ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ಅಖಂಡ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಸಮಾಜವಿಜ್ಞಾನ ವಿಷಯದ ಪರೀಕ್ಷೆಯು ಬುಧವಾರ ಶಾಂತಿಯುತವಾಗಿ ಜರುಗಿತು.
ಅಖಂಡ ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿದ್ದು. ಒಟ್ಟು 5,419 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಇಂದು 112 ವಿದ್ಯಾರ್ಥಿಗಳು ಗೈರು ಉಳಿಯುವ ಮೂಲಕ ಒಟ್ಟು 5,307 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ೪೭೦ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ೧೮ ಪರೀಕ್ಷಾ ಕೇಂದ್ರಗಳಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರವಾಗಿದೆ. ಹುಣಶ್ಯಾಳ ಪಿಬಿ ಗ್ರಾಮದ ಹತ್ತಿರುವಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೭೭ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ಅತಿ ಕಡಿಮೆ ಇರುವ ಪರೀಕ್ಷಾ ಕೇಂದ್ರವಾಗಿದೆ.
ಪಟ್ಟಣದ ಬಾಲಕಿಯರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತ ನಕಲು ಕೊಡಲು ಜನರು ಓಡಾಡುವ ಮೊದಲ ದಿನದ ಪರೀಕ್ಷೆ ದಿನ ದೃಶ್ಯಕಂಡುಬಂದಿತ್ತು. ಇದರ ಹಿನ್ನೆಲೆಯಲ್ಲಿ ಇಂದು ಇದರ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿರುವದು ಕಂಡುಬಂದಿತ್ತು. ಪೊಲೀಸ್ ಸಿಬ್ಬಂದಿ ನಕಲು ಕೊಡಲು ಪ್ರಯತ್ನಿಸುವವರನ್ನು ಅಟ್ಟಾಡಿಸಿ ಓಡಿಸುವದು ಕಂಡುಬಂದಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅಖಂಡ ತಾಲೂಕಿನಲ್ಲಿ ಬುಧವಾರ ಎಸ್ಎಸ್ಎಲ್ಸಿ ಪರೀಕ್ಷೆ ಬಹು ವ್ಯವಸ್ಥಿತವಾಗಿ, ಯಾವುದೇ ನಕಲು ನಡೆಯದೇ ಯಾವುದೇ ಅಹಿತಕರ ಘಟನೆಗಳು ನಡೆಯದೇ ವ್ಯವಸ್ಥಿತವಾಗಿ ಪರೀಕ್ಷೆ ನಡೆಯಿತು ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment
