Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ವಿಜಯಪುರ: ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ ಎಂದು ಸಮಾಜ ಸೇವಕಿ ಉಮಾ ಪಾಟೀಲ ಹೇಳಿದರು.ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಆಯೋಜಿಸಿದ ಓದುಗರ ಚಾವಡಿಯ ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.ಇಂಡಿ ತಾಲ್ಲೂಕಿನ ಹಿರೆಮಸಳಿ ಗ್ರಾಮದ ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನವನ್ನು ನಾಗಠಾಣ ಪಬ್ಲಿಕ್ ಶಾಲೆಯ ಶಿಕ್ಷಕ ಶಿವಶರಣಪ್ಪ ಶಿರೂರು ಪರಿಚಯಿಸಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು…
ಬೆಳಗಾವಿ: ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಆದರೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯನ್ನು ಹೈಕಮಾಂಡ್ ಕೊಟ್ಟಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸುವ ಸಂಬಂಧ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಶೆಟ್ಟರ್ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ರಾಜ್ಯದ 28ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲ್ಲುತ್ತದೆ. ಎಲ್ಲಿಯೂ ಅಸಮಾಧಾನ ಆತಂಕ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಚಾರಕ್ಕಾಗಿ ಎಲ್ಲಾ ಸ್ಥಳಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.ಜಗದೀಶ್ ಶೆಟ್ಟರ್ ಅವರು ತುಂಬಾ ಒಳ್ಳೆಯ ನಾಯಕರಾಗಿದ್ದರಿಂದ ಅವರನ್ನು ನಾವು ಒತ್ತಾಯಿಸಿ ವಾಪಸ್ ಬಿಜೆಪಿಗೆ ಕರೆಸಿಕೊಂಡಿದ್ದೇವೆ. ಇದೀಗ ಅವರು ತುಂಬಾ ಉತ್ಸಕತೆಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ…
ಕೋರ್ಟ್ ಮುಂದೆ 10 ಅಂಶಗಳ ವಾದ ಮಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್! ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆ ನಡೆಸಿದ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ತಮ್ಮ ವಾದವನ್ನು ಮಂಡಿಸಿದರು. ಈ ಪ್ರಕರಣದಲ್ಲಿ ಅವರು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವರೆಂದು ನಿರೀಕ್ಷಿಸಲಾಗಿತ್ತು. ಬುಧವಾರ ಸಂಜೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಗುರುವಾರ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಹಗರಣದ ಬಗ್ಗೆ ಕೇಜ್ರಿವಾಲ್ “ದೊಡ್ಡ ಬಹಿರಂಗ” ಮಾಡುವುದಾಗಿ ಹೇಳಿದ್ದರು.ನ್ಯಾಯಾಲಯದ ಮುಂದೆ ಕೇಜ್ರಿವಾಲ್ ಮಂಡಿಸಿದ 10 ಅಂಶಗಳು ಇಲ್ಲಿವೆ:ದೇಶದ ಮುಂದೆ ಎಎಪಿ ಭ್ರಷ್ಟ ಎಂಬ ಅಪಪ್ರಚಾರವನ್ನು ಸೃಷ್ಟಿಸಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಕೇಜ್ರಿವಾಲ್ ಆರೋಪಿಸಿದರು.” ಅಬಕಾರಿ ನೀತಿ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳಿಂದ ನನ್ನ ಹೆಸರಿದೆ. ಹಾಲಿ ಸಿಎಂ ಒಬ್ಬರನ್ನು ಬಂಧಿಸಲು ನಾಲ್ಕು ಹೇಳಿಕೆಗಳು ಸಾಕೇ?” ಎಂದು ಎಎಪಿ ನಾಯಕ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು.”ಇದು ₹ 100 ಕೋಟಿ ಹಗರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಣದ ಜಾಡು ಇನ್ನೂ…
ಕೋಲಾರ ಟಿಕೆಟ್ ವಿಚಾರದಲ್ಲಿ ಬಂಡಾಯ | ಬಣ ಬಡಿದಾಟ | ರಾಜೀನಾಮೆ ಪ್ರಹಸನ ಬೆಂಗಳೂರು: ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಬಣ ರಾಜಕೀಯದಿಂದಾಗಿ ಬುಧವಾರ ರಾಜೀನಾಮೆ ಪ್ರಹಸನದಂತಹ ಹೈಡ್ರಾಮವೇ ನಡೆದಿತ್ತು. ಆಹಾರ ಸಚಿವ ಮುನಿಯಪ್ಪ ಅವರ ಆಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆಯೇ, ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಸೇರಿದಂತೆ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಐವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ನಡೆದ ಸಂಧಾನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಚಿವ ಡಾ.ಎಂ. ಸಿ. ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೊತ್ತನೂರು ಮಂಜುನಾಥ್ ಮತ್ತಿತರ ನಾಯಕರು ಪಾಲ್ಗೊಂಡರು.ಸಭೆ ಬಳಿಕ ಸುದ್ದಿಗಾರರೊಂದಿಗೆ…
ಬೆಂಗಳೂರು: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ ಕೋಲಾರ ಕಾಂಗ್ರೆಸ್ ನಾಯಕರು ಬಂದು ವಿಧಾನಸೌಧದಲ್ಲಿ ರಾಜಕೀಯ ಹೈಡ್ರಾಮವೇ ನಡೆದಿತ್ತು.ಸಚಿವ ಕೆಹೆಚ್ ಮುನಿಯಪ್ಪ ಸಂಬಂಧಿಕರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಐವರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಗುರುವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿ, ಕೋಲಾರದಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಯಾರ ವೈಯಕ್ತಿಕ ಪ್ರತಿಷ್ಠೆಗೂ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಯಾರೂ ರಾಜೀನಾಮೆ ನೀಡಲ್ಲ. ಟಿಕೆಟ್ ವಿಚಾರವಾಗಿ ಒತ್ತಡ ಇದೆ. ಪಕ್ಷ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಇಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು
ದೇವರಹಿಪ್ಪರಗಿ: ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್.ಪಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಸಿದ್ಧತಾಕಾರ್ಯ ಪರಿಶೀಲಿಸಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕೆ ಕಾಲೇಜು ಆವರಣಕ್ಕೆ ಗುರುವಾರ ಭೇಟಿ ನೀಡಿದ ಅಧಿಕಾರಿಗಳು, ಚುನಾವಣಾ ಆಯೋಗದ ಮಾರ್ಗಸೂಚಿ ಅನುಗುಣವಾಗಿ ಇರುವ ಸ್ಟಾçಂಗ್ ರೂಮ್ ವ್ಯವಸ್ಥೆ, ಸೌಲಭ್ಯಗಳು, ಪೂರ್ವತಯಾರಿಗಳ ಕುರಿತು ಪರಿಶೀಲಿಸಿದರು. ನಂತರ ಆಗಬೇಕಾದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಸಹಾಯಕ ಚುನಾವಣಾಧಿಕಾರಿ ಪ್ರವೀಣ ಜೈನ್, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಿಎಸೈ, ಬಸವರಾಜ ತಿಪ್ಪಾರೆಡ್ಡಿ ಸರ್ವೆ ತಪಾಸಕ ವಿ.ವೈ.ಹಳ್ಳಿ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ಅನೀಲಕುಮಾರ ರಾಠೋಡ, ಸಂಗಮೇಶ ಗ್ವಾಳೇದ, ಕುಮಾರ ಅವರಾದಿ, ರವಿ ಮೆಟಗಾರ ಸೇರಿದಂತೆ ತಾಲ್ಲೂಕು ಆಡಳಿತದ ಸಿಬ್ಬಂದಿ ಇದ್ದರು.
ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳುತ್ತಿದ್ದೆ. ಅವರು ಬೆಳಗೆರೆಯಲ್ಲಿ ಬಡವರ ಮಕ್ಕಳಿಗಾಗಿ ಶಾಲೆ ಕಟ್ಟಿಸಿದ್ದಾರೆ. ಮೂಲತಃ ಕೃಷಿಕರು. ವೃತ್ತಿಯಿಂದ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿಗೆ ಪುರಸ್ಕೃತರಾದವರು. ಜೊತೆಗೆ ಸಾಹಿತಿಗಳು. ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆ ನಾಡಿನ ಅನೇಕ ಹಿರಿಯ ಜನಪ್ರಿಯ ಸಾಹಿತಿಗಳ ಒಡನಾಟದಲ್ಲಿದ್ದಾರೆ. ಇಷ್ಟು ಗೊತ್ತಿತ್ತು. ಒಮ್ಮೆ ಚಳ್ಳಕೆರೆಯಲ್ಲಿ ಅನಿರೀಕ್ಷಿತವಾಗಿ ಅಷ್ಟೇನೂ ಎತ್ತರವಿಲ್ಲದ ಸಾತ್ವಿಕ ಮುಖ ಚಹರೆಯ ಶುಭ್ರ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ಕಂಡರು. ನನ್ನ ಗಮನ ಅವರೆಡೆಗೆ ಹರಿಯಲು ಅವರ ತಲೆಗೆ ವಿಶೇಷವಾಗಿ ಕಟ್ಟಿಕೊಂಡಿದ್ದ ಬಿಳಿ ಟವಲು ಕಾರಣವಾಗಿತ್ತು. ಪೋಟೋದಲ್ಲಿ ಕಂಡಿದ್ದ ಸಾಯಿಬಾಬರನ್ನು ನೆನಪಿಸಿತು ಇವರ ಶೈಲಿ. ಪಕ್ಕದಲ್ಲಿದವರು ಅವರೇ ನೋಡಪ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎಂದರು! ಆಗ ನನಗೆ ನಿಜವಾಗಿಯೂ ಖುಷಿಯಾಯ್ತು. ಇವರ ಬಗ್ಗೆ ಕೇಳ್ತ ಇದ್ದೆ, ಈಗ ನೇರವಾಗಿ ನೋಡ್ತಿರುವೆ ಎನಿಸಿತು. ಆದರೆ ಅವರ ಹತ್ತಿರ ಹೋಗಿ ಮಾತನಾಡಿಸುವಷ್ಟು ಧೈರ್ಯ ನನಗಿರಲಿಲ್ಲ. ಇದಾದ ನಂತರ ಅವರ ‘ಯೇಗ್ದಾಗೆಲ್ಲ ಐತೆ’ ಪುಸ್ತಕ ಓದಿದೆ. ಮುಕುಂದೂರು ಸ್ವಾಮಿಗಳ ಸಾನಿಧ್ಯದಲ್ಲಿ…
ಮನಗೂಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ ಕೆಲ ಕ್ಷೇತ್ರದಲ್ಲ ಬಿಜೆಪಿ ಪಕ್ಷವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಿಜೆಪಿ ಪಕ್ಷದ ಮುಖಂಡರೇ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸಕ್ಕರೆ. ಜವಳಿ. ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೋ ಇಲ್ಲವೊ ಎಂಬ ಸಂಶಯ ಬರುವಂತಾಗಿದೆ. ಚುನಾವಣೆ ಬಾಂಡನಲ್ಲಿ 6 ಸಾವಿರ ಕೋಟಿ ಹಗರಣ ಮಾಡಿದೆ ಎಂದು ಸುಪ್ರಿಂ ಕೋರ್ಟ ಹೇಳಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದರು.2018-19ರಲ್ಲಿ ಮೋದಿ ಅವರು ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು. 2014ರಲ್ಲಿ ವರ್ಷಕ್ಕೆ 2000 ಉದ್ಯೋಗ ನೀಡುವ ಸೇರಿದಂತೆ ಹಲವಾರು ಭರವಸೆ ನೀಡಿದ್ದರು 10 ವರ್ಷವಾದರೂ ಯಾವ…
*- ಇಲಾಹಿ ಇ. ಜಮಖಂಡಿ* ಚಿಮ್ಮಡ: ಬೇಸಿಗೆ ಬಂತೆಂದರೆ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ, ಬಟ್ಟೆ ತೊಳೆಯಲು ನೀರಿಗಾಗಿ ಜನರು ಹೊಲ-ಗದ್ದೆಗಳೆನ್ನದೆ ಐದು ಕಿ.ಮಿ.ವರೆಗೆ ಎಲ್ಲೆಡೆ ಅಲೆದಾಡುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಗ್ರಾಮದಲ್ಲಿ ನೀರಿನ ಸಮಸ್ಯೆಯೇ ಇಲ್ಲವೆಂದರೆ ನಂಬುತ್ತೀರಾ…ಹೌದು ರಬಕವಿ-ಬನಹಟ್ಟಿ ತಾಲೂಕಿನ ಸುಮಾರು ಹದಿನೆಂಟು ಸಾವಿರ ಜನಸಂಖ್ಯೆ ಹೊಂದಿರುವ ಅತೀ ದೊಡ್ಡ ಗ್ರಾಮವಾಗಿರುವ ಚಿಮ್ಮಡದಲ್ಲಿ ವರ್ಷವಿಡೀ ನೀರಿನ ಯಾವುದೇ ಸಮಸ್ಯೆಯಿಲ್ಲದೇ ಜನ ನೆಮ್ಮದಿಯಾಗಿದ್ದಾರೆ.ಈ ಭಾಗದ ಹಲವೆಡೆ ಬೇಸಿಗೆಯಲ್ಲಿ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ನಲ್ಲಿಗಳಿಗೆ ನೀರು ಹರಿಸಿದರೆ, ಇಲ್ಲಿ ಗಂಟೆಗಟ್ಟಲೆ ತಾಜಾ ಸಿಹಿನೀರು ನಲ್ಲಿಗಳ ಮೂಲಕ ಪ್ರತಿದಿನ ಹರಿಸಲಾಗುತ್ತಿದೆ. ಅವಶ್ಯವೆನಿಸಿದರೆ ದಿನಕ್ಕೆ ಎರಡು ಹೊತ್ತು ಬಿಡಲಾಗುತ್ತದೆ. ಇದರಿಂದ ಮಹಿಳೆಯರು ಕೊಳೆ ಬಟ್ಟೆ ತೊಳೆಯಲು ಹೊಲ ಗದ್ದೆಗಳಿಗೆ ಅಲೆಯದೆ ತಮ್ಮ ಮನೆಯ ಮುಂದೆಯೇ ನೀರು ಸಂಗ್ರಹಿಸಿಕೊಂಡು ಬಳಸುತ್ತಾರೆ. ಅಲ್ಲದೇ ಶುಧ್ಧ ಕುಡಿಯುವ ನೀರಿನ ಮೂರು ಘಟಕಗಳು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಗ್ರಾಮಸ್ಥರು ಈ ಮೊದಲು ಕುಡಿಯುವ ನೀರನ್ನು ಸುಮಾರು ಅರ್ಧ ಕಿ.ಮಿ. ದೂರದಲ್ಲಿ ಬ್ರಿಟೀಷರು ನಿರ್ಮಿಸಿದ ದೇಸಾಯಿಯರ…
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ನೇತೃತ್ವದ ಸಂಘಟನೇಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾಗಿ ವಿಜಯಪುರ ಸಮೀಪದ ಕವಲಗಿ(ಆಹೇರಿ) ಗ್ರಾಮದ ಪ್ರಕಾಶ ತೇಲಿ ಅವರನ್ನು ಆಯ್ಕೆ ಮಾಡಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಹಾಗೂ ತಾಲೂಕಾ ಅಧ್ಯಕ್ಷರಾದ ಅರುಣಗೌಡ ತೇರದಾಳ ಅವರು ಜಿಲ್ಲಾ ಕಛೇರಿಯಲ್ಲಿ ಆದೇಶ ನೀಡಿ ಸಂಘಟನೆ ಬಗ್ಗೆ ತಿಳಿಸಿದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಆದೇಶ ಪ್ರತಿ ನೀಡಿ ಸಂಘದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ದವಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷ್ಯ ಹಾಗೂ ಪರೋಕ್ಷವಾಗಿ ಜೊತು ಬೀಳದೇ ಯಾವ ರೈತರಿಗಾದರೂ ಅನ್ಯಾಯವಾದರೆ ಅವರ ನೆರವಿಗೆ ತಕ್ಷಣದಲ್ಲಿ ಬಂದು ಪರಿಹಾರ ಕಂಡುಕೊಳ್ಳಬೇಕು, ನಾಡಿನ ಎಲ್ಲಾ ರೈತರಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳ ಕುರಿತು ತಿಳಿ ಹೇಳಿ ರೈತರ ಆದಾಯವನ್ನು ದ್ವೀಗುಣ ಮಾಡಿಕೊಳ್ಳುವಂತೆ ಆಗಾಗ ರೈತರನ್ನು ಸೇರಿಸಿ ತರಬೇತಿ, ಕಾರ್ಯಾಗಾರಗಳನ್ನು ಮಾಡುತ್ತಾ ರೈತರ ಏಳಿಗೆಗೆ ಶ್ರಮವಹಿಸಲು ಬದ್ಧವಾಗಿರಬೇಕು, ರೈತ ಆತ್ಮಹತೈಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು…
