Author: editor.udayarashmi@gmail.com

ಸಿಂದಗಿ: ಪಟ್ಟಣದ ಯುವನಟ, ನಿರ್ದೇಶಕ, ನಿರ್ಮಾಪಕ ವಿಶ್ವಪ್ರಕಾಶ ಮಲಗೊಂಡ ಅವರ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ತುಷಾರ್ ಚಿತ್ರಕ್ಕೆ ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜರುಗಿದ ೨೦೨೪ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾವೈಕ್ಯ ಸಾರುವ ಹಾಗೂ ಸಾಮಾಜಿಕ ಸಂದೇಶವುಳ್ಳ ಒಳ್ಳೆಯ ಚಿತ್ರ ಎಂದು ಪರಿಗಣಿಸಿ ಅವಾರ್ಡ್ ನೀಡಲಾಗಿದೆ.ಇದೇ ಸಂದರ್ಭದಲ್ಲಿ ಶ್ರೀ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, ಚಿತ್ರನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಉದ್ಯಮಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ ಸೇರಿದಂತೆ ಅನೇಕರು ಇದ್ದರು.

Read More

ವಿಜಯಪುರ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಮ್ಮ ಮಡಿಲು ಚಾರಿಟೇಬಲ್ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಸಿಂದಗಿ: ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ವಿಜಯಪುರ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಮ್ಮ ಮಡಿಲು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಪಟ್ಟಣದ ಕಲಬುರಗಿ ರಸ್ತೆಯ ಹೊರವಲಯದಲ್ಲಿರುವ ಲೋಯಲ್ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಮಾಜದ ಉತ್ತಮ ಆಸ್ತಿಯನ್ನಾಗಿ ರೂಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಶಿಕ್ಷಣ ನೌಕರಿಗಾಗಿ ಅಲ್ಲ. ಅದು ಜ್ಞಾನಕ್ಕಾಗಿ. ಶಿಕ್ಷಣ ಕಲಿತು ನಾನು ರೈತ ಎಂದು ಹೇಳಿಕೊಳ್ಳಲು ನಾಚಿಕೊಳ್ಳಬೇಡಿ. ಯಾವುದಾದರೂ ಕೆಲಸ ಆಗಲಿ ಅದನ್ನು ಶ್ರದ್ಧೆಯಿಂದ ಮಾಡಿ ಅದರಲ್ಲಿ ತೃಪ್ತಿಯನ್ನು ಕಾಣಬೇಕು ಎಂದು ಬಬಲೇಶ್ವರ ನುಡಿದರು.ಈ ವೇಳೆ ವಿಜಯಪುರ ಜೆಸ್ವಿಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಫಾದರ್ ಫ್ರಾನ್ಸಿಸ್ ಮೆನೇಜಸ್, ಫಾದರ್ ಮ್ಯಾಕ್ಸಿಮ್, ಫಾದರ್ ರಾಬರ್ಟ್, ಪತ್ರಕರ್ತ ಸಲೀಮ್…

Read More

– ಸಂತೋಷ ಬಂಡೆ, ಶಿಕ್ಷಕರು ವಿಜಯಪುರ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಳಿ ಜೋಳ ಬೆಳೆಯಲಾಗುತ್ತದೆ. ಇದು ಈ ಭಾಗದ ಬಹುಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಈ ಜೋಳದ ತೆನೆ ಕಾಳು ಕಟ್ಟುವ ಹಂತದಲ್ಲಿದ್ದುದನ್ನು ಹಾಲ್ದೆನೆ ಅಥವಾ ಸೀತನಿ ಎಂದು ಕರೆಯುವರು.ಸೀತನಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಉಂಟು. ಸಾಮಾನ್ಯವಾಗಿ ಒಂದು ನೂರು ಗ್ರಾಂ ಸೀತನಿ ಸೇವಿಸಿದರೆ 316 ಗ್ರಾಂ ಕ್ಯಾಲೋರಿ, 10 ಗ್ರಾಂ ಪ್ರೊಟೀನ್, 3 ಗ್ರಾಂ ಫ್ಯಾಟ್, 6 ಗ್ರಾಂ ಫೈಬರ್, 69 ಗ್ರಾಂ ಕಾರ್ಬೋಹೈಡ್ರೇಟ್ಸ್ ಲಭಿಸಲಿದೆ ಎನ್ನುವದು ಶಿಕ್ಷಕರಾದ ಸಂತೋಷ ಬಂಡೆ ಅವರ ಅಭಿಪ್ರಾಯವಾಗಿದೆ.ಇದರಲ್ಲಿರುವ ವಿಟ್ಯಾಮಿನ್ “ಬಿ” ಚರ್ಮ ಮತ್ತು ಕೂದಲಿಗೆ ಒಳ್ಳೆಯ ಪೋಷಕಾಂಶ ಒದಗಿಸುತ್ತದೆ. ಸೀತನಿಯಲ್ಲಿರುವ ಮ್ಯಾಗ್ನೀಶಿಯಂ ಎಲುಬು ಮತ್ತು ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದೊಂದು ಫೈಬರಿನ ಮೂಲ ಎಂದರೆ ತಪ್ಪಾಗದು ಎಂದು ಶಿಕ್ಷಕ ರಾಘವೇಂದ್ರ ಮೊಗಳ ಅಭಿಪ್ರಾಯ ವ್ಯಕ್ತಪಡಿಸಿದರು.ಸೀತನಿಯು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಲು ಮತ್ತು ಮುಖ್ಯವಾಗಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು. ಜೋಳದ ಹಾಲ್ತೆನೆಗಳನ್ನು…

Read More

ವಿಜಯಪುರ: ರಾಮ ಮಂದಿರ ಉದ್ಘಾಟನೆಯ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಲು, ಜನವರಿ 22 ಸೋಮವಾರದಂದು ಸಿದ್ಧಸಿರಿ ಸೌಹಾರ್ದ ಸಹಕಾರಿಯ 158 ಶಾಖೆಗಳಿಗೆ ರಜೆ ಘೋಷಿಸಿ, ಸಿದ್ಧಸಿರಿ ಸೌಹಾರ್ದದ ಅಧ್ಯಕ್ಷರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಆದೇಶ ಹೊರಡಿಸಿದ್ದಾರೆಂದು ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.500 ವರ್ಷಗಳ ತಪಸ್ಸು, ಕೊಟ್ಯಂತರ ಹಿಂದೂ ಕಾರ್ಯಕರ್ತರು, ಸ್ವಾಮೀಜಿಗಳು, ಸಾಧು-ಸಂತರ ಕನಸು ನನಸಾಗುತ್ತಿದೆ. ಜ.22 ನಮ್ಮ ದೇಶದ ಭವಿಷ್ಯದ, ಭಾರತದ ಸ್ವಾಭಿಮಾನದ ಸಂಕೇತ, ಹಿಂದುತ್ವದ ಸ್ವಾಭಿಮಾನದ ಸಂಕೇತ, ಮೊಘಲರ ದಬ್ಬಾಳಿಕೆಯ ಗುಲಾಮಗಿರಿ ತೊಲಗಿಸಿದ ಸಂಕೇತದ ದಿನವಾಗಿದೆ. ಈ ದಿನ ಅವಿಸ್ಮರಣೀಯಗೊಳಿಸಲು, ಅಯೋಧ್ಯ ರಾಮ ಮಂದಿರ ಉದ್ಘಾಟನೆಯ ದಿನವಾದ ಜ.22 ರಂದು ನಡೆಯುವ ವಿಜಯೋತ್ಸವ ಸಮಾರಂಭಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ 158 ಸಿದ್ಧಸಿರಿ ಸೌಹಾರ್ದ ಶಾಖೆಗಳ ನೌಕರರಿಗೆ ರಜೆ ನೀಡಲಾಗಿದೆ.ಈ ರಜೆ ದಿನವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ಗ್ರಾಮ, ಪಟ್ಟಣ, ನಗರಗಳಲ್ಲಿ ಜರುಗುವ ಶ್ರೀರಾಮ ಉತ್ಸವದಲ್ಲಿ ಭಾಗ ವಹಿಸಬೇಕು. ಅಲ್ಲದೆ, ತಮ್ಮ…

Read More

ಕಾಂಗ್ರೆಸ್ ಬಲವಾದ ವಿರೋಧ | ಸಮಿತಿ ವಿಸರ್ಜನೆಗೆ ಕೋರಿಕೆ | ಸಂಸದೀಯ ಪ್ರಜಾಪ್ರಭುತ್ವ ಬುಡಮೇಲು ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿದ್ದು, ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ ಎಂದಿದೆ.ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ರಚಿಸಿರುವ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ನೇತೃತ್ವದ ಸಮಿತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದು, ಸಮಿತಿಯನ್ನು ವಿಸರ್ಜಿಸುವಂತೆ ಕೋರಿದ್ದಾರೆ.ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದರೊಂದಿಗೆ ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡದಂತೆ ಕೋವಿಂದ್ ಅವರಿಗೆ ಕಾಂಗ್ರೆಸ್ ಮನವಿ ಮಾಡಿದೆ.‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಕೇಂದ್ರದ ಉನ್ನತ ಮಟ್ಟದ ಸಮಿತಿಯ ಕಾರ್ಯದರ್ಶಿ ಡಾ.ನಿತಿನ್ ಚಂದ್ರ ಅವರಿಗೆ ಬರೆದ ನಾಲ್ಕು ಪುಟಗಳ ಪತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಿತಿಯ ರಚನೆ ಮತ್ತು…

Read More

ವಿಜಯಪುರ: ಮಹಾ ಮಾನವತಾವಾದಿ, ಸಮಾಜ ಸುಧಾರಣೆಯ ಮಹಾನಾಯಕ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದು, ಕರ್ನಾಟಕ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಸಚಿವರಾದ ಶರಣ ಶ್ರೀ ಎಂ ಬಿ ಪಾಟೀಲ ಹಾಗೂ ಸಂಪುಟದ ಎಲ್ಲ ಸಚಿವರಿಗೆ, ಶಾಸಕರಿಗೆ, ನಾಡಿನ ಸಮಸ್ತ ಮಠಾಧೀಶರಿಗೆ, ಸಮಸ್ತ ಬಸವಾಭಿಮಾನಿಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದರ ಜೊತೆಗೆ ಅವರ ವಚನ ಸಾಹಿತ್ಯ ಚಿಂತನೆಗಳನ್ನು, ಮನೆ ಮನಗಳಿಗೆ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಹೇಳಿರುವ ನೈಜ ಬಸವಾನುಯಾಯಿ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಲೆ, ಸಾಹಿತ್ಯ, ಸಂಗೀತ, ರಾಜಕೀಯ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಮಹಾತ್ಮ ವಿಶ್ವಗುರು ಬಸವಣ್ಣನವರು. ಅವರು…

Read More

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಾಶಿವಯೋಗಿ ವೇಮನರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಯೋಗಿ ಮೇಮನರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.ಬಸವೇಶ್ವರ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಸಿ ಎಸ್ ಹಿರೇಮಠ, ಮುಖ್ಯಗುರು ಜಗದೀಶ ಗುಮಶೆಟ್ಟಿ ಮಾತನಾಡಿ, ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ, ಅವರ ತತ್ವ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.ಈ ವೇಳೆ ಸಂಸ್ಥೆ ನಿರ್ದೇಶಕ ಸಿದ್ದಣ್ಣ ಚಳ್ಳಗಿ, ಕಾಶಿನಾಥ ಹೆಗ್ಗಣದೊಡ್ಡಿ, ಉಪನ್ಯಾಸಕರಾದ ಬಿ ಜಿ ಚನಗೊಂಡ, ಡಾ.ಜಿ ಜಿ ಮೇಡೆದಾರ, ಎಸ್ ಎಸ್ ಕಲಶೇಟ್ಟಿ, ರವಿಕುಮಾರ ಗುಮಶೇಟ್ಟಿ, ಬಸಪ್ಪ ಕುಂಬಾರ, ವಿಶ್ವನಾಥ ಸಿಂದಗಿ, ಎಸ್ ಎಸ್ ಕೋರವಾರಮಠ, ಎಸ್ ಎಸ್ ಪಿ ರಾಣಗಟ್ಟಿ, ಕೆ ಎಸ್ ದೇಸಾಯಿ, ನಿಂಗನಗೌಡ ಗುಂಡಕನಾಳ, ವ್ಹಿ ಟಿ ಜಾನಮಟ್ಟಿ, ಶಿವಾನಂದ ಹರಿಜನ, ವಿರೇಶ ಝಳಕಿ ಸೇರಿದಂತೆ ಇತರರು ಇದ್ದರು.

Read More

ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಜ.೨೧ ಭಾನುವಾರ ಬೆಳಗ್ಗೆ 9-00ಗಂಟೆಗೆ ಹಳೆಯ ಹೈಸ್ಕೂಲ್ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ನುಡಿನಮನ ಪ್ರಯುಕ್ತ ಈ ಶಿಬಿರ ಹಮ್ಮಿಕೊಂಡಿದ್ದು, ಶ್ರೀ ಸಾಯಿ ಕಾರ್ಡಿಯಾಕ್ ಮತ್ತು ಕ್ರಿಟಿಕಲ್ ಕೇರಸೆಂಟರ್ ಹಾಗೂ ಶ್ರೀ ಸಾಯಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಜಯಪುರ ಹಾಗೂ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊನವಾಡ ಮತ್ತು ಪ್ರತಿಭಾ ಸಾಹಿತ್ಯ ವೇದಿಕೆ, ಪ್ರಥಮ ಫೌಂಡೇಶನ್, ಕುಸುಮಾ ಫೌಂಡೇಶನ್ ಜನಾಬಾಯಿ ಫೌಂಡೇಶನ್, ರೈತ ಸಂಘ ಮಹಿಳಾ ಸಂಘಟನೆಗಳು ಸಾಂಸ್ಕೃತಿಕ ವೇದಿಕೆ ಸ್ವಾಮಿ ವಿವೇಕಾನಂದ ಸಂಘ ಮತ್ತು ಗ್ರಾಮ ಪಂಚಾಯತ್ ಹೊನವಾಡ ಇವರ ಸಹಯೋಗವಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಬಾಬುರಾವ್ ಮಹಾರಾಜರು ವಹಿಸಲಿದ್ದು, ಅಧ್ಯಕ್ಷತೆಯನ್ನು ರೇ ಸಿ ಪಾಟೀಲ, ಮುಖ್ಯ ಅತಿಥಿಗಳಾಗಿ ಡಾ|| ಸಂಜೀವ ಎಲ್ ಸಜ್ಜನರ್, ಡಾ|| ಸೋಮಲಿಂಗ ತಿಮ್ಮಶೆಟ್ಟಿ, ಎಸ್ ಜಿ ಲಕ್ಕುಂಡಿಮಠ, ನಳಿನಿಕಾಂತ ಸಾವಂತ, ಯಂಕಪ್ಪ ಉಪ್ಪಾರ, ಸುರೇಶ ಕಳ್ಳಿಮನಿ, ತುಕಾರಾಮ ದಡಕೆ, ಅರವಿಂದ ಹತ್ತಿಕಾಳ ಪಾಲ್ಗೊಳ್ಳಲಿದ್ದಾರೆ.

Read More

ವಿಜಯಪುರ: ಇಬ್ರಾಹಿಂಪೂರ ರೇಲ್ವೆ ಸ್ಟೇಶನ್ ಹತ್ತಿರ ಸಂತೋಷ ಮಾತಾ ಜಲನಗರ ಮತ್ತು ಸಾಯಿಪಾಕ್ ರಸ್ತೆಗಳ ಜೋಡಣೆಗಾಗಿ ರೇಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅನುಕೂಲಕ ಕಲ್ಪಿಸುವಂತೆ ಸಂಸದ ರಮೇಶ ಜಿಗಜಿಣಗಿ ಅವರು ರೇಲ್ವೆ ಇಲಾಖೆ ಹುಬ್ಬಳ್ಳಿ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರೆ.ಸಂಸದರು ರೇಲ್ವೆ ಮ್ಯಾನೇಜರ್ ಅವರಿಗೆ ಪತ್ರ ಬರೆದು, ಇಬ್ರಾಹಿಂಪೂರ ಹತ್ತಿರದ ರೇಲ್ವೆ ಕೆಳ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಕೆಳಸೇತುವೆಗೆ ಮಳೆ ನೀರು ಸುತ್ತುವರೆಯುವ ಸಂಭವವಿರುವುದರಿಂದ ಸದರಿ ನೀರು ನಿಲ್ಲದಂತೆ ಮಹಾನಗರ ಪಾಲಿಕೆಯಿಂದ ಕಾಮಗಾರಿ ಕೈಗೊಳ್ಳುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ ಸಂಸದರು, ರೇಲ್ವೆ ಅಧಿಕಾರಿಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಳಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Read More