ಚಿಮ್ಮಡ: ಘೋಷಣೆ ಮಾಡಿದ್ದೇಲ್ಲವನ್ನು ಈಡೇರಿಸುವ ದೇಶದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ ಪಕ್ಷವಾಗಿದ್ದು ಪ್ರಸಕ್ತ ಲೋಕಸಭಾ ಚುನಾವಣೆಗಾಗಿ ಕ್ಷೇತ್ರದ ಎಲ್ಲ ಭಾಗಗಳ ಅವಶ್ಯಕತೆಗನುಸಾರ ಪ್ರೆತ್ಯೇಕ ಪ್ರಣಾಳಿಕೆ ರಚಿಸಲಾಗುವುದೆಂದು ಬಾಗಲಕೋಟ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಗ್ರಾಮದ ಉಮೇಶ ಪೂಜಾರಿಯವರ ತೋಟದ ಮನೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಮ್ಮ ತಂದೆಯವರ ಸರಳತೆಗೆ ವರಿಷ್ಠರು ನನಗೆ ತಮ್ಮ ಸೇವೆ ಮಾಡುವ ಈ ಜವಾಬ್ದಾರಿ ನೀಡಿದ್ದು, ರಾಜ್ಯ ಸರಕಾರದ ಜನಪರ ಯೋಜನೆಗಳಿಂದಾಗಿ ರಾಜ್ಯ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದ್ದು ಕಾರ್ಯಕರ್ತರು ಬೂತ ಮಟ್ಟದಲ್ಲಿ ಶೃಮಿಸಿದ್ದೇ ಆದಲ್ಲಿ ಈ ಭಾರಿ ಅತೀ ಹೆಚ್ಚು ಅಂತರದ ಗೆಲುವು ನಮ್ಮದಾಗಲಿದೆ ಎಂದರು.
ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಬಿಜೆಪಿ ಅವಧಿಯ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬಡವರು, ರೈತರು ಕಂಗಾಲಾಗಿದ್ದು ರೈತರ ಸಾಲ ಮನ್ನಾ ಮಾಡಿದ್ದು, ಬಡವರಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷವಾಗಿದ್ದು ಈ ಕಾರ್ಪೋರೆಟ್ ಆಡಳಿತದ ಬಿಜೆಪಿ ಪಕ್ಷವನ್ನು ಸೋಲಿಸಬೇಕಾಗಿದೆ ಎಂದರು.
ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷಣ ದೇಸಾರಟ್ಟಿ, ಸತ್ಯಜಿತ ಪಾಟೀಲ, ಶಿವಕುಮಾರ, ಸಿದ್ದು ಸಾಗಲಿಕರ, ಅಶೋಕ ಧಡೂತಿ, ವಿಠ್ಠಲ ಹೊಸಮನಿ, ಪ್ರವೀಣ ಪೂಜಾರಿ ಸಿದ್ದಲಿಂಗ ಹಳಮನಿ, ರವಿ ದೊಡವಾಡ ಮಾತನಾಡಿದರು,
ಅಡಿವೆಪ್ಪ ಪಾಟೀಲ, ಪರಪ್ಪಾ ಉರಭಿನವರ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

