Author: editor.udayarashmi@gmail.com

ದೇವರಹಿಪ್ಪರಗಿ: ಪಟ್ಟಣದಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕಾಮದಹನ ಹಾಗೂ ಬಣ್ಣದಾಟ ಜರುಗಿದವು.ಹೋಳಿ ಹಬ್ಬದ ಅಂಗವಾಗಿ ಭಾನುವಾರ ಸಾಂಪ್ರದಾಯಿಕ ಕಾಮದಾಹನದ ಅಂಗವಾಗಿ ವಿವಿಧ ಬಡಾವಣೆ, ಓಣಿಗಳಲ್ಲಿ ಕಾಮದಹನದ ಸ್ಥಳವನ್ನು ರಂಗೋಲಿಯ ಮೂಲಕ ಚಿತ್ತಾರ ಮೂಡಿಸಿ ಅಲಂಕರಣಗೊಳಿಸಲಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ಪೂಜೆ ಸಲ್ಲಿಸಿ ನಂತರ ವಿವಿಧ ಮನೆಗಳಿಂದ ಬಂದ ನೈವಿಧ್ಯವನ್ನು ಕಟ್ಟಿಗೆಯ ರಾಶಿಯಡಿ ಇಟ್ಟು ನಂತರ ದಹನ ಮಾಡಲಾಯಿತು. ಸೋಮವಾರ ಬೆಳಿಗ್ಗೆ ಮಹಿಳೆಯರು ಕಾಮದಹನದ ಬೆಂಕಿಯನ್ನು ಮನೆಮನೆಗೆ ಕೊಂಡೊಯ್ದು ಸಂಪ್ರದಾಯ ಪಾಲನೆ ಮಾಡಿದರು. ಇನ್ನೂ ಕೆಲವರು ಕಡಲೆ ಹಾಗೂ ಗೆಣಸುಗಳನ್ನು ತಂದು ಕಾಮದಹನದ ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಹಂಚಿದರು.ಮಕ್ಕಳು ಸೋಮವಾರ ಬೆಳಗಾಗುತ್ತಿದ್ದಂತೆಯೇ ಪಿಚಕಾರಿ, ಬಾಟಲಿಗಳ ಮೂಲಕ ಬಣ್ಣದಾಟ ಆರಂಭಿಸಿದರು.ಹೋಳಿ ಹುಣ್ಣಿಮೆಯ ರಂಗೀನಾಟದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ವಾರದಸಂತೆ ಜರುಗುತ್ತಿರುವ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ಮನೆ ಹಾಗೂ ಓಣಿಗಳಲ್ಲಿ ಎಲ್ಲರೂ ಆಡುತ್ತಿದ್ದ ಬಣ್ಣದ ರಂಗು ಈ ಬಾರಿ ಅಷ್ಟಾಗಿ ಕಂಡು ಬರಲಿಲ್ಲ.ಚಿಕ್ಕಮಕ್ಕಳು ಮಾತ್ರ ತಮ್ಮ ಸ್ನೇಹಿತರಿಗೆ ಬಣ್ಣ ಬಳಿದು ಸಂಭ್ರಮಿಸುವುದರಲ್ಲಿ ನಿರತರಾಗಿದ್ದರು.…

Read More

ವಿಜಯಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್ ರಿಪೇರಿ & ಸೇವೆ ಕುರಿತ ೩೦ ದಿನಗಳ ಉಚಿತ ತರಬೇತಿಯು ಮೇ ೮ ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.ಆಸಕ್ತರು ೧೮ ರಿಂದ ೪೫ ವಷÀð ವಯೋಮಾನದವರಾಗಿದ್ದು, ಕನ್ನಡ ಭಾಷೆೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಏಪ್ರಿಲ್ ೩೦ ಕೊನೆಯ ದಿನವಾಗಿದೆತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: ೯೭೪೦೯೮೨೫೮೫,…

Read More

ವಿಜಯಪುರ: ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಯಂಗ್ ಪ್ರೋಪೇಶಿಯನಲ್-೨ ತಾತ್ಕಾಲಿಕ ಹುದ್ದೆಗೆ ಮಾ.೨೮ರಂದು ಬೆಳಗ್ಗೆ ೧೦.೩೦ಕ್ಕೆ ಜೆನೆಟಿಕ್ ಮತ್ತು ಪ್ಲಾಂಟ್ ಬ್ರಿಡಿಂಗ್ ವಿಷಯದಲ್ಲಿ ಕೃಷಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಕರೆಯಲಾಗಿದ್ದ ನೇರ ಸಂದರ್ಶನವನ್ನು ಅನಿವಾರ್ಯ ಕಾರಣಗಳಿಂದ ಮೂಂದುಡಲಾಗಿದೆ ಎಂದು ಕೃಷಿ ಮಾಹಾವಿದ್ಯಾನಿಲಯದ ವಿದ್ಯಾಧಿಕಾರಿ ಡಾ. ಭೀಮಪ್ಪ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ(ಕೈವಾರ ತಾತಯ್ಯ)ಯನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಶ್ರೀ ಯೋಗಿ ನಾರೇಯಣ ಯತೀಂದ್ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಜಯಂತಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಡಾ.ಅಶೋಕ ಲಿಮಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಾದ ಅಯ್ಯುಬ ದ್ರಾಕ್ಷಿ, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Read More

ವಿಜಯಪುರ: ಚೇತನ ಫೌಂಢೇಶನ್ ಕರ್ನಾಟಕ ಇವರ ವತಿಯಿಂದ ಧಾರವಾಡದ ರಂಗಾಯಣ ಭವನದಲ್ಲಿ ನಡೆದ ಚಲನಚಿತ್ರೋತ್ಸವ ಸಮಾರಂಭದಲ್ಲಿ ರವಿವಾರ ೨೪ ಮಾರ್ಚ ೨೦೩೪ ರಂದು ಪ್ರೊ. ಸಿದ್ದು ಸಾವಳಸಂಗ ಇವರಿಗೆ ಪ್ರತಿಷ್ಠಿತ “ರಾಜರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು. ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿರುವ ಇವರು ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ಚೇತನ ಪೌಂಢೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಹಾಗೂ ಮತ್ತಿತರ ವ್ಯಕ್ತಿಗಳು ಹಾಜರಿದ್ದರು.

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ. ಎಚ್.ಕೆ, ಬೆಂಗಳೂರು ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು. ಸ್ಥಳೀಯ ಹವಾಮಾನ ಮತ್ತು ಅವರವರ ಆರ್ಥಿಕ ಪರಿಸ್ಥಿತಿ ಅವಲಂಬಿಸಿ ಇದನ್ನು ನಿರ್ಮಿಸಲಾಗುತ್ತಿತ್ತು. ಎಲ್ಲೋ ಅಪರೂಪಕ್ಕೆ ಎಂಬಂತೆ ಶ್ರೀಮಂತರ ವಿಶಾಲ ಮನೆಗಳು, ಕಲ್ಲಿನ ದೊಡ್ಡ ಕಟ್ಟಡಗಳು ಕಾಣುತ್ತಿದ್ದವು. ಬ್ಯಾಂಕು, ಆಸ್ಪತ್ರೆ, ಅಂಚೆ ಕಚೇರಿ, ನಾಡ ಕಚೇರಿಗಳು, ಆರಕ್ಷಕ ಠಾಣೆಗಳು ಸಹ ಬಹುತೇಕ ಇದೇ ಮಾದರಿಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಎಲ್ಲಾ ಹಳ್ಳಿಯಲ್ಲಿಯೂ ಸಾಮಾನ್ಯವಾಗಿ ನಾಯಿ, ಕುರಿ, ಕೋಳಿ, ಹಂದಿ, ಹಸು, ಎಮ್ಮೆ, ಹಾವು, ಚೇಳುಗಳು, ಕೆರೆ ಕುಂಟೆಗಳು, ಹಳೆಯ ಬಾವಿಗಳು, ದೇವಸ್ಥಾಗಳು, ಒಂದಿಬ್ಬರು ಹುಚ್ಚರು, ಚಿಕ್ಕ ಮಕ್ಕಳ ಗೋಲಿ ಬುಗುರಿ ಆಟದ ಕಲರವ, ಅಜ್ಜ ಅಜ್ಜಿಯರ ಕೆಮ್ಮು, ಗಾಂಧಿ ಟೋಪಿಯವರು, ಎತ್ತಿನ ಗಾಡಿಗಳು, ಚಿಕ್ಕ ಪುಟ್ಟ…

Read More

ಢವಳಗಿ: ಇತ್ತೀಚಿನ ದಿನಗಳಲ್ಲಿ ಎತ್ತುಗಳನ್ನು ಕಟ್ಟಿ ರೆಂಟೆ-ಕುಂಟೆಯನ್ನು ಹೊಡೆಯುವ ರೈತರು ಕಡಿಮೆಯಾಗಿ ಯಂತ್ರ ತಂತ್ರಜ್ಞಾನದ ಬಳಕೆ ರೈತರು ಹೆಚ್ಚಾಗಿದ್ದಾರೆ. ಅಂತಹದರಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.23 ರಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯನ್ನು ಏರ್ಪಡಿಸಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ತುಂಬುವ ಕಾರ್ಯ ಮಾಡಿದ್ದಾರೆ.ತರಬಂಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಒಂದು ಮೋಟರ್ ಬೈಕ್ ಸೇರಿದಂತೆ ಸುಮಾರು ಹತ್ತು ಬಹುಮಾನಗಳು ಇದ್ದ ಕಾರಣಕ್ಕಾಗಿ ಮಹಾರಾಷ್ಟ್ರ ರಾಜ್ಯ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಯ ಎತ್ತುಗಳು ಸೇರಿದಂತೆ ಸುಮಾರು 33 ಜೋಡಿ ಎತ್ತುಗಳು ಹೆಸರನ್ನು ನೊಂದಾಯಿಸಿದ್ದರು. ಅದರಲ್ಲಿ ಗಜಗಾತ್ರದ ಎತ್ತುಗಳು ಸುಮಾರು ಇಪ್ಪತ್ತೈದು ಜೋಡಿ ಎತ್ತಗಳು ತರಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯನ್ನು ನೋಡಲು ಢವಳಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮದ ರೈತಾಪಿ ಜನರು ಭಾಗವಹಿಸಿದ್ದರು. ನೋಡುಗರು ನೆಲದ ಮೇಲೆ ಅಷ್ಟೇ ಅಲ್ಲದೆ ಪಕ್ಕದಲ್ಲಿ ಇದ್ದ ಬೇವಿನ ಮರವೇರಿ ಕುಳಿತು ತರಬಂಡಿ ರೋಚಕ ಸ್ಪರ್ಧೆಯನ್ನು ವೀಕ್ಷಿಸಿದರು.ರೂಡಗಿ ಗ್ರಾಮದ…

Read More

ಕಲಕೇರಿ: ಈ ಜಗತ್ತಿನಲ್ಲಿ ಅನ್ನಕ್ಕೆ ಬಹುದೊಡ್ಡ ಬೆಲೆ ಇದೆ, ಈರುವೆ ೮೪ ಕೋಟಿ ಜೀವರಾಶಿಗೂ ಅನ್ನ ನೀಡುವ ಏಕೈಕ ಜೀವಿ ರೈತ, ಆದರೆ ಅನ್ನವನ್ನು ಬೆಳೆಯುವ ಅನ್ನದಾತನ ಪರಿಸ್ಥಿತಿ ಮಾತ್ರ ಒಂದು ಬಿಡಿಕಾಸಿಗೂ ಬೆಲೆ ಇಲ್ಲದಂತಾಗಿದೆ, ಇಂದಿನ ದಿನಮಾನಗಳಲ್ಲಿ ರೈತರಿಗೆ ಹೆಣ್ಣು ಸಿಗದಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ, ಆದರೆ ನಿಜವಾಗಿಯೂ ಯಾವುದೇ ಫಲಾಪೇಕ್ಷೇ ಇಲ್ಲದೇ, ಯಾವುದೇ ಸಂಬಳ, ಬಹುಮಾನಗಳಿಗೆ ತಲೆ ಕೆಡೆಸಿಕೊಳ್ಳದೇ ದಿನನಿತ್ಯ ಕಾಯಕ ಮಾಡುವ ಏಕೈಕ ಜೀವಿ ಅನ್ನದಾತ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದೇವರಹಿಪ್ಪರಗಿ ತಾಲುಕಾ ಉಪಾಧ್ಯಕ್ಷ ಚಂದ್ರಕಾಂತ ಪ್ಯಾಠಿ ಹೇಳಿದರು.ಸ್ಥಳೀಯ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ನಡೆದ ತಿಂಗಳ ಪರ್ಯಂತ ನಡೆಯುತ್ತಿರುವ ಸಜ್ಜಲಗುಡ್ಡದ ಶರಣಮ್ಮನವರ ಪುರಾಣದ ನಿಮಿತ್ಯ ಪ್ರತಿ ರವಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಋಷಿ-ಕೃಷಿ ಎಂಭ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ದಿನ ಬೆಳಗಾದರೆ ಚಾಚು ತಪ್ಪದೇ ಬೆಳಂಬೆಳಿಗ್ಗೆ ಹೊಲಕ್ಕೆ ಹೋಗುವ ರೈತರನ್ನು ಕಂಡರೆ ತಕ್ಷಣದಲ್ಲಿ ಕೈಮುಗಿಯಿರಿ ಎಂದರು, ಯಾಕೆಂದರೆ ರೈತನ ಪರಿಶ್ರಮ ಇದ್ದಾಗ…

Read More

ಇಂಡಿ: ಪಟ್ಟಣದ ಪ್ರಾಣ ಸ್ನೇಹಿತರ ಗೆಳೆಯರ ಬಳಗ ಭಾನುವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗಿಡಮರಗಳಲ್ಲಿ ನೀರಿನ ಅರವಟಿಗೆಗಳನ್ನು ಇಟ್ಟು ಪಕ್ಷಿ ಸಂಕುಲಕ್ಕೆ ನೆರವಾದರು. ತಾಲ್ಲೂಕಿನಲ್ಲಿ ಬೀಕರ ಬರಗಾಲವಿದ್ದು, ಹಳ್ಳ, ಕೊಳ್ಳ, ಕೆರೆ, ಕಟ್ಟೆ, ಕಾಲುವೆಗಳಲ್ಲಿ ಒಂದು ಹನಿ ಕೂಡಾ ನೀರಿಲ್ಲ. ಇದನ್ನು ಅರಿತುಕೊಂಡು ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿ ಎಂದು ಗಿಡಮರಗಳಲ್ಲಿ ನೀರಿನ ಅರವಟಿಗೆ ಇಡುವ ಕಾರ್ಯ ಕೈಕೊಂಡಿದ್ದಾರೆ.ಈ ಕಾರ್ಯದಲ್ಲಿ ಅವಿನಾಶ ಬಗಲಿ, ಶಿವಕುಮಾರ ಬಿಸನಾಳ, ಶಿವು ಬಡಿಗೇರ, ಸುಧೀರ ಕರಿಕಟ್ಟಿ, ಸಂಕೇತ ಜ್ಯೋಶಿ, ಪರಶುರಾಮ ಚೋಪಡೆ, ಕಿರಣ ಕ್ಷತ್ರಿ, ಮಹಾದೇವ ಹದಗಲ್ಲ, ರಮೇಶ ಗೋಳಸಾರ ಉಪಸ್ಥಿತರಿದ್ದರು.

Read More

ಇಂಡಿ: ಜೋಡೆತ್ತುಗಳನ್ನು ಹೊಂದಿರುವ ಕಂಬಿ ಮಲ್ಲಯ್ಯನು ಗ್ರಾಮಗಳ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ. ಗ್ರಾಮಗಳಲ್ಲಿ ಸದಾ ಜೋಡೆತ್ತಿನ ಕೃಷಿ ಉಳಿಯಬೇಕು ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಕಂಬಿ ಮಲ್ಲಯ್ಯನ ಪೂಜೆಯ ಸಂಪ್ರದಾಯವನ್ನು ಜಾರಿಗೆ ತಂದಿದ್ದಾರೆ ಎಂದು ಅಭೀ ಪೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.ಅವರು ಭಾನುವಾರ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಜೋಡೆತ್ತಿನ ಕೃಷಿ ಮತ್ತು ಮಣ್ಣು ಉಳಿಸಲು ಮುಂದಾದ ರೈತ ಮಿತ್ರ ಸ್ವಯಂ ಸೇವಕರ ತಂಡವು ವಿಜಯಪೂರ ಜಿಲ್ಲೆಯ ೪೦ ಗ್ರಾಮಗಳಲ್ಲಿರುವ ಕಂಬಿ ಮಲ್ಲಯ್ಯನ ದರ್ಶನ ಮಾಡಿ, ಆ ಎಲ್ಲಾ ಗ್ರಾಮಗಳಲ್ಲಿ ರೈತ ಜಾಗೃತಿ ಮಾಡಿ, ಪ್ರತೀ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾಗಲು ಸಂಕಲ್ಪ ಮಾಡುವ ಉದ್ದೇಶದಿಂದ ಭಾನುವಾರ ಸಾಲೋಟಗಿ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಕಂಬಿ ಮಲ್ಲಯ್ಯನ ದರ್ಶನ ಪಡೆದುಕೊಂಡು ಮಾತನಾಡಿದರು.ವರ್ಷಪೂರ್ತಿ ರೈತನಿಗೆ ಹೆಗಲು ನೀಡುವ ಜೋಡೆತ್ತುಗಳ ಭಾವೈಕ್ಯದ ಸಂಕೇತವಾದ ಎತ್ತುಗಳ ಮೂರ್ತಿಗಳನ್ನು ಹೊತ್ತಿರುವ ಕಂಬಿ ಮಲ್ಲಯ್ಯನಿಗೆ ರೈತ ಭಕ್ತರು…

Read More