭೀಮಣ್ಣ ಧರಿ, ರುದ್ರಸ್ವಾಮಿ ಮಳ್ಳಿ, ರಸೂಲಸಾಬ ಮಳ್ಳಿ, ಹುಸೇನಸಾಬ ಆಲಗೂರ, ಹುಸೇನಸಾಬ ತುರಕನಗೇರಿ, ಮುಖಂಡರಾದ ಮಲ್ಲಿಕಾರ್ಜುನ ಮಠ, ಬಾಪುಗೌಡ ಕರಕಳ್ಳಿ, ಅಪ್ಪಾಸಾಹೇಬ ಸಜ್ಜನ, ರವೀಂದ್ರ ಸುಧಾಕರ, ಬಾಬು ತಾಳಿಕೋಟಿ, ಹಸನ ಹಳ್ಳದಮನಿ, ದೇವಿಂದ್ರಪ್ಪ ಸುಣದಳ್ಳಿ, ದೇವಿಂದ್ರಪ್ಪಗೌಡ ಪಾಟೀಲ, ದೊಡಪ್ಪ ಪೂಜಾರಿ, ಸೇರಿದಂತೆ ನೂರಾರು ಮಹಿಳೆಯರು ಇದ್ದರು.
Subscribe to Updates
Get the latest creative news from FooBar about art, design and business.
ಬೆಕಿನಾಳ ನೀರಿನ ಸಮಸ್ಯೆ ಶೀಘ್ರ ಇತ್ಯರ್ಥ :ತಹಶಿಲ್ದಾರ ಕೀರ್ತಿ
Related Posts
Add A Comment

