ವಿಜಯಪುರ: ನಗರದ ಪ್ರಗತಿ ಸಾಹಿತ್ಯ ವೇದಿಕೆಯ ವತಿಯಿಂದ ನಿಡಗುಂದಿ ಪಟ್ಟಣದ ಬಸವರಾಜ ಹಾವೇರಿಯವರಿಗೆ ಅವರ ಸ್ವಗೃಹದಲ್ಲಿ ಸನ್ಮಾನ ಮಾಡಲಾಯಿತು.
ಆರೋಗ್ಯ ಇಲಾಖೆಯ ನೌಕರರಾದ ಬಸವರಾಜರವರು ಕನ್ನಡ ಡಿ.ಟಿ.ಪಿ.ಬಲ್ಲವರಾಗಿದ್ದು, ಹಲವಾರು ಕವಿಗಳ ಕವನಸಂಕಲನದ ಹಸ್ತಪ್ರತಿಗಳನ್ನು ಕವಿಗಳಿಂದ ಯಾವುದೆ ರೀತಿಯ ಹಣ ಪಡೆಯದೆ ಉಚಿತವಾಗಿ ಡಿ.ಟಿ.ಪಿ.ಕೆಲಸ ಮಾಡುತ್ತಿರುವ ಇವರ ನಿಸ್ವಾರ್ಥಕಾರ್ಯ ಮತ್ತು ಕನ್ನಡಸೇವೆಯನ್ನು ಕಂಡು ಈ ಸನ್ಮಾನ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಪ್ರಕಾಶ ಜಹಾಗೀರದಾರ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಚಪ್ಪ ಹಾವೇರಿ, ಶ್ರೀಮತಿ ನೀಲಮ್ಮ, ಗಿರೀಶ್ ಹೂಗಾರ, ರಾಜು ಪಟ್ಟಣಶೆಟ್ಟಿ, ಉಮೇಶ್ ಮತ್ತು ಅಶೋಕರವರು ಭಾಗವಹಿಸಿ ಬಸವರಾಜರವರ ಕನ್ನಡ ಸೇವೆಯ ಬಗ್ಗೆ ಮಾತನಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

