ಕೊಲ್ಹಾರ: ಪಟ್ಟಣದಲ್ಲಿ ಮಂಗಳವಾರ ವರ್ಷದ ಕೊನೆಯ ಹಬ್ಬವಾದ ಹೋಳಿ ಹಬ್ಬವನ್ನು ಸರ್ವ ಸಮಾಜದವರು ಪರಸ್ಪರ ಒಬ್ಬರಿಗೊಬ್ಬರು ಬಣ್ಣವನ್ನು ಎರಚಿಕೊಳ್ಳುವ ಮೂಲಕ ಬಹು ವಿಜ್ರಂಬಣೆಯಿಂದ ಆಚರಣೆ ಮಾಡಿದರು.
ಯುವ ಸಮೂಹದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಭಾಗವಹಿಸಿ ಯುವಕರ ಮಧ್ಯದಲ್ಲಿ ರಂಗಿನಾಟದ ರಂಗನ್ನು ಆಡುವುದರ ಮೂಲಕ ಯುವಕರಲ್ಲಿ ಉತ್ಸಾಹ ತುಂಬಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂಗಳ ಹಬ್ಬಗಳ ಆಚರಣೆಯಲ್ಲಿ ಹೋಳಿ ಹಬ್ಬವು ಕೂಡ ತನ್ನದೇ ಆದ ಸಂಪ್ರದಾಯದ ಮೂಲಕ ತಲೆ ತಲಾಂತರಗಳಿಂದ ಸರ್ವಜನಾಂಗದವರು ಪಾಲ್ಗೊಂಡು ಆಚರಣೆ ಮಾಡುವ ಹಬ್ಬವಾಗಿದೆ ಎಂದರು.
ಪ್ರತಿಯೊಂದು ಕುಟುಂಬಗಳ ಸಮಾಜಿಕ ನಿರ್ವಹಣೆಯ ಹಲವಾರು ಕಷ್ಟ ಸುಖಗಳನ್ನು ಮರೆತು ಊರಿನ ಹಬ್ಬವಾಗಿ ಮುಂಬರುವ ದಿನಗಳಲ್ಲಿ ಅಂದರೆ ಯುಗಾದಿಯ ಹೊಸ ವರ್ಷದಿಂದ ನಮ್ಮೆಲ್ಲರ ಬದುಕು ವರ್ಣಮಯವಾಗಿ ಕಲರಪುಲ್ ಜೀವನ ಸಾಗಿಸುವಂತಾಗಲಿ ಎನ್ನುವುದರ ಪ್ರತೀಕವಾಗಿ ಬಣ್ಣ ಬಣ್ಣದ ಆಟವನ್ನು ಆಡುವ ಸಂಪ್ರದಾಯವಾಗಿದೆ. ಅಲ್ಲದೇ ನಮ್ಮೆಲ್ಲರ ಮನಸ್ಸಿನ ಕಾಮ ಕ್ರೋದ ಮದ ಮತ್ಸರ ದ್ವೇಷ ಅಸೂಯೆ ಭಾವನೆಗಳನ್ನು ಸುಟ್ಟು ಹಾಕುವದೇ ಕಾಮದಹನದ ಸಂಕೇತ ಆದ್ದರಿಂದ ನಾವುಗಳು ಸಮಾಜದಲ್ಲಿ ಅನ್ಯೋನ್ಯತೆಯಿಂದ ಬದುಕೋಣ ಎಂದು ಕರೆ ಕೊಟ್ಟರು.
ಬಣ್ಣದ ಗಾಡಿಯ ಆಟದ ಯುವಕರ ಪಡೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೋಳಿ ಹಬ್ಬದ ಸವಿಯನ್ನು ಸವಿದರು.
ಈ ವೇಳೆ ಪಟ್ಟಣ ಪಂಚಾಯತಿ ಹಿಂದಿನ ಅಧ್ಯಕ್ಷ ಕಲ್ಲಪ್ಪ ಶಿ ಸೊನ್ನದ, ವಿರುಪಾಕ್ಷಿ ಕೋಲಕಾರ, ಸದಸ್ಯರಾದ ಅಪ್ಪಸಿ ಮಟ್ಯಾಳ, ಚಿನ್ನಪ್ಪ ನಾ ಗಿಡ್ಡಪ್ಪಗೋಳ, ರಾಮಣ್ಣ ಬಾಟಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮುದಕಪ್ಪ ಕಾಖಂಡಕಿ, ಶೇಖಪ್ಪ ಗಾಣಿಗೇರ, ಶಿವು ಮುರನಾಳ, ನೂರಾರು ಯುವಕರು ರಂಗಿನಾಟದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

