ವಿಜಯಪುರ: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಡಾ ಗುರುಲಿಂಗ ಕಾಪಸೆ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ನಾಡಿನ ಅನುಭಾವಿ ಸಾಹಿತಿ ಡಾ ಗುರುಲಿಂಗ ಕಾಪಸೆ ನಿಧನ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ಹಾನಿ, ಅವರು ನಮ್ಮ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಜನಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ಹಲಸಂಗಿ ಪರಿಸರದಲ್ಲಿ ಹುಟ್ಟಿ ಬೆಳದವರು .ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಆಗಿದ್ದರು, ಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ, ಮಧುರಚೆನ್ನರ ಕುರಿತು ಸಂಶೋಧನೆ ಮಾಡಿ ಪಿಎಚ್ ಡಿ ಪದವಿ ಪಡೆದವರು. ಸಾಹಿತ್ಯ, ಸಂಶೋಧನೆ, ವಿಮರ್ಶೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರಿಂದ ನಮ್ಮ ಜಿಲ್ಲೆಗೆ ವಿಶೇಷ ಹೆಸರು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ,ವ್ಹಿ ಡಿ ಐಹೊಳ್ಳಿ ಡಾ ಸಂಗಮೇಶ ಮೇತ್ರಿ ಡಾ: ದೊಡ್ಡಣ್ಣ ಬಜಂತ್ರಿ, ಪ್ರೊ.ವಿಶ್ವೇಶ್ವರ ಸುರಪುರ, ರಾಜೇಸಾಬ ಶಿವನಗುತ್ತಿ, ಕೆ ಸುನಂದ
ನುಡಿನಮನ ಸಲ್ಲಿಸಿದರು.
ಕಾಯ೯ಕ್ರಮದಲ್ಲಿ
ರಾಜಶ್ರೀ ಮೋಪಗಾರ, ಅಲಿಸಾಬ ಖಡಕೆ, ಸಂಗಮೇಶ ಸರೂರ, ಎಲ್ ಬಿ ಶೇಖ, ರಾಜು ಅಂಗಡಿ, ಅಜು೯ನ ಶಿರೂರ, ಗೋಪಾಲ ದೇಶಪಾಂಡೆ, ಮಹಾದೇವಪ್ಪ ಮೋಪಗಾರ, ಜಿ ಎಸ್ ಬಳ್ಳೂರ, ಪ್ರದೀಪ ನಾಯ್ಕೋಡಿ, ಕಲ್ಪನಾ ಸಾಗರ್, ಭೀಮಣ್ಣ ಬಜಂತ್ರಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

