ಚಿಮ್ಮಡ: ಹೋಳಿ ಹಬ್ಬದ ನಿಮಿತ್ಯ ನಡೆಯುವ ಕಾಮದಹಣದ ಸಂಭ್ರಮಕ್ಕಾಗಿ ಸಂಗ್ರಹಿಸಲಾಗುವ ಸೌದೆ, ಕಟ್ಟಿಗೆಯ ಜೊತೆಗೆ ಉಪಯುಕ್ತ ವಸ್ತುಗಳನ್ನು ಎತ್ತಿಕೊಂಡು ಬಂದು ಗುಡ್ಡೆಹಾಕಿ ದಹಿಸುವುದರಿಂದ ಲಕ್ಷಾಂತರ ರೂ. ಬೆಲೆಬಾಳುವ ಅಮೂಲ್ಯ ವಸ್ತುಗಳು ಸುಟ್ಟು ಕರಕಲಾಗುತ್ತಿರುವ ಪರಿಣಾಮ ಅವುಗಳನ್ನು ಕಳೆದುಕೊಂಡವರು ಪರಿತಪಿಸುವಂತಾಗಿದೆ.
ಕಾಮನ ಹಬ್ಬದ ಪ್ರತೀತಿಯಂತೆ ರೈತರ ಮನೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಕಟ್ಟಿಗೆಯ ವಸ್ತುಗಳು, ಗದ್ದೆಯಲ್ಲಿ ದೊರೆಯುವ ನಿರುಪಯೋಗಿ ಸೌದೆಗಳನ್ನು ಮನೆಯ ಮಾಲೀಕನಿಂದ ಪಡೆದು ಅವುಗಳನ್ನು ಸಂಗ್ರಹಿಸಿ ದಹಿಸಬೇಕು ಆದರೆ ಇಲ್ಲಿ ಸಾವಿರಾರು ರೂ ಬೆಲೆಬಾಳುವ ತೊಲೆಗಳು, ನಾಟುಗಳು, ಏಣಿ, ಮನೆಯ ಚೌಕಟ್ಟು, ಕುರ್ಚಿ, ಟೈರು ಸೇರಿದಂತೆ ಹಲವಾರು ಉಪಯುಕ್ತ ವಸ್ತುಗಳು ಮಾತ್ರವಲ್ಲದೇ ಮಗಳ ಬಾನಂತನಕ್ಕಾಗಿ ತಾಯಿ ಸಂಗ್ರಹಿಸಿಟ್ಟಿದ್ದ ಕುಳ್ಳು (ಸಗಣಿಯ ಬೆರಣಿ)ಗಳನ್ನು ಸಹ ರಾತ್ರಿ ವೇಳೆಯಲ್ಲಿ ಎತ್ತಿಕೊಂಡು ಬಂದು ದಹಿಸಲು ಗುಡ್ಡೆ ಹಾಕಲಾಗಿದ್ದು ಇದರಿಂದ ವಸ್ತುಗಳನ್ನು ಕಳೆದುಕೊಂಡವರು ಮಮ್ಮಲ ಮರಗುವಂತಾಗಿದೆ. ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

