ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ನೇತೃತ್ವದ ಸಂಘಟನೇಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾಗಿ ವಿಜಯಪುರ ಸಮೀಪದ ಕವಲಗಿ(ಆಹೇರಿ) ಗ್ರಾಮದ ಪ್ರಕಾಶ ತೇಲಿ ಅವರನ್ನು ಆಯ್ಕೆ ಮಾಡಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಹಾಗೂ ತಾಲೂಕಾ ಅಧ್ಯಕ್ಷರಾದ ಅರುಣಗೌಡ ತೇರದಾಳ ಅವರು ಜಿಲ್ಲಾ ಕಛೇರಿಯಲ್ಲಿ ಆದೇಶ ನೀಡಿ ಸಂಘಟನೆ ಬಗ್ಗೆ ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಆದೇಶ ಪ್ರತಿ ನೀಡಿ ಸಂಘದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ದವಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷ್ಯ ಹಾಗೂ ಪರೋಕ್ಷವಾಗಿ ಜೊತು ಬೀಳದೇ ಯಾವ ರೈತರಿಗಾದರೂ ಅನ್ಯಾಯವಾದರೆ ಅವರ ನೆರವಿಗೆ ತಕ್ಷಣದಲ್ಲಿ ಬಂದು ಪರಿಹಾರ ಕಂಡುಕೊಳ್ಳಬೇಕು, ನಾಡಿನ ಎಲ್ಲಾ ರೈತರಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳ ಕುರಿತು ತಿಳಿ ಹೇಳಿ ರೈತರ ಆದಾಯವನ್ನು ದ್ವೀಗುಣ ಮಾಡಿಕೊಳ್ಳುವಂತೆ ಆಗಾಗ ರೈತರನ್ನು ಸೇರಿಸಿ ತರಬೇತಿ, ಕಾರ್ಯಾಗಾರಗಳನ್ನು ಮಾಡುತ್ತಾ ರೈತರ ಏಳಿಗೆಗೆ ಶ್ರಮವಹಿಸಲು ಬದ್ಧವಾಗಿರಬೇಕು, ರೈತ ಆತ್ಮಹತೈಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಪಣ ತೊಡಬೇಕು ಎಂದರು.
ಪ್ರಕಾಶ ತೇಲಿ ಅವರು ಆದೇಶ ಪ್ರತಿ ಸ್ವೀಕರಿಸಿ ಮಾತನಾಡುತ್ತಾ, ನಾಡಿನಲ್ಲಿ ಅನ್ನದಾತನಿಗೆ ದಿನನಿತ್ಯ ಹಲವಾರು ಸಮಸ್ಯೆಗಳು ತಲೆದೊರುತ್ತಿವೆ, ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಎಲ್ಲಾ ಕಡೆ ಲಂಚಬಾಕರೇ ತುಂಬಿಕೊಂಡಿದ್ದಾರೆ, ಅಂತವರ ವಿರುದ್ಧ ರೈತರಿಗೆ ಸರಕಾರಿ ಕೆಲಸಗಳನ್ನು ಲಂಚ ಇಲ್ಲದೇ ನಾವೆಲ್ಲರೂ ಸೇರಿ ಮಾಡಿಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಬರಗಾಲದಿಂದ ತತ್ತರಿಸಿರುವ ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತನೆ, ಜೊತೆಗೆ ವಿಜಯಪುರ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ರೈತರನ್ನು ಸಂಘಟನೆಗೆ ತಂದು ರೈತ ಪರ ಹೋರಾಟ ಮಾಡುತ್ತೇನೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ತಾ.ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬಬಾಷಾ ಮನಗೂಳಿ, ಮುಖಂಡರಾದ ಮಲ್ಲಿಕಾರ್ಜುನ ಮಹಾಂತಮಠ, ವೀರಣ್ಣಗೌಡ ಚಂ ಬಿರಾದಾರ, ಮಕಬುಲ್‌ಸಾಬ ಡೋ ಕಿಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

