Author: editor.udayarashmi@gmail.com

ಕೊಲ್ಹಾರ: ಬರುವ ಲೋಕಸಭಾ ಚುಣಾವಣೆಯಲ್ಲಿ ಮತದಾರರ ಆಶಿರ್ವಾದ ಈ ಬಾರಿ ನನಗೆ ದೊರಕುವಂತಾಗಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮನವಿ ಮಾಡಿದರು.ಪಟ್ಟಣದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕಲ್ಲು ದೇಸಾಯಿ ಅವರ ಸ್ವಗೃಹದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಬಡವರ ದೀನದಲಿತರ ಅಸಹಾಯಕರ ನೆರವಿಗೆ ಸದಾಕಾಲ ಸ್ಪಂದಿಸುತ್ತಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ದೇಶದಲ್ಲಿ ಐದಾರು ದಶಕಗಳ ಕಾಲ ಜನಪರ ಯೋಜನೆಗಳು ಜನಾನುರಾಗಿಯಾಗಿ ಜನರಿಗೆ ತಲುಪುತ್ತಿರುವದು ಕಾಂಗ್ರೆಸ್ ಪಕ್ಷ ಆಡಳಿತದ ಮೂಲಕವೇ ಎನ್ನುವದನ್ನು ಜನರಿಗೆ ತಿಳಿಸಿಕೊಡಬೇಕಾಗಿದೆ ಎಂದರು.ಸರಕಾರಿ ಯೋಜನೆಗಳು ಅಭಿವೃದ್ದಿ ಪರ ಕಾಮಗಾರಿಗಳನ್ನು ಜಾರಿಗೆ ತರುವಾಗ ಕಾಂಗ್ರೆಸ್ ಪಕ್ಷವು ಭಾರತ ಮಾತೆಯ ಮಕ್ಕಳಲ್ಲಿ ಜಾತಿ ಮತ ಪಂತ ಎನ್ನುವ ಬೇಧ ಭಾವ ಮಾಡದೇ ಸರ್ವೆ ಜನ ಸುಖಿನೋಭವಂತು ಎನ್ನುವ ತತ್ವದಂತೆ ಸಮಾನತೆಯ ಸಂದೇಶದ ಮೂಲಕ ಪ್ರತಿಯೊಂದು ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣ ನಗರದಲ್ಲಿ ಸರ್ವಜನರಿಗೆ ಅನುಕೂಲ ಮಾಡಿಕೊಟ್ಟಿರುವದು. ಅದರಂತೆ ಈ ಬಾರಿ ತಾವುಗಳು…

Read More

ಚಿಮ್ಮಡ: ಆಂದ್ರಪ್ರದೇಶದ ಶ್ರೀಶೈಲ ಮಹಾಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ನೀಡಲು ಆರಂಭಿಸಿದ ಭ್ರಮರಾಂಭಿಕಾ ಶ್ರೀ ಮಲ್ಲಿಕಾರ್ಜುನ ದಾಸೋಹ ಸಮೀತಿಗೆ ಈಗ ಹದಿಮೂರರ ಸಂಭ್ರಮ.ಕಳೆದ ಹನ್ನೆರಡು ವರ್ಷಗಳಿಂದ ಪಾದಯಾತ್ರಿಗಳಿಗೆ ದಾಸೋಹ ಸೇವೆಯೊಂದಿಗೆ ವೈದ್ಯಕೀಯ ನೆರವನ್ನೂ ನೀಡುತ್ತಿರುವ ಸಮೀತಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ,ಹೋಳಿ ಹುಣ್ಣಿಮೆಯಂದು ರಾತ್ರಿ ಗ್ರಾಮದಿಂದ ಪ್ರತಿವರ್ಷ ೩೫೦ ಕ್ಕೂ ಹೆಚ್ಚು ಜನ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತೆರಳುತಲಿದ್ದು, ಕರ್ನಾಟಕದ ಗಡಿಭಾಗದವರೆಗೆ ಹಲವಾರು ಜನ ಭಕ್ತಾದಿಗಳು ಪಾದಯಾತ್ರಿಗಳಿಗೆ ಅಲ್ಪೋಪಹಾರ, ಪ್ರಸಾದ ವ್ಯವಸ್ಥೆ ಕೈಗೊಂಡಿರುತ್ತಾರೆ, ಆದರೆ ಆಂಧ್ರ ಭಾಗ ಪ್ರವೇಶದ ನಂತರ ಪಾದಯಾತ್ರಿಗಳಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಇದನ್ನು ಅರಿತ ಗ್ರಾಮದ ಹಲವು ಭಕ್ತರು ಗಡಿಭಾಗದಲ್ಲಿಯೂ ಪಾದಯಾತ್ರಿಗಳಿಗೆ ಚಹಾ, ಪರಾಳ, ಅಲ್ಪೋಪಹಾರ, ಊಟದ ವ್ಯವಸ್ಥೆ ದೊರೆಯಬೇಕೆಂದು ತಾವೇ ಹತ್ತು ಜನರ ತಂಡ ಕಟ್ಟಿಕೊಂಡು ಗ್ರಾಮದ ಶ್ರೀಗಳು, ಪ್ರಮುಖರ ಸಮ್ಮುಖದಲ್ಲಿ ಚರ್ಚೆ ನಡೆಸಿದಾಗ ಎಲ್ಲರೂ ಸಹಕಾರ ನೀಡಿದರು ಅಂದು ಆಸ್ತಿತ್ವಕ್ಕೆ ತರಲಾಗಿದ್ದ ಭ್ರಮರಾಂಭಿಕಾ ಶ್ರೀ ಮಲ್ಲಿಕಾರ್ಜುನ…

Read More

ಇಂಡಿ: ಇಂಡಿಯ ರಾಷ್ಟ್ರೀಯ ಹೆದ್ದಾರಿ, ತೆಗ್ಗು – ಗುಂಡಿಗಳಿಂದ ಪ್ರಾಣ ಹಾನಿ ಮಾಡುವ ಹೆದ್ದಾರಿಯಾಗಿದೆ. ಅದನ್ನು ಕೂಡಲೇ ಪಕ್ಕಾ ಹೆದ್ದಾರಿ ಅಥವಾ ದುರಸ್ತಿ ಕಾರ್ಯಮಾಡಿ ಪ್ರಯಾಣಿಕರ ಸೂಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಜೆಡಿಎಸ್ ಸಂಘಟನಾ ಕಾರ್ಯದರ್ಶಿ, ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಆಗ್ರಹಿಸಿದ್ದಾರೆ.ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇಂಡಿ – ವಿಜಯಪುರಕ್ಕೆ ತೆರಳುವ ರಾಜ್ಯ ಹೆದ್ದಾರಿ ಇತ್ತೀಚೆಗೆ 548 ಬಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಅದಕ್ಕೆ ಕಾರಣಕರ್ತರಾದ ಸಂಸದರಿಗೆ ಅಭಿನಂದನೆ ತಿಳಿಸುತ್ತೆನೆ. ಆದರೆ ಇಲ್ಲಿಯವರೆಗೆ ಆ ಹೆದ್ದಾರಿ ಪ್ರಾರಂಭದ ಯಾವುದೇ ಕಾಮಗಾರಿ ನಡೆಯದೆ ವಿಳಂಬವಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಭೂಮಿ ಪೂಜಾ ಮಾಡುವ ಬಗ್ಗೆ ಸಂಸದ ಭರವಸೆ ನೀಡಿದರು. ಈ ಸದ್ಯ ಹೆದ್ದಾರಿ ನಿರ್ಮಾಣಕ್ಕೆ ಯಾವುದೇ ಕಾಮಗಾರಿ ಜರುಗದೆಯಿರುವುದು ಜನರಿಗೆ ನಿರಾಸೆ ಹಾಗೂ ಅಕ್ರೋಶ ಕಾರಣವಾಗಿದೆ. ಇಂಡಿ – ವಿಜಯಪುರ ಮಾರ್ಗದಲ್ಲಿ ಕನಿಷ್ಠ 10 ಕಿ.ಮೀ ವರಗೆ ರಸ್ತೆ ಸಂಪೂರ್ಣ ಹದಗೆಟ್ಟು ಪ್ರಾಣ ಹಾನಿ…

Read More

ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದಲ್ಲಿಕಂಬಿ ಮಲ್ಲಯ್ಯನನ್ನು ಹೊತ್ತು ಪಾದಯಾತ್ರೆಯಲ್ಲಿ ತೆರಳುವ ಗ್ರಾಮದ ಭಕ್ತರನ್ನು ಜೋಡೆತ್ತಿನ ಬಂಡಿಗಳ ಮೆರವಣಿಗೆಯ ಮೂಲಕ ಮಂಗಳವಾರ ಬೀಳ್ಕೊಡಲಾಯಿತು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಭೀ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅವರು ಮಾತನಾಡಿ, ಕಂಬಿ ಮಲ್ಲಯ್ಯನು ಗ್ರಾಮದ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ . ಗ್ರಾಮದಲ್ಲಿ ಜೊಡೆತ್ತುಗಳು ಸದಾ ಉಳಿಯಬೇಕು ಎಂಬ ಸಂದೇಶ ನೀಡುವವನಾಗಿದ್ದಾನೆ ಎಂದು ಹೇಳಿದರು.ಇಂದು ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆಗಳು ಇರದೇ ಇರುವ ಕಾರಣ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಬರಗಾಲದ ಸಂದರ್ಭದಲ್ಲಿ ಅನೇಕ ರೈತರು ಎತ್ತುಗಳನ್ನು ಮಾರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಅನೇಕ ಎತ್ತುಗಳು ಕಸಾಯಿಖಾನೆಯ ಪಾಲಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಕಂಬಿ ಮಲ್ಲಯ್ಯ ಹಾಗೂ ಶ್ರೀಶೈಲ ಮಲ್ಲಯ್ಯ ನಮಗೆಲ್ಲ ಒಲಿಯಬೇಕಾದರೆ ನಾವು ಮೊದಲು ನಮ್ಮ ಗ್ರಾಮದ ಎತ್ತುಗಳ ಸಂತತಿ ಹೆಚ್ಚಾಗಲಿ ಎಂದು ಸಂಕಲ್ಪ ಮಾಡಬೇಕು. ಎಲ್ಲರೂ ಒಂದಾಗಿ ಜೋಡೆತ್ತು ಸಾಕಾಣಿಕೆದಾರರಿಗೆ ಪೂರಕವಾದ ಯೋಜನೆ ಜಾರಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ. ಅಂದಾಗ ಮಾತ್ರ ನಮ್ಮ…

Read More

ವಿಜಯಪುರ: ಶ್ರೇಷ್ಠ ಸಂಶೋಧಕ ಡಾ.ಗುರುಲಿಂಗ ಕಾಪಸೆ ಅವರ ನಿಧನಕ್ಕೆ ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ದಿ.ಗುರುಲಿಂಗ ಕಾಪಸೆ ನಾಡು ಕಂಡ ಶ್ರೇಷ್ಠ ಸಂಶೋಧಕ, ಶ್ರೇಷ್ಠ ಜ್ಞಾನಿ, ಅವರ ಅಗಲಿಕೆಯಿಂದ ಕನ್ನಡ ನಾಡಿನ ಜ್ಞಾನಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ, ನನ್ನ ಜೊತೆಯೂ ಅಪಾರ ಒಡನಾಟ ಹೊಂದಿದ್ದ ದಿ.ಗುರುಲಿಂಗ ಕಾಪಸೆ ಒಂದು ಜ್ಞಾನದ ಮೇರು ಪರ್ವತವಾಗಿದ್ದರು ಎಂದರು. ಹಲಸಂಗಿ ಗೆಳೆಯರ ಬಳಗದ ಸಾಹಿತ್ಯ ಸಂಶೋಧನೆ, ವೇದೋಪನಿಷತ್ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ದಿ.ಗುರುಲಿಂಗ ಕಾಪಸೆ ಅವರು ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ದಿ.ಗುರುಲಿಂಗ ಕಾಪಸೆ ಶಿಕ್ಷಕರಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ನಾಡು-ನುಡಿಗೆ ನೀಡಿದ ಕೊಡುಗೆ ಅನನ್ಯ. ಕನ್ನಡಮ್ಮನ ಸೇವೆಗಾಗಿ ಸಕ್ರೀಯವಾಗಿ ತೊಡಗಿಸಿಕೊಂಡು ಕನ್ನಡ ಸಾರಸ್ವತ ಲೋಕದ ಅನೇಕ ಸಂಶೋಧಕರಿಗೆ ಪ್ರೇರಣೆಯಾಗಿದ್ದರು. ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಅನುಯಾಯಿಯಾಗಿದ್ದ ದಿ.ಕಾಪಸೆ ಅನುಭಾವ ಸಾಹಿತ್ಯಕ್ಕೆ ನೀಡಿದ…

Read More

ವಿಜಯಪುರ: ಹಿರಿಯ ಸಾಹಿತಿಗಳು, ಕನ್ನಡ ರಾಜ್ಯೋತ್ಸವ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಷ್ಕೃತರಾದ ಡಾ.ಗುರುಲಿಂಗ ಕಾಪಸೆ ಅವರ ನಿಧನ ಹಿನ್ನೆಲೆ, ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು.ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಪ್ರಕಾಶ ಅಕ್ಕಲಕೋಟ, ಮಲ್ಲಿಕಾರ್ಜುನ ಜೋಗೂರ, ಮಳುಗೌಡ ಪಾಟೀಲ, ರಾಜಶೇಖರ ಭಜಂತ್ರಿ, ಮಲ್ಲಮ್ಮ ಜೋಗೂರ, ಛಾಯಾ ಮಸಿಯವರ ಸೇರಿದಂತೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Read More

ಇಂಡಿ: ತಾಲೂಕಿನ ತಾಂಬಾ ಗ್ರಾಮದ ಹೆಸ್ಕಾಂ ಅಧಿಕಾರಿ ಸಧ್ಯ ಟಿಸಿ ಗೆ ಕನೆಕ್ಸನ್ ಇದ್ದರೂ ಮತ್ತೆ ಹೆಚ್ಚಿಗೆ ಕನೆಕ್ಸನ್ ನೀಡಿ ಒಂದೂ ಮೋಟಾರ ನಡೆಯದಂತೆ ಮಾಡುತ್ತಿದ್ದಾರೆ ಎಂದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರವೇ ಕಾರ್ಯಕರ್ತರು ಮತ್ತು ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಈ ವೇಳೆ ಅಲ್ಲಾಬಕ್ಷ ದಡೇದ ಗೊರೆ ಮಾತನಾಡಿ, ೧೦ ವರ್ಷಗಳ ಹಿಂದೆ ನಾಲ್ಕು ಜನ ರೈತರಿಗೆ ಟ್ರಾನ್ಸಫರ‍್ಮರ ನೀಡಿದ್ದು ಈಗ ಆ ಟಿಸಿ ಗೆ ಮತ್ತೆ ಹೆಚ್ಚಿನ ಕನೆಕ್ಸನ ನೀಡಿ ಲೋಡ್ ಹೆಚ್ಚಾಗುತ್ತಿದ್ದು ಒಂದು ಮೋಟಾರು ನಡೆಯದಂತೆ ಮಾಡುತ್ತಿದ್ದಾರೆ. ಹೀಗಾಗಿ ಮೇಲಾಧಿಕಾರಿಗಳು ಅವರ ಮೇಲೆ ಕ್ರಮ ಜರುಗಿಸುವಂತೆ ಕುರಿತು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಬ್ದುಲ್ ದಡೇದ, ಮುದಕಪ್ಪ ಕಲ್ಲೂರ, ಹುಚ್ಚಪ್ಪ ಕಾಂಬಳೆ, ಮಾಸೀಮ ಮಂಗಳಖೇಡ, ಸಿದ್ದು ಶಿರಶ್ಯಾಡ, ಮಹಮ್ಮದಸಾಬ ವಾಲಿಕಾರ, ಪರಸು ಬಿಸನಾಳ, ರಿಯಾಜ ಮಂಗಳವೇಡ, ಹಾಜಿ ಗೌಂಡಿ, ಸಿದ್ದಪ್ಪ ಹಿರೇಕುರಬರ, ಇಸಾಕ ಮೋಮೀನ, ಪುಟ್ಟು ಅಳೋಳೀ, ಬೀಜರಿ ಮತ್ತಣ್ಣ, ನಾಗು ಪೂಜಾರಿ ಮತ್ತಿತರಿದ್ದರು.ಶಿರಸ್ತೆದಾರ ಎಸ್.ಆರ್.ಮುಜಗೊಂಡ ಇವರಿಗೆ ಮನವಿ ಅರ್ಪಿಸಿದರು.…

Read More

ವಿಜಯಪುರ: ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರಿನಲ್ಲಿ ೧೩೦೦೦ ಹೆಕ್ಟರ್ ಹಾಗೂ ಹಿಂಗಾರಿನಲ್ಲಿ ಸುಮಾರು ೩೫೦೦ ಹೆಕ್ಟರ್ ಕೆಂಪು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದು, ಸಾಕಷ್ಟು ಹಣ ಹಾಗೂ ಸಮಯ ಕೊಟ್ಟು ಕೂಸಿನಂತೆ ಜೋಪನ ಮಾಡಿ ಬೆಳೆದ ಬೆಳೆಗೆ ಈಗ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ, ಇದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಾದ ಟಿ. ಬೂಬಾಲನ ಅವರಿಗೆ ಮನವಿ ಸಲ್ಲಿಸಿ ಸರಕಾರದಿಂದ ಬೆಂಬಲ ಬೆಲೆ ನೀಡಿ ಖರಿಧಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ ಬಾರಿ ಕ್ವಿಂಟಾಲ ಮೆಣಸಿನಕಾಯಿಗೆ ೩೦೦೦೦ ರೂಗಳ ವರೆಗೆ ಖರಿಧಿಸಲಾಗಿತ್ತು, ಆದರೆ ಈಗ ಬೆಲೆ ಪಾತಾಳ ಸೇರಿದಂತಾಗಿದೆ ಈಗ ಕ್ವಿಂಟಾಲಗೆ ೯೦೦೦ದ ಆಚೆ ಈಚೆ ಕೇಳುತ್ತಿದ್ದಾರೆ, ಇದರಲ್ಲಿ ದಲ್ಲಾಳಿಗಳ ಕೈವಾಡದಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ, ಇದರಿಂದ ರೈತರು ಖರ್ಚು ಮಾಡಿರುವುಷ್ಟು ಸಹ ಅವರ ಕೈಗೆ ಸಿಗುತ್ತಿಲ್ಲ, ಆದ್ದರಿಂದ ಕೂಡಲೇ ಸರಕಾರದಿಂದ ಬೆಂಬಲ ಬೆಲೆ ನೀಡಿ ಖರೀಧಿಸಬೇಕು,…

Read More

ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲದಲ್ಲಿ ಜರಗುವ ಮಲ್ಲಿಕಾರ್ಜುನ ಜಾತ್ರೆಗೆ ಕಲ್ಯಾಣ ಕನಾಟಕ ಸಾರಿಗೆ ನಿಗಮ ವಿಜಯಪುರ ವಿಭಾಗ ಹಾಗೂ ಜಿಲ್ಲೆಯ ಎಲ್ಲಾ ಘಟಕ ಸ್ಥಾನಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾನ ಹಾಗೂ ಎಲ್ಲಾ ಘಟಕಗಳ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ. ಒಂದೇ ಗುಂಪಿನಿಂದ ಪ್ರಯಾಣಿಸಲು ಕನಿಷ್ಠ ೪೫ರಿಂದ ೫೫ ಜನ ಪ್ರಯಾಣಿಕರು ಲಭ್ಯವಾದಲ್ಲಿ ದಾರಿ ಮಧ್ಯ ಬರುವ ಯಾತ್ರಾ ಸ್ಥಳಗಳ ದರ್ಶನ ಮಾಡಿಸಲಾಗುವುದು. ಘಟಕ ಸ್ಥಾನಗಳಿಂದ ಹೆಚ್ಚುವರಿ ಬಸ್‌ಗಳಲ್ಲದೇ ಪ್ರಯಾಣಿಕರು ಇಚ್ಚಿಸಿದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರು ಪ್ರಯಾಣ ದರ ಪಾವತಿಸಿದಲ್ಲಿ ಮಂತ್ರಾಲಯ ಹಾಗೂ ಮಹಾನಂದಿ ದರ್ಶನಕ್ಕೂ ಅನೂಕೂಲ ಮಾಡಿಕೊಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ವಿಭಾಗಿಯ ಸಾರಿಗೆ ಅಧಿಕಾರಿ(೭೭೬೦೯೯೨೨೫) ವಿಜಯಪುರ ವಿಭಾಗೀಯ ತಾಂತ್ರಿಕ ಶಿಲ್ಪಿ (೭೭೬೦೯೯೨೨೫೧) ಘಟಕ ವ್ಯವಸ್ಥಾಪಕರು ವಿಜಯಪುರ (೭೭೬೦೯೯೨೨೬೩, ೭೭೬೦೯೯೨೨೬೪), ಘಟಕ ವ್ಯವಸ್ಥಾಪಕರು ಇಂಡಿ (೭೭೬೦೯೯೨೨೬೫), ಘಟಕ ವ್ಯವಸ್ಥಾಪಕರು ಸಿಂದಗಿ (೭೭೬೦೯೯೨೨೬೬), ಘಟಕ…

Read More

ವಿಜಯಪುರ: ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ಪತ್ರಿಕೆಗೆ ಜಿಲ್ಲೆಯ ೧೨೭ ಪರೀಕ್ಷಾ ಕಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಪರೀಕ್ಷೆಗೆ ನೋಂದಣಿಯಾದ ಒಟ್ಟು ೪೦,೫೧೮ ವಿದ್ಯಾರ್ಥಿಗಳಲ್ಲಿ ೩೯,೬೬೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೮೫೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More