ವಿಜಯಪುರ: ನಗರದಲ್ಲಿ ಎಸ್.ಬಿ.ಗ್ರೂಫ್ ವತಿಯಿಂದ ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಗ್ರುಫ್ ಸದಸ್ಯರು ಪೂರ್ವಯೋಜಿತವಾಗಿ ತಯಾರಿ ಮಾಡಿಕೊಂಡ ಬಣವನ್ನು ಗೆಳೆಯರ ಮನೆಗೆ ಹೋಗಿ ಬಣ್ಣ ಹಂಚುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಗ್ರುಫ್‌ನ ಅಧ್ಯಕ್ಷ ಶರಣು ಬಿ. ಬ್ಯಾಳಿ ಮಾತನಾಡಿ, ಧರ್ಮದ ಕಟ್ಟುಪಾಡುಗಳನ್ನು ಮೀರಿ ಎಲ್ಲರೂ ಹಿಗ್ಗಿನಿಂದ ಆಚರಿಸುವ ಹಬ್ಬ- ಹೋಳಿ, ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯುವಂತಾಗಲಿ , ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟು , ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶ. ಹಬ್ಬ ಯಾವುದೇ ಇರಲಿ ಮೋಜು, ಮಸ್ತಿ , ಸಂಭ್ರಮಕ್ಕೆ ಕೊರತೆ ಇರಬಾರದು ಅನ್ನೋದು ಎಲ್ಲರ ಅಂಬೋಣ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಗತ್ತಿನ ಏಕೈಕ ದೇಶ ನಮ್ಮದು, ಹೋಳಿ ಹುಣ್ಣಿಮೆಯಿಂದ ರಂಗಪಂಚಮಿಯವರೆಗೆ ಐದು ದಿನಗಳ ಕಾಲ ಭರ್ಜರಿ ಸಂಭ್ರಮ , ಸಡಗರ, ಗೌಜಿ, ಗದ್ದಲ ತುಂಬಿದ ಭರಪೂರ ಆಚರಣೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಐದು ದಿನವೂ ಅದ್ಧೂರಿ ತಯಾರಿ, ಆಡಂಬರ, ಸಂಭ್ರಮ ಮನೆ ಮಾಡಿರುತ್ತದೆ. ಹಿಂದೆಲ್ಲಾ ಹೊಲ ಹಬ್ಬದಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದ ಮಕ್ಕಳು ಆಕಾಶದಲ್ಲಿ ಹಾರಾಡುವ ಉಮೇದಿಯಲ್ಲಿರುತ್ತಿದ್ದರು. ಇದರಿಂದ ಮಕ್ಕಳಿಗೆ ಹಬ್ಬಗಳ ಮಹತ್ವ ಇರಲಿ. ಅಕ್ಕಪಕ್ಕದ ಕಾಲೋನಿಗಳಿಗೂ ತೆರಳಿ ಅಲ್ಲಿರುವ ಪರಿಚಿತರಿಗೂ ಬಣ್ಣ ಎರಚಿ , ಹೋಳಿಯ ಶುಭಾಷಯ ವಿನಿಮಯ ಮಾಡಿಕೊಂಡು ಹರ್ಷಿಸುತ್ತಾರೆ. ಹೀಗೆ ಎಲ್ಲರೂ ಹರ್ಷದಿಂದ ಸಂತೋಷದಿಂದ ಹೋಳಿ ಹಬ್ಬವನ್ನು ಎಲ್ಲ ಗೆಳೆಯರೊಂದಿಗೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಣಮಂತ ಬಿರಾದಾರ, ಅನೀಲ ಸಾಗರ, ಪ್ರಕಾಶ ನಡುವಿನಕೇರಿ, ಅರವಿಂದ ಕುಮಾರ ಹುಡಿಮನಿ, ನಾಗರಾಜ ಸಿ.ಎಮ್.ವಿಠ್ಠಲ ಕೂಡಗಿ, ಸುನೀಲ ದೇವರಮನಿ, ವಿನೋದ ಕೂಳೂರಗಿ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

