ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲದಲ್ಲಿ ಜರಗುವ ಮಲ್ಲಿಕಾರ್ಜುನ ಜಾತ್ರೆಗೆ ಕಲ್ಯಾಣ ಕನಾಟಕ ಸಾರಿಗೆ ನಿಗಮ ವಿಜಯಪುರ ವಿಭಾಗ ಹಾಗೂ ಜಿಲ್ಲೆಯ ಎಲ್ಲಾ ಘಟಕ ಸ್ಥಾನಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾನ ಹಾಗೂ ಎಲ್ಲಾ ಘಟಕಗಳ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ. ಒಂದೇ ಗುಂಪಿನಿಂದ ಪ್ರಯಾಣಿಸಲು ಕನಿಷ್ಠ ೪೫ರಿಂದ ೫೫ ಜನ ಪ್ರಯಾಣಿಕರು ಲಭ್ಯವಾದಲ್ಲಿ ದಾರಿ ಮಧ್ಯ ಬರುವ ಯಾತ್ರಾ ಸ್ಥಳಗಳ ದರ್ಶನ ಮಾಡಿಸಲಾಗುವುದು. ಘಟಕ ಸ್ಥಾನಗಳಿಂದ ಹೆಚ್ಚುವರಿ ಬಸ್‌ಗಳಲ್ಲದೇ ಪ್ರಯಾಣಿಕರು ಇಚ್ಚಿಸಿದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರು ಪ್ರಯಾಣ ದರ ಪಾವತಿಸಿದಲ್ಲಿ ಮಂತ್ರಾಲಯ ಹಾಗೂ ಮಹಾನಂದಿ ದರ್ಶನಕ್ಕೂ ಅನೂಕೂಲ ಮಾಡಿಕೊಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ವಿಭಾಗಿಯ ಸಾರಿಗೆ ಅಧಿಕಾರಿ(೭೭೬೦೯೯೨೨೫) ವಿಜಯಪುರ ವಿಭಾಗೀಯ ತಾಂತ್ರಿಕ ಶಿಲ್ಪಿ (೭೭೬೦೯೯೨೨೫೧) ಘಟಕ ವ್ಯವಸ್ಥಾಪಕರು ವಿಜಯಪುರ (೭೭೬೦೯೯೨೨೬೩, ೭೭೬೦೯೯೨೨೬೪), ಘಟಕ ವ್ಯವಸ್ಥಾಪಕರು ಇಂಡಿ (೭೭೬೦೯೯೨೨೬೫), ಘಟಕ ವ್ಯವಸ್ಥಾಪಕರು ಸಿಂದಗಿ (೭೭೬೦೯೯೨೨೬೬), ಘಟಕ ವ್ಯವಸ್ಥಾಪಕರು ಮುದ್ದೇಬಿಹಾಳ (೭೭೬೦೯೯೨೨೬೭), ಘಟಕ ವ್ಯವಸ್ಥಾಪಕರು ತಾಳಿಕೋಟೆ (೭೭೬೦೯೯೨೨೬೮) ಘಟಕ ವ್ಯವಸ್ಥಾಪಕರು ಬಸವನ ಬಾಗೇವಾಡಿ (೭೭೬೦೯೯೮೮೬೯), ಕೇಂದ್ರ ಬಸ್ ನಿಲ್ದಾಣ ವಿಜಯಪುರ (೭೭೬೦೯೯೨೨೫೮, ೭೭೬೦೯೯೨೨೫೮) ಇವರನ್ನು ಸಂಪರ್ಕಿಸಿ ಎಂದು ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
