ಚಿಮ್ಮಡ: ಆಂದ್ರಪ್ರದೇಶದ ಶ್ರೀಶೈಲ ಮಹಾಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ನೀಡಲು ಆರಂಭಿಸಿದ ಭ್ರಮರಾಂಭಿಕಾ ಶ್ರೀ ಮಲ್ಲಿಕಾರ್ಜುನ ದಾಸೋಹ ಸಮೀತಿಗೆ ಈಗ ಹದಿಮೂರರ ಸಂಭ್ರಮ.
ಕಳೆದ ಹನ್ನೆರಡು ವರ್ಷಗಳಿಂದ ಪಾದಯಾತ್ರಿಗಳಿಗೆ ದಾಸೋಹ ಸೇವೆಯೊಂದಿಗೆ ವೈದ್ಯಕೀಯ ನೆರವನ್ನೂ ನೀಡುತ್ತಿರುವ ಸಮೀತಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ,
ಹೋಳಿ ಹುಣ್ಣಿಮೆಯಂದು ರಾತ್ರಿ ಗ್ರಾಮದಿಂದ ಪ್ರತಿವರ್ಷ ೩೫೦ ಕ್ಕೂ ಹೆಚ್ಚು ಜನ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತೆರಳುತಲಿದ್ದು, ಕರ್ನಾಟಕದ ಗಡಿಭಾಗದವರೆಗೆ ಹಲವಾರು ಜನ ಭಕ್ತಾದಿಗಳು ಪಾದಯಾತ್ರಿಗಳಿಗೆ ಅಲ್ಪೋಪಹಾರ, ಪ್ರಸಾದ ವ್ಯವಸ್ಥೆ ಕೈಗೊಂಡಿರುತ್ತಾರೆ, ಆದರೆ ಆಂಧ್ರ ಭಾಗ ಪ್ರವೇಶದ ನಂತರ ಪಾದಯಾತ್ರಿಗಳಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಇದನ್ನು ಅರಿತ ಗ್ರಾಮದ ಹಲವು ಭಕ್ತರು ಗಡಿಭಾಗದಲ್ಲಿಯೂ ಪಾದಯಾತ್ರಿಗಳಿಗೆ ಚಹಾ, ಪರಾಳ, ಅಲ್ಪೋಪಹಾರ, ಊಟದ ವ್ಯವಸ್ಥೆ ದೊರೆಯಬೇಕೆಂದು ತಾವೇ ಹತ್ತು ಜನರ ತಂಡ ಕಟ್ಟಿಕೊಂಡು ಗ್ರಾಮದ ಶ್ರೀಗಳು, ಪ್ರಮುಖರ ಸಮ್ಮುಖದಲ್ಲಿ ಚರ್ಚೆ ನಡೆಸಿದಾಗ ಎಲ್ಲರೂ ಸಹಕಾರ ನೀಡಿದರು ಅಂದು ಆಸ್ತಿತ್ವಕ್ಕೆ ತರಲಾಗಿದ್ದ ಭ್ರಮರಾಂಭಿಕಾ ಶ್ರೀ ಮಲ್ಲಿಕಾರ್ಜುನ ದಾಸೋಹ ಸೇವಾ ಸಮೀತಿ ಪ್ರತಿವರ್ಷ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆಯಲ್ಲದೇ ಭಕ್ತಾಧಿಗಳ ದೇಣಿಗೆಯಿಂದ ಧಾನ್ಯ ಸಂಗ್ರಹಿಸುವುದಕ್ಕಾಗಿಯೇ ಗ್ರಾಮದಲ್ಲಿ ಸ್ವಂತ ಕಟ್ಟಡವನ್ನೇ ನಿರ್ಮಿಸಲಾಗಿದೆ.
ಸುಮಾರು ನಾರೂರೈವತ್ತು ಕಿ.ಮಿವರೆಗೆ ಪಾದಯಾತ್ರೆಯ ಮೂಲಕ ಪುಣ್ಯ ಕ್ಷೇತ್ರಕ್ಕೆ ತೆರಳುವ ಭಕ್ತಾದಿಗಳಿಗೆ ಹಸಿವು, ಬಾಯಾರಿಕೆ, ಅನಾರೋಗ್ಯದ ತೊಂದರೆಯಾಗಬಾರದೆಂದು ಮಾರ್ಚ ೨೮ ಗುರವಾರದಿಂದ ಐದು ದಿನಗಳಕಾಲ ತುಂಗಭದ್ರಾ ನದಿತೀರದ ಕುಂಬಳೂರ (ಕರಿಹೊಳೆ) ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಪಾದಯಾತ್ರೆ ಮೂಲಕ ತೆರಳುವ ಯಾವುದೇ ಭಾಗದ ಎಲ್ಲ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಐದು ದಿನಗಳಕಾಲ ದಿನದ ೨೪ ಘಂಟೆಯೂ ನಿರಂತರ ಪ್ರಸಾದ, ವೈದ್ಯಕೀಯ ಸೇವೆ ಪಾದಯಾತ್ರಿಗಳಿಗೆ ಲಭ್ಯವಾಗಲಿದೆ ಎಂದು ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ದಾಸೋಹ ಸಮೀತಿಯ ಪ್ರಮುಖರು ತಿಳಿಸಿದ್ದಾರೆ.
ಬುಧವಾರ ಮುಂಜಾನೆ ೯ ಘಂ. ಗೆ ಶ್ರೀ ಪ್ರಭು ಮಹಾಸ್ವಾಮಿಗಳ ವಿಶೇಷ ಪೂಜೆಯೊಂದಿಗೆ ಆಹಾರ ಪದಾರ್ಥ ತುಂಬಿದ ವಾಹನದ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಗ್ರಾಮದ ಚನ್ನಮ್ಮಾ ವೃತ್ತದಿಂದ ಬಸ್ ನಿಲ್ದಾನದ ವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಮೆರವಣಿಗೆ ಮೂಲಕ ತೆರಳಲಾಯಿತು ದಾರಿಉದ್ದಕ್ಕೂ ಸಾರ್ವಜನಿಕರು ಪ್ರಸಾದ ವಾಹನಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಬಿ.ಎಸ್.ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಗ್ರಾಂ.ಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪರಪ್ಪಾ ಪಾಲಭಾವಿ, ರಾಚಯ್ಯ ಮಠಪತಿ, ಗುರಪ್ಪಾ ಬಳಗಾರ, ಚಂದ್ರಕಾಂತ ಜಾಡಗೌಡರ, ಸತ್ಯಪ್ಪಾ ನೇಸೂರ ಸೇರಿದಂತೆ ಭ್ರಮರಾಂಭಿಕಾ ಶ್ರೀ ಮಲ್ಲಿಕಾರ್ಜುನ ದಾಸೋಹ ಸಮೀತಿಯ ಸರ್ವ ಸದಸ್ಯರೂ ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

