ಕಲಕೇರಿ: ಈ ಜಗತ್ತಿನಲ್ಲಿ ಅನ್ನಕ್ಕೆ ಬಹುದೊಡ್ಡ ಬೆಲೆ ಇದೆ, ಈರುವೆ ೮೪ ಕೋಟಿ ಜೀವರಾಶಿಗೂ ಅನ್ನ ನೀಡುವ ಏಕೈಕ ಜೀವಿ ರೈತ, ಆದರೆ ಅನ್ನವನ್ನು ಬೆಳೆಯುವ ಅನ್ನದಾತನ ಪರಿಸ್ಥಿತಿ ಮಾತ್ರ ಒಂದು ಬಿಡಿಕಾಸಿಗೂ ಬೆಲೆ ಇಲ್ಲದಂತಾಗಿದೆ, ಇಂದಿನ ದಿನಮಾನಗಳಲ್ಲಿ ರೈತರಿಗೆ ಹೆಣ್ಣು ಸಿಗದಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ, ಆದರೆ ನಿಜವಾಗಿಯೂ ಯಾವುದೇ ಫಲಾಪೇಕ್ಷೇ ಇಲ್ಲದೇ, ಯಾವುದೇ ಸಂಬಳ, ಬಹುಮಾನಗಳಿಗೆ ತಲೆ ಕೆಡೆಸಿಕೊಳ್ಳದೇ ದಿನನಿತ್ಯ ಕಾಯಕ ಮಾಡುವ ಏಕೈಕ ಜೀವಿ ಅನ್ನದಾತ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದೇವರಹಿಪ್ಪರಗಿ ತಾಲುಕಾ ಉಪಾಧ್ಯಕ್ಷ ಚಂದ್ರಕಾಂತ ಪ್ಯಾಠಿ ಹೇಳಿದರು.
ಸ್ಥಳೀಯ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ನಡೆದ ತಿಂಗಳ ಪರ್ಯಂತ ನಡೆಯುತ್ತಿರುವ ಸಜ್ಜಲಗುಡ್ಡದ ಶರಣಮ್ಮನವರ ಪುರಾಣದ ನಿಮಿತ್ಯ ಪ್ರತಿ ರವಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಋಷಿ-ಕೃಷಿ ಎಂಭ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿನ ಬೆಳಗಾದರೆ ಚಾಚು ತಪ್ಪದೇ ಬೆಳಂಬೆಳಿಗ್ಗೆ ಹೊಲಕ್ಕೆ ಹೋಗುವ ರೈತರನ್ನು ಕಂಡರೆ ತಕ್ಷಣದಲ್ಲಿ ಕೈಮುಗಿಯಿರಿ ಎಂದರು, ಯಾಕೆಂದರೆ ರೈತನ ಪರಿಶ್ರಮ ಇದ್ದಾಗ ನಮ್ಮೆಲ್ಲರಿಗೂ ಅನ್ನ ಸಿಗುವುದು ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆ ಮನೆಯಿಂದಲೂ ಗಂಡು ಹೆಣ್ಣು ಪಕ್ಷ ಹಾಗೂ ಜಾತಿಯ ಬೇಧಭಾವ ಮಾಡದೇ ಪ್ರತಿ ಮನೆಯಿಂದಲು ರೈತ ಸಂಘಕ್ಕೆ ಬರಬೇಕು ಎಂದರು.
ಈ ವೇಳೆ ಪುರಾಣಿಕರಾದ ಸಿದ್ದೇಶ್ವರ ಶಾಸ್ತ್ರಿಗಳು ಒಂದು ಘಂಟೆ ಪುರಾಣ ಹೇಳಿದ ನಂತರ ರೈತರ ಬಗ್ಗೆ ಹೇಳಿದರು. ಹಾಗೂ ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು ರೈತರಿಗೆ ಭೂಮಿಯೇ ತಾಯಿ, ಮೆಘರಾಜನೆ ತಂದೆ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ರೈತ ಬದುಕಿದರೆ ಮಾತ್ರ ಜಗತ್ತಿನ ಎಲ್ಲಾ ಮಾನವರು ಬದುಕಲು ಸಾಧ್ಯ, ಮನೆಯಲ್ಲಿ ಬಂಗಾರದ ತಟ್ಟೆ ಇದ್ದರು ಅದರಲ್ಲಿ ಅನ್ನವೆ ಊಟ ಮಾಡಬೇಕು, ರಾಶಿ ರಾಶಿ ಹಣವಿದ್ದರೂ ಅನ್ನವೇ ಊಣಬೆಕು, ಆದ್ದರಿಂದ ಇಂದಿನ ಋಷಿ-ಕೃಷಿ ವಿಷಯ ಅತ್ಯಂತ ಅವಶ್ಯಕವಾದದು, ಇಂದಿನ ಪೀಳಿಗೆಗೆ ರೈತ ಹಾಗೂ ರೈತ ಸಂಕಷ್ಟದ ಬಗ್ಗೆ ತಿಳಿ ಹೇಳಿದಾಗ ಮಾತ್ರ ರೈತನಿಗೆ ಬೆಲೆ ಸಿಗುವುದು ಎಂದರು.
ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸುಜಾತಾ ಅವಟಿ ಅವರನ್ನು ಆಯ್ಕೆ ಮಾಡಲಾಯಿತು, ಜೊತೆಗೆ ವಿಮಲಾ ಹಿರೇಮಠ, ಪೂಜಾ ಬಡಿಗೇರ, ಶ್ರೀದೇವಿ ಹಿರೇಮಠ, ಬಸಮ್ಮ ಚಳ್ಳಗಿ, ಶಾಂತಮ್ಮ ಹಿರೇಮಠ, ಕಾಶಿಬಾಯಿ ಬಡಿಗೇರ, ವಿಜಯಲಕ್ಷ್ಮಿ ಬಡಿಗೇರ, ಲಕ್ಷ್ಮಿ ಬಡಿಗೇರ, ಸುನಿತಾ ಬಡಿಗೇರ, ಶಶಿಕಲಾ ಬಡಿಗೇರ, ಕಸ್ತೂರಬಾಯಿ ಬಡಿಗೇರ ಅವರನ್ನು ಶಾಲು ಹೊದಿಸಿ ರೈತ ಸಂಘಕ್ಕೆ ಬರಮಾಡಿಕೊಳ್ಳಲಾಯಿತು. ಎಲ್ಲರಿಗೂ ಸಿದ್ಧರಾಮ ಶಿವಾಚಾರ್ಯರು ರೈತ ಸಂಘದ ಶಾಲು ಹೊದಿಸಿ ಆಶೀರ್ವದಿಸಿದರು.
ಈ ವೇಳೆ ತಾಳಿಕೋಟಿ ತಾಲುಕಾ ರೈತ ಸಂಘದ ಅಧ್ಯಕ್ಷರಾದ ಶ್ರೀಶೈಲ ನಾಟೀಕಾರ, ಕಲಕೇರಿ ಹೋಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಮುಖಂಡರಾದ ಎಸ್.ಬಿ.ಪಾಟೀಲ, ಆರ್.ಜಿ.ಗುಮಶೆಟ್ಟಿ, ಶಿವಾನಂದ ಸಜ್ಜನ, ಮಲ್ಲಕಾಜಪ್ಪಗೌಡ ಗುಮಶೆಟ್ಟಿ, ಬಿ.ಡಿ.ಗುಮಶೆಟ್ಟಿ, ಶಾಂತಪ್ಪ ಪಟ್ಟಣಶೆಟ್ಟಿ, ಶಾಂತಯ್ಯ ಗಣಾಚಾರಿ, ಶ್ರೀಶೈಲ ಅಡಕಿ, ನಿಲ್ಲಪ್ಪ ಗುಡಗುಂಟಿ ಸೇರಿದಂತೆ ಗವಾಯಿಗಳಾದ ಕೆರೂಟಗಿಯ ರೇಣುಕರು, ತಬಲಾವಾದಕರಾದ ಮಹಾಂತೇಶ ಕಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ವೇಳೆ ಶ್ರೀಗಳ ತುಲಾಬಾರ ಸೇವೆ ಕೂಡಾ ಜರುಗಿತು. ನಂತರ ಶ್ರೀಮಠದಲ್ಲಿ ಎಲ್ಲಾ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

