ವಿಜಯಪುರ: ಶ್ರೇಷ್ಠ ಸಂಶೋಧಕ ಡಾ.ಗುರುಲಿಂಗ ಕಾಪಸೆ ಅವರ ನಿಧನಕ್ಕೆ ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ದಿ.ಗುರುಲಿಂಗ ಕಾಪಸೆ ನಾಡು ಕಂಡ ಶ್ರೇಷ್ಠ ಸಂಶೋಧಕ, ಶ್ರೇಷ್ಠ ಜ್ಞಾನಿ, ಅವರ ಅಗಲಿಕೆಯಿಂದ ಕನ್ನಡ ನಾಡಿನ ಜ್ಞಾನಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ, ನನ್ನ ಜೊತೆಯೂ ಅಪಾರ ಒಡನಾಟ ಹೊಂದಿದ್ದ ದಿ.ಗುರುಲಿಂಗ ಕಾಪಸೆ ಒಂದು ಜ್ಞಾನದ ಮೇರು ಪರ್ವತವಾಗಿದ್ದರು ಎಂದರು. ಹಲಸಂಗಿ ಗೆಳೆಯರ ಬಳಗದ ಸಾಹಿತ್ಯ ಸಂಶೋಧನೆ, ವೇದೋಪನಿಷತ್ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ದಿ.ಗುರುಲಿಂಗ ಕಾಪಸೆ ಅವರು ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ದಿ.ಗುರುಲಿಂಗ ಕಾಪಸೆ ಶಿಕ್ಷಕರಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ನಾಡು-ನುಡಿಗೆ ನೀಡಿದ ಕೊಡುಗೆ ಅನನ್ಯ. ಕನ್ನಡಮ್ಮನ ಸೇವೆಗಾಗಿ ಸಕ್ರೀಯವಾಗಿ ತೊಡಗಿಸಿಕೊಂಡು ಕನ್ನಡ ಸಾರಸ್ವತ ಲೋಕದ ಅನೇಕ ಸಂಶೋಧಕರಿಗೆ ಪ್ರೇರಣೆಯಾಗಿದ್ದರು. ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಅನುಯಾಯಿಯಾಗಿದ್ದ ದಿ.ಕಾಪಸೆ ಅನುಭಾವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು. ಇದೇ ಸಂದರ್ಭದಲ್ಲಿ ಬೆಳಗಾವ್ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ನಗರ ಅಧ್ಯಕ್ಷ ಶಂಕರ್ ಹೂಗಾರ್, ಮುಖಂಡರಾದ ಸುರೇಶ್ ಬಿರಾದಾರ, ಮಳಗೊಡ ಪಾಟೀಲ, ಭೀಮಶಂಕರ ಹದ್ನೂರ, ಮಲ್ಲಿಕಾರ್ಜುನ್ ಜೋಗುರ್ ಮಲ್ಲಮ್ಮ ಜೋಗುರ, ವಿಠ್ಠಲ ನಡುವಿನಕೇರಿ, ಉಟಗಿ ಸರ್ ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

