ಢವಳಗಿ: ಇತ್ತೀಚಿನ ದಿನಗಳಲ್ಲಿ ಎತ್ತುಗಳನ್ನು ಕಟ್ಟಿ ರೆಂಟೆ-ಕುಂಟೆಯನ್ನು ಹೊಡೆಯುವ ರೈತರು ಕಡಿಮೆಯಾಗಿ ಯಂತ್ರ ತಂತ್ರಜ್ಞಾನದ ಬಳಕೆ ರೈತರು ಹೆಚ್ಚಾಗಿದ್ದಾರೆ. ಅಂತಹದರಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.23 ರಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯನ್ನು ಏರ್ಪಡಿಸಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ತುಂಬುವ ಕಾರ್ಯ ಮಾಡಿದ್ದಾರೆ.
ತರಬಂಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಒಂದು ಮೋಟರ್ ಬೈಕ್ ಸೇರಿದಂತೆ ಸುಮಾರು ಹತ್ತು ಬಹುಮಾನಗಳು ಇದ್ದ ಕಾರಣಕ್ಕಾಗಿ ಮಹಾರಾಷ್ಟ್ರ ರಾಜ್ಯ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಯ ಎತ್ತುಗಳು ಸೇರಿದಂತೆ ಸುಮಾರು 33 ಜೋಡಿ ಎತ್ತುಗಳು ಹೆಸರನ್ನು ನೊಂದಾಯಿಸಿದ್ದರು. ಅದರಲ್ಲಿ ಗಜಗಾತ್ರದ ಎತ್ತುಗಳು ಸುಮಾರು ಇಪ್ಪತ್ತೈದು ಜೋಡಿ ಎತ್ತಗಳು ತರಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯನ್ನು ನೋಡಲು ಢವಳಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮದ ರೈತಾಪಿ ಜನರು ಭಾಗವಹಿಸಿದ್ದರು. ನೋಡುಗರು ನೆಲದ ಮೇಲೆ ಅಷ್ಟೇ ಅಲ್ಲದೆ ಪಕ್ಕದಲ್ಲಿ ಇದ್ದ ಬೇವಿನ ಮರವೇರಿ ಕುಳಿತು ತರಬಂಡಿ ರೋಚಕ ಸ್ಪರ್ಧೆಯನ್ನು ವೀಕ್ಷಿಸಿದರು.
ರೂಡಗಿ ಗ್ರಾಮದ ಪರಸಪ್ಪ ಲಕ್ಷ್ಮಣ ವಡ್ಡರ ಅವರ ಎತ್ತುಗಳು ಕಮಿಟಿಯ ಎರಡು ನಿಮಿಷದ ಕಾಲಾವಧಿಯಲ್ಲಿ 784 ಪೂಟ 9 ಇಂಚು ದೂರ ಕ್ರಮೀಸಿ ಪ್ರಥಮ ಸ್ಥಾನ ಪಡೆದು ಎಚ್ ಎಪ್ ಡಿಲಕ್ಸ್ ಮೊಟರ್ ಬೈಕ್ ತಮ್ಮದಾಗಿಕೊಂಡವು. ಬ್ಯಾಲ್ಯಾಳ ಗ್ರಾಮದ ಸಂಗನಗೌಡ ಗ್ವಾತಗಿ ಅವರ ಎತ್ತುಗಳು ಅದೇ ಕಾಲಾವಧಿಯಲ್ಲಿ 753 ಪೂಟ ದೂರ ಕ್ರಮಿಸಿ ದ್ವೀತಿಯ ಬಹುಮಾನ 50000 ರೂಪಾಯಿ ನಗದನ್ನು ತಮ್ಮದಾಗಿಸಿಕೊಂಡವು. ಹೀಗೆ ಒಟ್ಟು ಹತ್ತು ಬಹುಮಾನವನ್ನು ನೀಡಲಾಯಿತು.
Subscribe to Updates
Get the latest creative news from FooBar about art, design and business.
ನಶಿಸುತ್ತಿರುವ ಗ್ರಾಮೀಣ ಕ್ರೀಡೆಗೆ ಜೀವಕಳೆ ತುಂಬಿದ ಗ್ರಾಮಸ್ಥರು
Related Posts
Add A Comment

