ಕೊಲ್ಹಾರ: ಬರುವ ಲೋಕಸಭಾ ಚುಣಾವಣೆಯಲ್ಲಿ ಮತದಾರರ ಆಶಿರ್ವಾದ ಈ ಬಾರಿ ನನಗೆ ದೊರಕುವಂತಾಗಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮನವಿ ಮಾಡಿದರು.
ಪಟ್ಟಣದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಕಲ್ಲು ದೇಸಾಯಿ ಅವರ ಸ್ವಗೃಹದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಬಡವರ ದೀನದಲಿತರ ಅಸಹಾಯಕರ ನೆರವಿಗೆ ಸದಾಕಾಲ ಸ್ಪಂದಿಸುತ್ತಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ದೇಶದಲ್ಲಿ ಐದಾರು ದಶಕಗಳ ಕಾಲ ಜನಪರ ಯೋಜನೆಗಳು ಜನಾನುರಾಗಿಯಾಗಿ ಜನರಿಗೆ ತಲುಪುತ್ತಿರುವದು ಕಾಂಗ್ರೆಸ್ ಪಕ್ಷ ಆಡಳಿತದ ಮೂಲಕವೇ ಎನ್ನುವದನ್ನು ಜನರಿಗೆ ತಿಳಿಸಿಕೊಡಬೇಕಾಗಿದೆ ಎಂದರು.
ಸರಕಾರಿ ಯೋಜನೆಗಳು ಅಭಿವೃದ್ದಿ ಪರ ಕಾಮಗಾರಿಗಳನ್ನು ಜಾರಿಗೆ ತರುವಾಗ ಕಾಂಗ್ರೆಸ್ ಪಕ್ಷವು ಭಾರತ ಮಾತೆಯ ಮಕ್ಕಳಲ್ಲಿ ಜಾತಿ ಮತ ಪಂತ ಎನ್ನುವ ಬೇಧ ಭಾವ ಮಾಡದೇ ಸರ್ವೆ ಜನ ಸುಖಿನೋಭವಂತು ಎನ್ನುವ ತತ್ವದಂತೆ ಸಮಾನತೆಯ ಸಂದೇಶದ ಮೂಲಕ ಪ್ರತಿಯೊಂದು ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣ ನಗರದಲ್ಲಿ ಸರ್ವಜನರಿಗೆ ಅನುಕೂಲ ಮಾಡಿಕೊಟ್ಟಿರುವದು. ಅದರಂತೆ ಈ ಬಾರಿ ತಾವುಗಳು ವಿಜಯಪೂರ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ ನಿಮ್ಮೆಲ್ಲರ ಹಾಗೂ ಭಾರತಮಾತೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು.
ಮುಖಂಡ ಕಲ್ಲು ದೇಸಾಯಿ ಮಾತನಾಡಿದರು.
ಈ ವೇಳೆ ಶ್ರೀಶೈಲ ಪತಂಗಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ರಫೀಕ ಪಕಾಲಿ, ಬಿ.ಯು.ಗಿಡ್ಡಪ್ಪಗೋಳ, ದಾದಾಸಾಹೇಬ ಗೂಗ್ಯಾಳ, ಚನಮಲ್ಲಪ್ಪ ಗಿಡಡಪ್ಪಗೋಳ, ಹನೀಪ ಮಕಾನದಾರ, ಕಮಲಾಬಾಯಿ ಮಾಕಾಳಿ, ಎಮ್.ಆರ್.ಕಲಾದಗಿ, ರಾಜು ಇವಣಗಿ, ಶಿಡ್ಲೆಪ್ಪ ಮಾದರ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

