Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಪ್ರಧಾನಿ ಮೋದಿಯವರು ಸರ್ವ ಧರ್ಮಿಯರಿಗೂ ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದ ಅಭಿವೃದ್ದಿಗೆ ಪೂರಕ ವಾತಾವರಣ ಸೃಷ್ಠಿಸುತಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಇಲ್ಲಿನ ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಜಾತಿ ಧರ್ಮ ಭೇದವಿಲ್ಲದೇ ಯೋಜನೆಗಳನ್ನು ರೂಪಿಸುತ್ತಾ ಕೇಂದ್ರ ಸರಕಾರ ಬಲಿಷ್ಠ ಭಾರತ ನಿರ್ಮಾಣಕ್ಕೆ ಫನ ತೊಟ್ಟಿದೆ, ಮಹಿಳಾ ಸಬಲಿಕರಣಕ್ಕೆ ಹೆಚ್ಚು ಉತ್ತೇಜನ ನೀಡುತ್ತಿರುವ ಸರಕಾರ, ರೈತರ ಆದಾಯ ವೃದ್ದಿಗೂ ಅದ್ಯತೆ ನೀಡಿದೆ. ಜೊತೆಗೆ ೩೭೦ ಕಲಂ ರದ್ದುಗೊಳಿಸುವ ಮೂಲಕ ಕಾಶ್ಮೀರವನ್ನು ದೇಶದೊಂದಿಗೆ ಜೋಡಿಸಿಕೊಂಡಿದೆಯಲ್ಲದೇ. ರಾಮಮಂದಿರ ನಿರ್ಮಿಸುವ ಮೂಲಕ ಬಹುಸಂಖ್ಯಾತ ಹಿಂದುಗಳ ಭಾವನೆಗೂ ಬೆಲೆ ನೀಡುವ ಮೂಲಕ ದೇಶವನ್ನು ಸರ್ವ ಸಂಪನ್ನಗೊಳಿಸುತ್ತಿದೆ. ಬಡವರ ಕಲ್ಯಾಣ, ಆರೋಗ್ಯ, ಆಹಾರ ಭದ್ರತೆ, ಯುವಕರಿಗೆ ಸ್ವಯಂ ಉದ್ಯೋಗ, ಹೊಸ ಉದ್ದಿಮೆಗಳನ್ನು ಪ್ರಾರಂಭಿಸುವ ಮೂಲಕ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.ಕೆನರಾ ಬ್ಯಾಂಕ ಹಿರಿಯ ವ್ಯವಸ್ಥಾಪಕ ಶ್ರೀಮತಿ ಉಮಾದೇವಿ,…
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಸುದರ್ಶನ ಬೇನೂರ ಮತ್ತು ಉಪಾಧ್ಯಕ್ಷರಾಗಿ ಪರಶುರಾಮ ಹೊಸಮನಿ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ವಿ.ವೈ. ಪತ್ತಾರ ತಿಳಿಸಿದ್ದಾರೆ.ಮಂಗಳವಾರ ಶಾಲೆಯಲ್ಲಿ ಎಸ್‌ಡಿಎಂಸಿ ರಚನಾ ಸಭೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಜೊತೆಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಸುದರ್ಶನ ಬೇನೂರ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಉಪಾಧ್ಯಕ್ಷ ಪರಶುರಾಮ ಹೊಸಮನಿ ಮಾತನಾಡಿ, ಶಾಲೆಯ ಅಗತ್ಯತೆಯನ್ನು ಮನಗಂಡು, ಸಮುದಾಯದ ಸಹಭಾಗಿತ್ವದೊಂದಿಗೆ ಶಾಲೆಯ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.ಶಿಕ್ಷಕ ಸಂತೋಷ ಬಂಡೆ ಅವರು ಎಸ್‌ಡಿಎಂಸಿ ರಚನೆ, ಅಧಿಕಾರ ಮತ್ತು ಕರ್ತವ್ಯಗಳು, ಸರ್ಕಾರದ ಪ್ರೋತ್ಸಾಹದಾಯಕ ಕಾರ‍್ಯಕ್ರಮಗಳು, ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪ್ರಾಥಮಿಕ ಶಿಕ್ಷಣದ ಮಹತ್ವದ ಜೊತೆಗೆ ಅನೇಕ ಶೈಕ್ಷಣಿಕ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕ ಎಸ್.ಆರ್. ಚಾಳೇಕರ ಮಾತನಾಡಿದರು.ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ, ಶಾಲಾ ಮುಖ್ಯ ಶಿಕ್ಷಕಿ ವಿ.ವೈ. ಪತ್ತಾರ,…
ದೇವರಹಿಪ್ಪರಗಿ: ಸಿದ್ಧೇಶ್ವರ ಸ್ವಾಮೀಜಿಯವರ ನಡೆ, ನುಡಿ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದು ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ವ್ಹಿ.ಕೆ.ಪಾಟೀಲ ಹೇಳಿದರು.ಪಟ್ಟಣದ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಮಾಸಿಕ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಪೂಜೆ ಹಾಗೂ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.ಸಂಸ್ಥೆಯಲ್ಲಿ ಅಧ್ಯಯನಿಸುವ ಪ್ರತಿ ಮಗುವಿಗೆ ಸ್ವಾಮೀಜಿಗಳ ಆಶಯದಂತೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಸಿಬ್ಬಂದಿಗಳು ಸೇರಿದಂತೆ ಪಾಲಕರ ಆಶಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.ಶಿಕ್ಷಕರಾದ ವಿವೇಕಾನಂದ ಹಿರೇಮಠ, ಶ್ರೀಕಾಂತ ತೋಳನೂರ ಮಾತನಾಡಿದರು.ನಂತರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗಗಳ ಮಾಸಿಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕ ಕಾಶೀನಾಥ ಯಂಭತ್ನಾಳ ಮಾರ್ಗದರ್ಶನದಲ್ಲಿ ವಿಜ್ಞಾನದ ವಿವಿಧ ವಿಷಯಗಳ ಮೇಲೆ ವಿದ್ಯಾರ್ಥಿಗಳು ಬಿಡಿಸಿದ ರಂಗೋಲಿ ಚಿತ್ರಗಳು ಗಮನ ಸೆಳೆದವು.ಶಿಕ್ಷಕರಾದ ಮಹಾಂತೇಶ ಬೀಳಗಿಮಠ, ಆನಂದ ಎ.ಕೆ, ಎಂ.ಎಸ್.ಪಾಟೀಲ, ರವಿ ಅಲೇಗಾಂವಿ, ಪಾಲಕರ ಪ್ರತಿನಿಧಿ ಎಂ.ಬಿ.ಬಿರಾದಾರ ಸೇರಿದಂತೆ ಸಿಬ್ಬಂದಿ,…
Udayarashmi kannada daily newspaper
ಗದಗ ಜಿಲ್ಲೆಯ ಸೂರಣಗಿಯಲ್ಲಿ ನಡೆದ ದುರ್ಘಟನೆ | ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ, ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಊರಿನ ಬೀದಿಯಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಘೋರ ದುರ್ಮರಣಕ್ಕೀಡಾದ ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.ಸಾಮೂಹಿಕ ಅಂತ್ಯಸಂಸ್ಕಾರ: ಯುವಕರ ಅಂತಿಮ ಸಂಸ್ಕಾರದಲ್ಲಿ ಇಡೀ ಸೂರಣಗಿ ಗ್ರಾಮವಲ್ಲದೆ ಸುತ್ತಮುತ್ತಲಿನ ಊರುಗಳ ಜನ ಸಹ ಭಾಗಿಯಾಗಿದ್ದರು. ವಿದ್ಯುತ್ ಪ್ರವಹಿಸಿ ಸಾವಿಗೀಡಾದ ಹಣಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ್ ಅವರ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.ಪರಿಹಾರ: ಮೃತ ಯುವಕರ ಕುಟುಂಬದವರು ಬಡವರಾಗಿದ್ದು ಕೂಲಿ ಮಾಡಿಕೊಂಡು ಜೀವನ ನಡೆಸುವವರಾಗಿದ್ದಾರೆ. ಅವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.ಸೂರಣಗಿ ಗ್ರಾಮಕ್ಕೆ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಪ್ರಾಥಮಿಕ ಆರೋಗ್ಶ ಕೇಂದ್ರದ ವೈದ್ಶಾಧಿಕಾರಿ ಡಾ.ವಿವೇಕಾನಂದ ಹೂವಿನಳ್ಳಿ ಸಕಾ೯ರದ ನಿಯಮ ಗಾಳಿಗೆ ತೂರಿ ಮೇಲಾಧಿಕಾರಿಗಳ ಭಯವಿಲ್ಲದೆ, ಕತ೯ವ್ಶಕ್ಕೆ ಹಾಜರಾಗದೆ ಸಂಬಳ ಪಡಿಯುತ್ತಿದ್ದಾರೆ. ಕೂಡಲೇ ಇವರನ್ನು ಕತ೯ವ್ಶದಿಂದ ಅಮಾನತು ಮಾಡಿಸುವಂತೆ ಒತ್ತಾಯಿಸಿ ಶನಿವಾರ ಪ್ರಗತಿಪರ ಸಂಘಟನೆ ಪ್ರಮುಖರು ಹಾಗೂ ಗ್ರಾಮಸ್ಥರು ಗ್ರಾಪಂ ಅಧ್ಶಕ್ಷೆ ರಜಿಯಾಬೇಗಂ ಕೋರವಾರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ದಲಿತ ಮುಖಂಡ ಶ್ರೀಶೈಲ್ ಜಾಲವಾದಿ, ಮುಖಂಡ ಮೊದಿನ್ ಶಾಬಾದಿ, ಪಿಕೆಪಿಎಸ್ ಬ್ಶಾಂಕ್ ಮಾಜಿ ನಿದೇ೯ಶಕ ಬಸನಗೌಡ ಪಾಟೀಲ ಮಾತನಾಡಿ, ಪ್ರಾಥಮಿಕ ಆರೋಗ್ಶ ಕೇಂದ್ರದ ಆಡಳಿತ ವ್ಶವಸ್ಥೆ ಸಂಪೂಣ೯ ಹದಗೆಟ್ಟು ಹೊಗಿದ್ದು, ಮುಖ್ಶ ವೈದ್ಶಾಧಿಕಾರಿ ಡಾ.ಹೂವಿನಳ್ಳಿ ಕತ೯ವ್ಶಕ್ಕೆ ಹಾಜರಾಗದ ಹಿನ್ನೆಲೆ ಇನ್ನುಳಿದ ಸಿಬ್ಬಂದಿ ಕೂಡಾ ಮನಸ್ಸಿಗೆ ಬಂದಂತೆ ವತಿ೯ಸುತ್ತಾ ಮಧ್ಶಾಹ್ನವೇ ಆಸ್ಪತ್ರೆಗೆ ಬೀಗ ಜಡಿದು ತಮ್ಮ ಖಾಸಗಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಆಸ್ಪತ್ರೆಯ ವ್ಶವಸ್ಥೆಯನ್ನು ಸರಿಪಡಿಸಬೇಕು. ಡಾ.ಹೂವಿನಳ್ಳಿ ಅವರನ್ನು ಕತ೯ವ್ಶದಿಂದ ವಜಾಗೊಳಿಸಿ ಬೇರೆ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ಕೆರೆಯಲ್ಲಿ ಕಳೆದೆರೆಡು ದಿನಗಳಿಂದ ಬೃಹತ್ ಮೊಸಳೆ ಪ್ರತ್ಶಕ್ಷವಾಗಿದೆ.ಭಾನುವಾರ ಮಧ್ಶಾಹ್ನ ಗ್ರಾಮದ ಯುವಕನೊಬ್ಬನಿಗೆ ಈ ಮೊಸಳೆ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆರೆ ಸುತ್ತಲಿನ ಪ್ರದೇಶದಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ತೆರಳುತ್ತಾರೆ. ವಿದ್ಶಾಥಿ೯ಗಳು, ಗ್ರಾಮಸ್ಥರು ಕೆರೆ ಸಮೀಪಕ್ಕೆ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಮೊಸಳೆ ದಾಳಿ ಮಾಡುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಕಳೆದ ನಾಲ್ಕು ವಷ೯ದಿಂದ ಈ ಬೃಹತ್ ಗಾತ್ರದ ಮೊಸಳೆ ಕೆರೆಯಲ್ಲಿದ್ದು, ಜನಜಂಗುಳಿ ಕಡಿಮೆಯಾದಾಗ ಹೊರಬರುತ್ತದೆ ಎಂದು ಶಬ್ಬಿರ್ ಮಖಾಂದಾರ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮುಖ್ಶ ಅರಣ್ಶಾಧಿಕಾರಿ, ಮುಖ್ಶ ಅಭಿಯಂತರ, ಜಲ ಸರಬರಾಜು ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇನ್ನಾದರೂ ಸಂಬಂಧಪಟ್ಟವರು ಕೆರೆ ಸುತ್ತಲಿನ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಮೊಸಳೆ ಸೇರಿ ಹಿಡಿಯುವಂತೆ ಶಾಲೆ ಮುಖ್ಶಗುರು ಮಲ್ಲಿಕಾಜು೯ನ ಭಜಂತ್ರಿ, ಕಾಂಗ್ರೆಸ್ ಯುವ ಮುಖಂಡ…
ಚಿಮ್ಮಡ: ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್‌ಬಿಸಿ) ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆ, ಚೆಕ್‌ಡ್ಯಾಂ ಗಳನ್ನು ತುಂಬಿಸಲು ಕಳೆದ ಒಂದು ವಾರದಿಂದ ಇಲ್ಲಿನ ಜಿಎಲ್‌ಬಿಸಿ ಕಾಲುವೆಯ ಮೂಲಕ ನೀರು ಹರಿಸಲಾಗುತಿದ್ದು, ಬೀಳಗಿ ಭಾಗದಲ್ಲಿ ನೀರು ಪೋರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ ಇನ್ನು ಕೆಲವು ಕೆರೆಗಳಿಗೆ ನೀರು ಪೋರೈಕೆಯಾಗುತ್ತಿಲ್ಲ ರಾಯಭಾಗ ಭಾಗದಿಂದ ಈ ಭಾಗಕ್ಕೆ ನೀರು ಸಮರ್ಪಕವಾಗಿ ಬರುತ್ತಿಲ್ಲ ಹೀಗಾಗಿ ಬೀಳಗಿ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಹಲವು ರೈತರು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು.ನೀರು ತಲುಪಿದ ಭಾಗದಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ ತಲುಪದ ಕಡೆ ಮಾತ್ರ ನೀರು ಹರಿಸುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು. ನೀರು ನಿಲ್ಲಿಸಿದರೆ ರೈತರು ಒಪ್ಪುವುದಿಲ್ಲ ಇದರಿಂದ…
ದೇವರಹಿಪ್ಪರಗಿ: ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಿರಂತರ ಶೋಷಣೆಯಾಗುತ್ತಿದ್ದು, ಮಕ್ಕಳ ಹಕ್ಕುಗಳ ಪಾಲನೆಯಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿಅಧಿಕಾರಿ ಎಸ.ಎ.ಕೊರವಾರ ಹೇಳಿದರು.ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣ ಯಾತ್ರೆ“ ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದಲ್ಲಿ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳ ರಕ್ಷಣೆಗಾಗಿ ಇರುವ ನಂಬರ ೧೦೦, ೧೧೨, ೧೦೯೮, ಸಹಾಯವಾಣಿ ಹಾಗೂ ತಮ್ಮ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ಕೋರವಾರ ವೈದ್ಯಾಧಿಕಾರಿ ಸಿದ್ದಪ್ಪ ಚೀರಣಕಲ್ಲ, ಸಿಆರ್‌ಪಿ ಕೆ.ಎಸ.ವಾಲಿಕಾರ, ನಿಲಯಪಾಲಕಿ ಎನ್.ಎಮ್ ದಫೇದಾರ, ಮುಖ್ಯಗುರು ಡಿ.ಎ.ಇನಾಮದಾರ, ಮಕ್ಕಳಿಗೆ ಇರುವ ಸೌಲಭ್ಯಗಳು ಮತ್ತು ಮಕ್ಕಳ ಕಾನೂನುಗಳ ಕುರಿತು ಮಾಹಿತಿ ನೀಡಿದರು.ವೇದಿಕೆಯಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಮಂಡಿಸಿ, ಕುಡಿಯುವ ನೀರು, ರಸ್ತೆ, ಕಾಲುವೆಗೆ ತಂತಿ ಬೇಲಿ, ಹಳ್ಳಕೆ ಸೇತುವೆ, ಬಸ್ಸಿನ ವೇಳೆ ಬದಲಾವಣೆ, ಅಂಗನವಾಡಿ…
ಮುದ್ದೇಬಿಹಾಳ : ಪಟ್ಟಣದ ಬಸವ ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ಅಯೋಧ್ಯಾ ನಗರಿಯಿಂದ, ಶ್ರೀ ರಾಮದೇವಾಲಯದ ಉದ್ಘಾಟನೆಯ ಆಹ್ವಾನಾರ್ಥವಾಗಿ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಕಲಶಾರ್ಚನೆ ಮತ್ತು ಕರೆಯೋಲೆ ಕಾರ್ಯಕ್ರಮ ಯಶ್ವಸ್ವಿಯಾಗಿ ನಡೆಯಿತು.ಈ ವೇಳೆ ತಾಲೂಕ ಕೆ.ಕೆ.ಒ ಅಧ್ಯಕ್ಷ ಯಶವಂತ ಕಲಾಲ, ತಾಲೂಕಾ ಕೆ.ಕೆ.ಎಮ್.ಪಿ ಅಧ್ಯಕ್ಷ ಶಿವಾಜಿ ವಿಜಾಪೂರ, ವಿ.ಎಚ್.ಪಿ ಅಧ್ಯಕ್ಷ ಎಸ್.ಡಿ.ರಾಂಪೂರ, ತಾಲೂಕಾ ಅಕ್ಷತಾ ಅಭಿಯಾನ ಪ್ರಮುಖ ಪ್ರಭು ಕಡಿ, ಶಿಕ್ಷಕ ರಾಮಚಂದ್ರ ಹೆಗಡೆ, ಎಮ್.ಪಿ.ದಂಡಾವತಿ, ಕುಬೇರ ಮಿರಜಕರ, ಶಸಾಪ ಅಧ್ಯಕ್ಷರಾದ ಬಸವರಾಜ ನಾಲತವಾಡ, ನಿವೃತ್ತ ಗುರುಮಾತೆಯವರಾದ ಶಾಂತಾ ಭಟ್ಟ, ಲಕ್ಷ್ಮೀ ಬಾಯಿ ತಾಡಪತ್ರೆ, ಲೀಲಾ ಭಟ್ಟ, ರಾಘವ ಘಾಟಗಿ, ಯಶೋಧರ ಮಿರಜಕರ, ಲಕ್ಷ್ಮೀ ಬಡಿಗೇರ, ಇಂದು ನಾಯಕ, ಶಂಕರ ಡಂಬಳ, ಹಣಮಂತ ನಲವಡೆ, ಶ್ರೀಕಾಂತ ಹಿರೇಮಠ, ವಿನಾಯಕ ಘಾಟಗೆ, ಗುರಪ್ಪ ತಾಡಪತ್ರಿ ಸೇರಿದಂತೆ ಮತ್ತೀತರರು ಇದ್ದರು.
