Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಯಡ್ರಾಮಿ: ಪ್ರಾಚೀನ ಕಾಲದಿಂದಲೂ ಹುಟ್ಟಿ ಬೆಳೆದು ಬಂದ ಕನ್ನಡದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಅಣ್ಣ ಬಸವಣ್ಣನವರು ಹುಟ್ಟು ಹಾಕಿದ ವಚನ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ನಿವೃತ್ತ ಆರೋಗ್ಯಾಧಿಕಾರಿ, ಚನ್ನಬಸವಣ್ಣನವರ ವಂಶಸ್ಥರಾದ ದತ್ತಾತ್ರೇಯ ಕುಲಕರ್ಣಿ ಇಂಗಳೇಶ್ವರ ಅವರು ಹೇಳಿದರು.ತಾಲೂಕಿನ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಹುಣ್ಣಿಮೆಯ ಆನ್ಲೈನ್ ಸಂಗಮ (ಸರಣಿ -58) ದಲ್ಲಿ ಅವರು ಮಾತನಾಡಿದರು.ಇಂಗಳೇಶ್ವರ ಈ ಹಿಂದೆ ಪ್ರಖ್ಯಾತ ಅಗ್ರಹಾರವಾಗಿತ್ತು. ಬಸವಣ್ಣನವರು ಇಂಗಳೇಶ್ವರದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಲಿಂಗಾಯತ ಧರ್ಮ ಹುಟ್ಟು ಹಾಕಿದರು. ವೈದಿಕ ಸಂಪ್ರದಾಯದಂತೆ ಬಸವಣ್ಣನವರಿಗೆ ಉಪನಯನ ಕಾರ್ಯಕ್ರಮ ನೆರವೇರಿತ್ತು. ಆದರೆ ಕೆಲವರು ಉಪನಯನವೇ ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಉಪನಯನ ನೆರವೇರಿದ್ದನ್ನು ಅವರ ಜೀವನ ಮತ್ತು ವಚನ ಸಾಹಿತ್ಯದಿಂದ ಸ್ಪಷ್ಟಪಡಿಸಬಹುದು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದೆ. ಜಾತಿ ವ್ಯವಸ್ಥೆಯಿಂದ ಕ್ರೋಧಗೊಂಡ ಬಸವಣ್ಣನವರು ಹರಿಜನರಿಗೂ ಇಷ್ಟಲಿಂಗ ನೀಡುವುದರ ಮೂಲಕ ಬಹು ದೊಡ್ಡ ಸಾಮಾಜಿಕ…
ಮುದ್ದೇಬಿಹಾಳ: ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಕ ಬಂಧುಗಳು ಜನರಿಗೆ ಕೆಲಸ ಒದಗಿಸಲು ಮುಂದಾಗಬೇಕು. ಕೆಲಸದ ಬೇಡಿಕೆ ಅರ್ಜಿಗಳನ್ನು ಸಂಗ್ರಹಿಸಿ ಗ್ರಾಮ ಪಂಚಾಯತಿಗೆ ಸಲ್ಲಿಸಿದರೆ, ಏಪ್ರಿಲ್ ೧ ರಿಂದ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಲಾಗುವುದು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ ತಿಳಿಸಿದರು.ತಾಲೂಕು ಪಂಚಾಯತಿ ಸಭಾ ಭವನದಲ್ಲಿ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಯಕ ಬಂಧುಗಳಿಗೆ ಕಾರ್ಯಾಗಾರಕ್ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಯಕ ಬಂಧುಗಳು ಮೊದಲು ಸಂಘಟಿತರಾಗಬೇಕು. ಸಕ್ರೀಯ ನರೇಗಾ ಕೂಲಿಕಾರರನ್ನು ಒಗ್ಗೂಡಿಸಿ ಕೆಲಸಕ್ಕೆ ಬರುವಂತೆ ಪ್ರೇರೆಪಿಸಬೇಕು. ಒಂದು ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ೬೦೦ ರಿಂದ ೮೦೦ ವರೆಗೆ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಯಕ ಬಂಧುಗಳು ಸನ್ನದ್ಧರಾಗಬೇಕು. ನಿಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿ ಎಂದು ಸಲಹೆ ನೀಡಿದರು.ಸಹಾಯಕ ನಿರ್ದೆಶಕರು (ಪಂ.ರಾ.) ಖುಬಾಸಿಂಗ್ ಜಾಧವ್ ಮಾತನಾಡಿ, ಕಾಯಕಬಂಧುಗಳ ಕರ್ತವ್ಯ, ನಿರ್ವಹಿಸಬೇಕಾದ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ ಉಪನ್ಯಾಸಕರು ಬೆಳಗಾವಿ, ಮೊ.೯೪೪೯೨೩೪೧೪೨ ಏನೇನೋ ಮಾಡುವ ಮನಸ್ಸು ಇದ್ದರೂ ದೈನಂದಿನ ಜೀವನದಲ್ಲಿ ಒಂದು ತೀವ್ರತರವಾದ ಅಸಮಾಧಾನ. ನಿರುತ್ಸಾಹ, ನಿಸ್ತೇಜ, ನಿಸ್ಸಾರ ಬೆಂಬಿಡದೇ ಕಾಡಿಸುತ್ತದೆ. ಇದು ನಮಗೆಲ್ಲರಿಗೂ ಒಂದಿಲ್ಲೊಂದು ಸಲ ಆಗುವ ಅನುಭವವೇ ಆಗಿದೆ. ಕೆಲವೊಮ್ಮೆ ಒಬ್ಬರೇ ಕುಳಿತು ಯೋಚನೆ ಮಾಡುವ ಪ್ರಸಂಗ ಬಂದಾಗ ಈ ನಿರುತ್ಸಾಹ ನನ್ನ ಸುಂದರ ಬದುಕನ್ನು ಹಾಳುಗೆಡುವುತ್ತಿದೆ ಎಂದೆನಿಸದೇ ಇರದು. ಬದುಕಿನ ಪಯಣದಲ್ಲಿ ನಿರುತ್ಸಾಹದ ನಿಲ್ದಾಣವು ಏಕಾದರೂ ಬರುತ್ತದೆಯೋ ಎಂದು ಹಲಬುತ್ತೇವೆ. ನಿರುತ್ಸಾಹ ಒಮ್ಮೆ ಪಾಯ ತೋಡಿದರೆ ಸಾಕು ಅದೇ ಅರಸ. ನಾವು ಗುಲಾಮರು. ಮುಸ್ಸಂಜೆ ಬಾನಂಚಿನಲ್ಲಿ ಮೂಡಿದ ಮಳೆಬಿಲ್ಲು ಕಂಡರೂ ಮಂಕು ಕಣ್ಣಿಗೆ. ಹೊಸದಾಗಿ ಅರಳಿದ ಹೂಗಳ ಹಿತವಾದ ಸುವಾಸನೆಗೂ ನಿರಾಸಕ್ತಿ. ನಿರುತ್ಸಾಹದ ನದಿ ಸರಾಗವಾಗಿ ಹರಿದುಕೊಂಡು ಹೋಗುತ್ತದೆ. ಅದು ಒಂದು ತರಹ ಜೀವಚ್ಛವದ ಹಾಗೆ. ಆಕಾಶದ ಉದ್ದಗಲ ಹಾರುವ ಹಕ್ಕಿ ಆಗಬೇಕು ಎಂದು ಕನಸು ಕಾಣುವ ಕಂಗಳಿಗೆ ನಿರುತ್ಸಾಹ ನಕ್ಷತ್ರಕನಂತೆ ಬೆನ್ನು ಬಿದ್ದು…
ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ಅಖಂಡ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಸಮಾಜವಿಜ್ಞಾನ ವಿಷಯದ ಪರೀಕ್ಷೆಯು ಬುಧವಾರ ಶಾಂತಿಯುತವಾಗಿ ಜರುಗಿತು.ಅಖಂಡ ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿದ್ದು. ಒಟ್ಟು 5,419 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಇಂದು 112 ವಿದ್ಯಾರ್ಥಿಗಳು ಗೈರು ಉಳಿಯುವ ಮೂಲಕ ಒಟ್ಟು 5,307 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ೪೭೦ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ೧೮ ಪರೀಕ್ಷಾ ಕೇಂದ್ರಗಳಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರವಾಗಿದೆ. ಹುಣಶ್ಯಾಳ ಪಿಬಿ ಗ್ರಾಮದ ಹತ್ತಿರುವಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೭೭ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ಅತಿ ಕಡಿಮೆ ಇರುವ ಪರೀಕ್ಷಾ ಕೇಂದ್ರವಾಗಿದೆ.ಪಟ್ಟಣದ ಬಾಲಕಿಯರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತ ನಕಲು ಕೊಡಲು ಜನರು ಓಡಾಡುವ ಮೊದಲ ದಿನದ ಪರೀಕ್ಷೆ ದಿನ ದೃಶ್ಯಕಂಡುಬಂದಿತ್ತು. ಇದರ ಹಿನ್ನೆಲೆಯಲ್ಲಿ ಇಂದು ಇದರ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿರುವದು ಕಂಡುಬಂದಿತ್ತು. ಪೊಲೀಸ್ ಸಿಬ್ಬಂದಿ ನಕಲು ಕೊಡಲು ಪ್ರಯತ್ನಿಸುವವರನ್ನು ಅಟ್ಟಾಡಿಸಿ…
ವಿಜಯಪುರ: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಡಾ ಗುರುಲಿಂಗ ಕಾಪಸೆ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ನಾಡಿನ ಅನುಭಾವಿ ಸಾಹಿತಿ ಡಾ ಗುರುಲಿಂಗ ಕಾಪಸೆ ನಿಧನ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ಹಾನಿ, ಅವರು ನಮ್ಮ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಜನಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ಹಲಸಂಗಿ ಪರಿಸರದಲ್ಲಿ ಹುಟ್ಟಿ ಬೆಳದವರು .ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಆಗಿದ್ದರು, ಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ, ಮಧುರಚೆನ್ನರ ಕುರಿತು ಸಂಶೋಧನೆ ಮಾಡಿ ಪಿಎಚ್ ಡಿ ಪದವಿ ಪಡೆದವರು. ಸಾಹಿತ್ಯ, ಸಂಶೋಧನೆ, ವಿಮರ್ಶೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರಿಂದ ನಮ್ಮ ಜಿಲ್ಲೆಗೆ ವಿಶೇಷ ಹೆಸರು ಬಂದಿದೆ ಎಂದರು.ಕಾರ್ಯಕ್ರಮದಲ್ಲಿ ಡಾ,ವ್ಹಿ ಡಿ ಐಹೊಳ್ಳಿ ಡಾ ಸಂಗಮೇಶ ಮೇತ್ರಿ ಡಾ: ದೊಡ್ಡಣ್ಣ ಬಜಂತ್ರಿ, ಪ್ರೊ.ವಿಶ್ವೇಶ್ವರ ಸುರಪುರ, ರಾಜೇಸಾಬ ಶಿವನಗುತ್ತಿ, ಕೆ ಸುನಂದನುಡಿನಮನ ಸಲ್ಲಿಸಿದರು.ಕಾಯ೯ಕ್ರಮದಲ್ಲಿರಾಜಶ್ರೀ ಮೋಪಗಾರ, ಅಲಿಸಾಬ ಖಡಕೆ,…
ವಿಜಯಪುರ: ಜನರಿಗೆ ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸಿದಾಗ ಸದೃಡ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲ ಯುವ ಸಮೂಹ ಸಮನ್ವದಿಂದ ಯುದ್ದೋಪಾಧಿಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ರಿಶಿ ಆನಂದ ಹೇಳಿದರುಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ವಿಜಯಪುರ ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ರ ಹಿನ್ನೆಲೆಯಲ್ಲಿ ಭವಿಷ್ಯದ ಮತ್ತು ಯುವ ಮತದಾರರಿಗೆ ಮತದಾನದ ಶಿಕ್ಷಣ ಪ್ರಮುಖ್ಯತೆ ಜಾಗೃತಿ ಮತ್ತು ಅರಿವು ಮೂಡಿಸುವ ಕುರಿತು ಪದವಿ ಮತ್ತು ಬಿ.ಎಡ್. ಕಾಲೇಜು ರಾಯಬಾರಿಗಳಿಗೆ ಸ್ವೀಪ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಜನರಿಗೆ ಚುನಾವಣೆ ಕುರಿತಾಗಿ ಹಲವಾರು ತಪ್ಪು ಕಲ್ಪನೆಗಳು ಇರುತ್ತವೆ, ಅದೆ ರೀತಿ ಅಲ್ಲಿಯ ಜನರಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಮತದಾನ ಮಾಡುವಲ್ಲಿ ಹಿಂದೇಟು ಹಾಕುತ್ತಿರುತ್ತಾರೆ. ತರಬೇತಿಗೆ ಬಂದಿರುವ ರಾಯಭಾರಿಗಳು ಜನರಿಗೆ ಮತದಾನದ ಜವಾಬ್ದಾರಿಯಿಂದ ಆಗುವ ಪ್ರಯೋಜನಗಳು,…
ವಿಜಯಪುರ: ಅಲಮೀನ್ ಆಸ್ಪತ್ರೆಯಲ್ಲಿ ಮಾ.೨೫ ರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯುತ್ತಿದ್ದು, ಮಾ.೩೦ರವರೆಗೆ ಬೆಳಗ್ಗೆ 9:00 ರಿಂದ ಸಂಜೆ 5 ರವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ ಎಂದು ಡಾ.ಸುರೇಶ್ ಕಾಗಲ್ಕರ್ ತಿಳಿಸಿದ್ದಾರೆ.ವಿಶ್ವದ ಅಂಕಿ ಅಂಶಗಳ ಪ್ರಕಾರ. ಎರಡು ಲಕ್ಷಕ್ಕಿಂತಲೂ ಹೆಚ್ಚು ಜನ ಭಾರತದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳು ಕಂಡು ಬರುತ್ತಾರೆ. ಮೂತ್ರಪಿಂಡಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಹಲವರು ಮೃತಪಡುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಮೂತ್ರಪಿಂಡದ ವೈಫಲ್ಯದ ಬಗ್ಗೆ ಅರಿವು ಹಾಗೂ ಮುಂಜಾಗ್ರತೆಯನ್ನು ಪ್ರತಿಯೊಬ್ಬರೂ, ವಿಶೇಷವಾಗಿ ಮಧುಮೇಹ ರಕ್ತದೊತ್ತಡದಿಂದ ಬೀಳುತ್ತಿರುವರು ವೈದ್ಯರ ಮಾರ್ಗದರ್ಶನದಂತೆ ಕಿಡ್ನಿ ತಪಾಸಣೆಯನ್ನು ಪ್ರತಿ ವರ್ಷ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ. ಈಗ ಆಲಮೀನ್ ವೈದ್ಯಕೀಯ ವಿದ್ಯಾಲಯದಲ್ಲಿ ಎಲ್ಲಾ ಶಸ್ತ್ರ ಚಿಕಿತ್ಸೆಗಳು ಸಲಕರಣೆಗಳು, ವಿಶೇಷವಾಗಿ ಮೂತ್ರಪಿಂಡ ಸಂಬಂಧಿಸಿದ ಅತಿ ಸೂಕ್ಷ್ಮ ಸಲಕರಣೆಗಳಾದ ನೆಪ್ರೋಸ್ಕೋಪ್, ಯುರೋಟ್ರೋ ಸ್ಕೋಪ್, ಲೀತೋ ಟಿಪ್ಸ್ ಗಳಿಂದ ಮೂತ್ರನಾಳದ ಹಾಗೂ ಕಿಡ್ನಿಯಲ್ಲಿರುವ ಹರಳುಗಳನ್ನು ಗಾಯ ಇಲ್ಲದೆ ಮೂತ್ರದ ಮುಖಾಂತರ ಹರಳು ಹೊರತೆಗೆಯಲಾಗುವುದು. ಹಾಗೂ ಮೂತ್ರಪಿಂಡಕ್ಕೆ…
ವಿಜಯಪುರ: ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಆರ್. ಧರ್ಮಸೇನಾ ರವರ ನಿರ್ದೇಶನದಂತೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ರಾಜು ಆಲಗೂರ ರವರ ಸಮ್ಮುಖದಲ್ಲಿ ಇಂಡಿ ತಾಲೂಕಿನ ರಾಜನಾಳ ತಾಂಡಾದ ನಿವಾಸಿ ರಾಜು ಶಂಕರ ಪವಾರ ಇವರನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲ್ಹಾರ: ಪಟ್ಟಣದಲ್ಲಿ ಮಂಗಳವಾರ ವರ್ಷದ ಕೊನೆಯ ಹಬ್ಬವಾದ ಹೋಳಿ ಹಬ್ಬವನ್ನು ಸರ್ವ ಸಮಾಜದವರು ಪರಸ್ಪರ ಒಬ್ಬರಿಗೊಬ್ಬರು ಬಣ್ಣವನ್ನು ಎರಚಿಕೊಳ್ಳುವ ಮೂಲಕ ಬಹು ವಿಜ್ರಂಬಣೆಯಿಂದ ಆಚರಣೆ ಮಾಡಿದರು.ಯುವ ಸಮೂಹದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಭಾಗವಹಿಸಿ ಯುವಕರ ಮಧ್ಯದಲ್ಲಿ ರಂಗಿನಾಟದ ರಂಗನ್ನು ಆಡುವುದರ ಮೂಲಕ ಯುವಕರಲ್ಲಿ ಉತ್ಸಾಹ ತುಂಬಿದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂಗಳ ಹಬ್ಬಗಳ ಆಚರಣೆಯಲ್ಲಿ ಹೋಳಿ ಹಬ್ಬವು ಕೂಡ ತನ್ನದೇ ಆದ ಸಂಪ್ರದಾಯದ ಮೂಲಕ ತಲೆ ತಲಾಂತರಗಳಿಂದ ಸರ್ವಜನಾಂಗದವರು ಪಾಲ್ಗೊಂಡು ಆಚರಣೆ ಮಾಡುವ ಹಬ್ಬವಾಗಿದೆ ಎಂದರು.ಪ್ರತಿಯೊಂದು ಕುಟುಂಬಗಳ ಸಮಾಜಿಕ ನಿರ್ವಹಣೆಯ ಹಲವಾರು ಕಷ್ಟ ಸುಖಗಳನ್ನು ಮರೆತು ಊರಿನ ಹಬ್ಬವಾಗಿ ಮುಂಬರುವ ದಿನಗಳಲ್ಲಿ ಅಂದರೆ ಯುಗಾದಿಯ ಹೊಸ ವರ್ಷದಿಂದ ನಮ್ಮೆಲ್ಲರ ಬದುಕು ವರ್ಣಮಯವಾಗಿ ಕಲರಪುಲ್ ಜೀವನ ಸಾಗಿಸುವಂತಾಗಲಿ ಎನ್ನುವುದರ ಪ್ರತೀಕವಾಗಿ ಬಣ್ಣ ಬಣ್ಣದ ಆಟವನ್ನು ಆಡುವ ಸಂಪ್ರದಾಯವಾಗಿದೆ. ಅಲ್ಲದೇ ನಮ್ಮೆಲ್ಲರ ಮನಸ್ಸಿನ ಕಾಮ ಕ್ರೋದ ಮದ ಮತ್ಸರ ದ್ವೇಷ ಅಸೂಯೆ ಭಾವನೆಗಳನ್ನು ಸುಟ್ಟು ಹಾಕುವದೇ ಕಾಮದಹನದ ಸಂಕೇತ ಆದ್ದರಿಂದ ನಾವುಗಳು…
ಕೆಂಭಾವಿ: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ವೃತಾಚರಣೆಯ ಈ ವೇಳೆ ಈ ಪವಿತ್ರ ಮಾಸದ ಉಪವಾಸ ವ್ರತವನ್ನು ನಾಡಿನ ಎಲ್ಲೆಡೆ ಮುಸ್ಲಿಂ ಬಾಂಧವರ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ. ಅದರಲ್ಲೂ ಚಿಣ್ಣರು ಕೂಡ ಪವಿತ್ರ ಉಪವಾಸ ವ್ರತ ಕೈಗೊಂಡು ಗಮನ ಸೆಳೆದಿದ್ದಾರೆ.ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ನಿವಾಸಿ ಏಳು ವರ್ಷದ ಮದಿಯಾ ಪತಿನ್ ಬಂದೇ ನವಾಜ್ ನಾಲ್ತವಾಡ ಈ ವ್ರತವನ್ನು ಶ್ರದ್ಧೆ, ನಿಷ್ಠೆಯಿಂದ ಕೈಗೊಂಡು ಗಮನ ಸೆಳೆದಿದ್ದಾರೆ.
