ದೇವರಹಿಪ್ಪರಗಿ: ಪಟ್ಟಣದಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕಾಮದಹನ ಹಾಗೂ ಬಣ್ಣದಾಟ ಜರುಗಿದವು.
ಹೋಳಿ ಹಬ್ಬದ ಅಂಗವಾಗಿ ಭಾನುವಾರ ಸಾಂಪ್ರದಾಯಿಕ ಕಾಮದಾಹನದ ಅಂಗವಾಗಿ ವಿವಿಧ ಬಡಾವಣೆ, ಓಣಿಗಳಲ್ಲಿ ಕಾಮದಹನದ ಸ್ಥಳವನ್ನು ರಂಗೋಲಿಯ ಮೂಲಕ ಚಿತ್ತಾರ ಮೂಡಿಸಿ ಅಲಂಕರಣಗೊಳಿಸಲಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ಪೂಜೆ ಸಲ್ಲಿಸಿ ನಂತರ ವಿವಿಧ ಮನೆಗಳಿಂದ ಬಂದ ನೈವಿಧ್ಯವನ್ನು ಕಟ್ಟಿಗೆಯ ರಾಶಿಯಡಿ ಇಟ್ಟು ನಂತರ ದಹನ ಮಾಡಲಾಯಿತು. ಸೋಮವಾರ ಬೆಳಿಗ್ಗೆ ಮಹಿಳೆಯರು ಕಾಮದಹನದ ಬೆಂಕಿಯನ್ನು ಮನೆಮನೆಗೆ ಕೊಂಡೊಯ್ದು ಸಂಪ್ರದಾಯ ಪಾಲನೆ ಮಾಡಿದರು. ಇನ್ನೂ ಕೆಲವರು ಕಡಲೆ ಹಾಗೂ ಗೆಣಸುಗಳನ್ನು ತಂದು ಕಾಮದಹನದ ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಹಂಚಿದರು.
ಮಕ್ಕಳು ಸೋಮವಾರ ಬೆಳಗಾಗುತ್ತಿದ್ದಂತೆಯೇ ಪಿಚಕಾರಿ, ಬಾಟಲಿಗಳ ಮೂಲಕ ಬಣ್ಣದಾಟ ಆರಂಭಿಸಿದರು.
ಹೋಳಿ ಹುಣ್ಣಿಮೆಯ ರಂಗೀನಾಟದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ವಾರದಸಂತೆ ಜರುಗುತ್ತಿರುವ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ಮನೆ ಹಾಗೂ ಓಣಿಗಳಲ್ಲಿ ಎಲ್ಲರೂ ಆಡುತ್ತಿದ್ದ ಬಣ್ಣದ ರಂಗು ಈ ಬಾರಿ ಅಷ್ಟಾಗಿ ಕಂಡು ಬರಲಿಲ್ಲ.
ಚಿಕ್ಕಮಕ್ಕಳು ಮಾತ್ರ ತಮ್ಮ ಸ್ನೇಹಿತರಿಗೆ ಬಣ್ಣ ಬಳಿದು ಸಂಭ್ರಮಿಸುವುದರಲ್ಲಿ ನಿರತರಾಗಿದ್ದರು. ಕೆಲವು ಕಡೆ ಮಾತ್ರ ಯುವಕರು ಬೈಕ್ ಗಳ ಮೂಲಕ ಗೆಳೆಯರೊಂದಿಗೆ ಆಪ್ತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ನಂತರ ಮಧ್ಯಾನ್ಹದ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಮನೆ ಸೇರಿದರು.
ಪಟ್ಟಣದಾದ್ಯಂತ ಮೊದಲೆಲ್ಲಾ ನಡೆಯುತ್ತಿದ್ದ ಅಣುಕು ಶವಯಾತ್ರೆ ಈ ಬಾರಿ ಎಲ್ಲಿಯೂ ಕಂಡು ಬರಲಿಲ್ಲ. ಸಾಯಂಕಾಲವರೆಗೆ ಜರುಗುತ್ತಿದ್ದ ಬಣ್ಣದಾಟ ಈ ಬಾರಿ ಮಧ್ಯಾನ್ಹವೇ ಕೊನೆಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

