ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ನಾಮಪತ್ರಗಳನ್ನು ಸ್ವೀಕರಿಸಲು ಏ.೧೨ ರಿಂದ ೧೯ ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಆದ ಟಿ.ಭೂಬಾಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಚುನಾವಣೆ ಅಧಿಸೂಚನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಮಪತ್ರಗಳನ್ನು ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ ೧೧ಗಂಟೆಯಿಂದ ಮಧ್ಯಾಹ್ನ ೩ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸಲು ಏ.೧೯ ಕೊನೆಯ ದಿನವಾಗಿರುತ್ತದೆ. ೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ.೨೨ರವರೆಗೆ ಕಾಲಾವಕಾಶವಿರುತ್ತದೆ. ಮೇ ೭ ರಂದು ಮತದಾನ ನಡೆಯಲಿದ್ದು, ಜು ೪ ರಂದು ಮತ ಎಣಿಕೆ ನಡೆಯಲಿದೆ. ಜು.೬ರಂದು ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಏ.೧೦ ರ ಅಂತ್ಯಕ್ಕೆ ೧೯,೪೩,೫೬೬ ಮತದಾರರಿದ್ದು ೯,೮೬,೭೭೮ ಪುರುಷ ಹಾಗೂ ೯,೫೬,೫೭೮ ಮಹಿಳಾ ಮತ್ತು ೨೧೦ ಇತರೆ ಮತದಾರರಿದ್ದಾರೆ. ಈ ಪೈಕಿ ೪೩,೪೬೮ ಯುವ ಮತದಾರರು, ೨೧,೭೬೪ ವೀಕಲಚೇತನ, ೧,೮೭೪ ಸೇವಾ ಮತದಾರರು ಇದ್ದಾರೆ ಎಂದರು. .
ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣಾ ಜರಗಿಸುವ ದೃಷ್ಟಿಯಿಂದ ವಿಧಾನಸಭಾ ಮತಕ್ಷೇತ್ರವಾರು ಒಟ್ಟು ೧೬೭ ಸೆಕ್ಟರ್ ಅಧಿಕಾರಿಗಳು, ೭೨ ಪ್ಲಾಯಿಂಡ್ ಸ್ಕ್ವಾಡ್, ೮೭ ಸ್ಟೆಟಿಕ್ ಸರ್ವಲೈನಸ್ ಟೀಮ್, ೨೪ ವಿಡೀಯೋ ಸರ್ವಲೈನಸ್ ಟೀಮ್, ೮ ವಿಡೀಯೋ ವಿವ್ಹಿಂಗ್ ಟೀಮ್, ೮ ಅಕೌಂಟಿಂಗ್ ಟೀಮ್ ರಚನೆ ಮಾಡಲಾಗಿದೆ ಎಂದು ಹೇಳಿದರು.
ದೂರು ನಿರ್ವಹಣೆಯಲ್ಲಿ ಪ್ರಥಮ ಸ್ಥಾನ:
ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ಸಿವಿಜಿಲ್ ತಂತ್ರಾAಶದಲ್ಲಿ ೩,೯೨೯ ದೂರುಗಳು ದಾಖಲಾಗಿದ್ದು, ಬಂದಂತಹ ದೂರುಗಳನ್ನು ಸಮರ್ಪಕವಾಗಿ ಬಗೆಹರಿಸಲಾಗಿರುತ್ತದೆ, ರಾಜ್ಯದಲ್ಲಿ ವಿಜಯಪುರ ಜಿಲ್ಲೆ ದೂರುಗಳ ನಿವಾರಣೆ ಮಾಡುವಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಮುಂಜಾಗೃತವಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದ್ದು, ಇಲ್ಲಿಯವರೆಗೆ ೩ ಕೋಟಿ ೨೪ ಲಕ್ಷ ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿದೆ. ೩,೭೦೭ ಲೀಟರ್ ಮದ್ಯ, ೬೨೪ ಗ್ರಾಂ ಡ್ರಗ್ಸ್ನ್ನು ವಶಕ್ಕೆ ಪಡೆಯಲಾಗಿದೆ. ಹಣ ಸೇರಿದಂತೆ ವಶಪಡಿಸಿಕೊಳ್ಳಲಾದ ಮಧ್ಯ, ಡ್ರಗ್ಸ್ನ ನ ಒಟ್ಟು ಮೌಲ್ಯ ೩ ಕೋಟಿ ೩೯ ಲಕ್ಷವಾಗುತ್ತದೆ ಎಂದು ಮಾಹಿತಿ ನೀಡಿದರು.
ಮುಕ್ತ, ಶಾಂತಿಯುತ ಹಾಗೂ ಸಮರ್ಪಕವಾಗಿ ಚುನಾವಣೆ ನಡೆಸಲು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮೊದಲನೇ ಹಂತದ ತರಬೇತಿಯನ್ನು ನೀಡಲಾಗಿದೆ. ಬರುವ ದಿನಗಳಲ್ಲಿ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಈಗಾಗಲೇ ಚುನಾವಣೆ ವೀಕ್ಷಕರು ನೀಯೋಜನೆಗೊಂಡಿರುತ್ತಾರೆ. ಜಿಲ್ಲೆಯಲ್ಲಿ ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ ೨,೯೦೦ ಶಸ್ತಾçಸ್ತçಗಳಿದ್ದು, ಈ ಪೈಕಿ ಕೇವಲ ೪೫ ಶಸ್ತ್ರಾಸ್ತ್ರಗಳಿಗೆ ಜೀವಬೆದರಿಕೆ ಇರುವ ವ್ಯಕ್ತಿ ಹಾಗೂ ಬ್ಯಾಂಕ್‌ನ ಭದ್ರತಾ ದೃಷ್ಟಿಯಿಂದ ವಿನಾಯತಿ ನೀಡಲಾಗಿದೆ, ಇನ್ನೂ ೭ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ ಎಂದು ಎಂದು ತಿಳಿಸಿದರು. ಅವಹೇಳನಕಾರಿ ಪ್ರಚೋದನೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡಿದ ಹಿನ್ನಲೆಯಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

