ವಿಜಯಪುರ: ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರಿನಲ್ಲಿ ೧೩೦೦೦ ಹೆಕ್ಟರ್ ಹಾಗೂ ಹಿಂಗಾರಿನಲ್ಲಿ ಸುಮಾರು ೩೫೦೦ ಹೆಕ್ಟರ್ ಕೆಂಪು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದು, ಸಾಕಷ್ಟು ಹಣ ಹಾಗೂ ಸಮಯ ಕೊಟ್ಟು ಕೂಸಿನಂತೆ ಜೋಪನ ಮಾಡಿ ಬೆಳೆದ ಬೆಳೆಗೆ ಈಗ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ, ಇದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಾದ ಟಿ. ಬೂಬಾಲನ ಅವರಿಗೆ ಮನವಿ ಸಲ್ಲಿಸಿ ಸರಕಾರದಿಂದ ಬೆಂಬಲ ಬೆಲೆ ನೀಡಿ ಖರಿಧಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ ಬಾರಿ ಕ್ವಿಂಟಾಲ ಮೆಣಸಿನಕಾಯಿಗೆ ೩೦೦೦೦ ರೂಗಳ ವರೆಗೆ ಖರಿಧಿಸಲಾಗಿತ್ತು, ಆದರೆ ಈಗ ಬೆಲೆ ಪಾತಾಳ ಸೇರಿದಂತಾಗಿದೆ ಈಗ ಕ್ವಿಂಟಾಲಗೆ ೯೦೦೦ದ ಆಚೆ ಈಚೆ ಕೇಳುತ್ತಿದ್ದಾರೆ, ಇದರಲ್ಲಿ ದಲ್ಲಾಳಿಗಳ ಕೈವಾಡದಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ, ಇದರಿಂದ ರೈತರು ಖರ್ಚು ಮಾಡಿರುವುಷ್ಟು ಸಹ ಅವರ ಕೈಗೆ ಸಿಗುತ್ತಿಲ್ಲ, ಆದ್ದರಿಂದ ಕೂಡಲೇ ಸರಕಾರದಿಂದ ಬೆಂಬಲ ಬೆಲೆ ನೀಡಿ ಖರೀಧಿಸಬೇಕು, ರೈತರ ಪರವಾಗಿ ಸರಕಾರಗಳು ಇರಬೇಕು , ಕೂಡಲೇ ಸಂಬಂಧಿಸಿದ ಎ.ಪಿ.ಎಂ.ಸಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ ಸರಕಾರಕ್ಕೆ ಒಂದು ಸೂಕ್ತ ವರದಿ ಕಳುಹಿಸಿ ಒಳ್ಳೆಯ ಬೆಲೆಯೊಂದಿಗೆ ಮೆಣಸಿನಕಾಯಿ ಖರೀಧಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷ ಸರಿಯಾಗಿ ಮಳೆ ಬಾರದೇ ಸಾಲ ಸೋಲ ಮಾಡಿರುವ ರೈತನಿಗೆ ಮುಂಗಾರು ಹಾಗೂ ಹಿಂಗಾರು ಮಳೆ ಆಗದೇ ಯಾವ ಬೆಳೆ ಕೂಡಾ ಸರಿಯಾಗಿ ಬೆಳೆಯದೇ ಆತ್ಮಹತ್ಯೆ ಅಂತಹ ಕೆಟ್ಟ ಘಟನೆಗಳು ನಡೆದಿರುವುದು ಕಂಡುಬರುತ್ತಿವೆ, ಈಗಾಗಲೇ ಹಿಂಗಾರು ಸಹ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರಿಗೆ ಪರಿಹಾರ ಹಾಗೂ ಫಸಲ ಭೀಮಾ ಯೋಜನೆಯಡಿ ವಿಮೆ ತುಂಬಿರುವ ರೈತರಿಗೂ ವಿಮಾ ಪರಿಹಾರ ಕೊಡಬೇಕು ಎಂದರು, ವಿಮೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ಮಾಡಿ ನಷ್ಟಗೊಂಡ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಬೇಕು ಎಂದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಸಹಸಂಚಾಲಕ ಮಹಾಂತೇಶವ ಮಮದಾಪುರ, ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾ.ಪ್ರಧಾನ ಕಾರ್ಯದಶಿ ಮಲ್ಲಿಕರ್ಜುನ ಗೋಡೆಕಾರ, ವಿಜಯಪುರ ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಮುಖಂಡರಾದ ತಪ್ಪಣ್ಣ ನಾಟಿಕಾರ, ಪ್ರಭು ಕಾರಜೋಳ, ಮಹಾಂತೇಶ ಮಹಾಂತಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

