ವಿಜಯಪುರ: ಅಲಮೀನ್ ಆಸ್ಪತ್ರೆಯಲ್ಲಿ ಮಾ.೨೫ ರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯುತ್ತಿದ್ದು, ಮಾ.೩೦ರವರೆಗೆ ಬೆಳಗ್ಗೆ 9:00 ರಿಂದ ಸಂಜೆ 5 ರವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ ಎಂದು ಡಾ.ಸುರೇಶ್ ಕಾಗಲ್ಕರ್ ತಿಳಿಸಿದ್ದಾರೆ.
ವಿಶ್ವದ ಅಂಕಿ ಅಂಶಗಳ ಪ್ರಕಾರ. ಎರಡು ಲಕ್ಷಕ್ಕಿಂತಲೂ ಹೆಚ್ಚು ಜನ ಭಾರತದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳು ಕಂಡು ಬರುತ್ತಾರೆ. ಮೂತ್ರಪಿಂಡಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಹಲವರು ಮೃತಪಡುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಮೂತ್ರಪಿಂಡದ ವೈಫಲ್ಯದ ಬಗ್ಗೆ ಅರಿವು ಹಾಗೂ ಮುಂಜಾಗ್ರತೆಯನ್ನು ಪ್ರತಿಯೊಬ್ಬರೂ, ವಿಶೇಷವಾಗಿ ಮಧುಮೇಹ ರಕ್ತದೊತ್ತಡದಿಂದ ಬೀಳುತ್ತಿರುವರು ವೈದ್ಯರ ಮಾರ್ಗದರ್ಶನದಂತೆ ಕಿಡ್ನಿ ತಪಾಸಣೆಯನ್ನು ಪ್ರತಿ ವರ್ಷ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ. ಈಗ ಆಲಮೀನ್ ವೈದ್ಯಕೀಯ ವಿದ್ಯಾಲಯದಲ್ಲಿ ಎಲ್ಲಾ ಶಸ್ತ್ರ ಚಿಕಿತ್ಸೆಗಳು ಸಲಕರಣೆಗಳು, ವಿಶೇಷವಾಗಿ ಮೂತ್ರಪಿಂಡ ಸಂಬಂಧಿಸಿದ ಅತಿ ಸೂಕ್ಷ್ಮ ಸಲಕರಣೆಗಳಾದ ನೆಪ್ರೋಸ್ಕೋಪ್, ಯುರೋಟ್ರೋ ಸ್ಕೋಪ್, ಲೀತೋ ಟಿಪ್ಸ್ ಗಳಿಂದ ಮೂತ್ರನಾಳದ ಹಾಗೂ ಕಿಡ್ನಿಯಲ್ಲಿರುವ ಹರಳುಗಳನ್ನು ಗಾಯ ಇಲ್ಲದೆ ಮೂತ್ರದ ಮುಖಾಂತರ ಹರಳು ಹೊರತೆಗೆಯಲಾಗುವುದು. ಹಾಗೂ ಮೂತ್ರಪಿಂಡಕ್ಕೆ ಬೇಕಾಗುವ ಕಸಿ ಬೇಕಾಗುವ ಎಲ್ಲಾ ಸಾಮಗ್ರಿಗಳು ಲಭ್ಯವಿದ್ದು, ನುರಿತ ಹಾಗೂ ಪರಿಣಿತ ವೈದ್ಯರು, ಯುರೋಜಿ ಲಿಸ್ಟ್, ಹಾಗೂ ನೇಪಾಜಿ ಲಿಸ್ಟ್, ಆಸ್ಪತ್ರೆಯಲ್ಲಿ ಲಭ್ಯವಿದ್ದು, ಅತಿ ಶೀಘ್ರದಲ್ಲಿ ಮೂತ್ರಪಿಂಡ ಕಸಿಯನ್ನು ಆಲ್ ಅಮೀನ್ ಆಸ್ಪತ್ರೆಯಲ್ಲಿ ಮಾಡಲು ನಾವು ಸನ್ನದ್ಧರಾಗಿದ್ದು ಮೂತ್ರಪಿಂಡ ವೈಫಲ್ಯದ ರೋಗಿಗಳು ಅತಿ ಕಡಿಮೆ ಖರ್ಚಿನಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು ಎಂದು ಡಾ.ಕಾಗಲ್ಕರ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಬಡವರ ಪಾಲಿಗೆ ಆಶಾದಾಯಕವಾದ ಆಲಮೀನ್ ಆಸ್ಪತ್ರೆಯಲ್ಲಿ ವಿಶೇಷವಾಗಿ ಎಲ್ಲಾ ಬಗೆಯ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡುತ್ತಿದ್ದು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಕ್ಯಾಂಪುಗಳು ಮಾಡುವ ಮುಖಾಂತರ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ತಿಳಿಸಲು ಜನಜಾಗೃತಿ ಮೂಡಿಸುವ ಮೂಲಕ ಸಂಸ್ಥೆಯ ಹಿರಿಯರಾದ ಆಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಮೇಡಂ ಸೈದಾ ಹೀನ ರವರು ಸದಾ ಸಂಸ್ಥೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಡಾ ಅಶೋಕ್ ಬಿರಾದಾರ, ಡಾ. ಅವಿನಾಶ್ ಓದು ಗೌಡರ್, ನ್ಯಾಪ್ರೋಲ್ ಜಿಸ್ಟ್ ರಾಕೇಶ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
