Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಫೆ.೨ ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ನಾಗರಿಕರಿಂದ ಅಭಿನಂದನಾ ಸಮಾರಂಭ ಹಾಗೂ ಕವಡಿಮಟ್ಟಿಯ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಲು ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆ ಹೆಚ್ಚುವರಿ ಎಸ್.ಪಿ ಶಂಕರ ಮಾರಿಹಾಳ ಪಟ್ಟಣದ ಎಂಜಿವ್ಹಿಸಿ ಕಾಲೇಜಿನ ಹೆಲಿಪ್ಯಾಡ, ಸಮಾರಂಭದ ಆವರಣವಾದ ತಹಶೀಲ್ದಾರ ಕಚೇರಿ, ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಜರುಗುವ ಕಾರ್ಯಕ್ರಮಗಳ ಸ್ಥಳ ಪರಿಶೀಲಿಸಿದರು.ಹೆಲಿಪ್ಯಾಡ್ ನಲ್ಲಿ ಧೂಳು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ, ಹೆಲಿಪ್ಯಾಡ ನ ಡಾಂಬರೀಕರಣವನ್ನು ಮತ್ತು ಬಿಳಿ ಬಣ್ಣದ ಎಚ್ ಅಕ್ಷರಕ್ಕೆ ಬಣ್ಣ ಬಳೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ ಕಚೇರಿಯ ಆವರಣದಲ್ಲಿ ನಡೆಯುವ ನಾಗರೀಕರಿಂದ ಅಭಿನಂದನಾ ಸಮಾರಂಭದ ವೇಳೆ ಪೊಲೀಸ್ ಬಂದೋಬಸ್ತ್ ಕುರಿತು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರೊಡನೆ ಚರ್ಚಿಸಿದರು. ಪೆಂಡಾಲ್ ನ ಮಾಲೀಕಗೆ ಸ್ಟೇಜ್ ಗಟ್ಟಿಯಾಗಿರುವಂತೆ, ಅಲ್ಲಲ್ಲಿ ಬ್ಯಾರಿಖೇಡ್ ಅಳವಡಿಸುವಂತೆ ಸೂಚಿಸಿದರು. ಪಿಎಸ್‌ಐ ಸಂಜೀವ ತಿಪರೆಡ್ಡಿ ಅವರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ಸೂಚಿಸಿದರು.
ತಿಕೋಟಾ: ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವವು ಇಡೀ ಜಗತ್ತಿನಲ್ಲಿಯೇ ಅತೀ ಶ್ರೇಷ್ಠವಾಗಿದೆ. ಈ ಗಣರಾಜ್ಯೋತ್ಸವ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಸಹ ಜಪಿಸುತ್ತಾ, ದೇಶದ ಒಳತಿಗಾಗಿ ದುಡಿಯಬೇಕು ಎಂದು ತಾಲ್ಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಹೇಳಿದರು.ಪಟ್ಟಣದ ತಾಲ್ಲೂಕ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ, ಸಹಾಯಕ ಲೆಕ್ಕಾಧಿಕಾರಿ ವಿ.ಎಸ್.ಪುಟ್ಟಿ, ತಾಂತ್ರಿಕ ಸಂಯೋಜಕ ಇದ್ದರು.ವಾಡೆ ಮೈದಾನ:ತಾಲ್ಲೂಕ ಆಡಳಿತ ವತಿಯಿಂದ ಪಟ್ಟಣದ ವಾಡೆ ಮೈದಾನದಲ್ಲಿ ತಹಶಿಲ್ದಾರ ಪ್ರಶಾಂತ ಚನಗೊಂಡ ಅವರಿಂದ ಧ್ವಜಾರೋಹಣ ನೆರವೇರಿತು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕೆಜಿಎಸ್ ಶಾಲೆ:ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಆರ್.ಎನ್.ಶೇಖ್ ದ್ವಜಾರೋಹಣ ನೆರವೇರಿಸಿದರು. ಕಂಪ್ಯೂಟರ್ ಕೋಣೆ, ನಲಿಕಲಿ…
ಮೋರಟಗಿ: ಸ್ವಾತಂತ್ರ‍್ಯದ ಕ್ರಾಂತಿಯ ಕಿಡಿ ಹಚ್ಚಿದ ಕರ್ನಾಟಕದ ಗಂಡೆದೆಯ ಹೋರಾಟಗಾರ, ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿ ಪುರುಷ ರಾಯಣ್ಣರ ದೇಶಭಕ್ತಿ ಮಕ್ಕಳಿಗೆ ತಿಳಿಸಬೇಕು ಎಂದು ತಮ್ಮಣ್ಣಸಾಹು ಬೋನಾಳ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ಹಮ್ಮಿಕೊಂಡ ಸಂಗೋಳ್ಳಿ ರಾಯಣ್ಣರ ಪುಣ್ಯಸ್ಮರಣೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ರಾಯಣ್ಣ, ಅವರ ಧೈರ್ಯ, ಶೌರ್ಯ, ಮೆಚ್ಚುವಂತದ್ದು ಕಿತ್ತೂರರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಹೆತ್ತ ತಾಯಿಗಿಂತ ಹೆಚ್ಚು ಆರಾಧಿಸಿ ಅವಳ ಆಜ್ಞೆಯಂತೆ ಬ್ರಿಟಿಷರ ರುಂಡಗಳನ್ನು ಚಂಡಾಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಸೇನಾನಿ ಸಂಗೊಳ್ಳಿ ರಾಯಣ್ಣರ ಆದರ್ಶ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಶಿವಾನಂದ ಕೆರಿಗೊಂಡ, ರಾವುತ್ರಾಯ ಪೂಜೆರಿ, ಶಿವಶರಣ ಕೆರಿಗೊಂಡ, ಭೀಮು ನಾಯಕ್, ನಿಂಗಣ್ಣ ಪೂಜಾರಿ,ಶಿವಾನಂದ ಕೆರಿಗೊಂಡ, ಹನಮಂತ ಹೂಗಾರ, ಕನಕಸೇನೆ ಅಧ್ಯಕ್ಷ ಶಿವಾನಂದ ಕೆರಿಗೊಂಡ, ರಾಯಣ್ಣ ಯುವಸೇನೆ ಅಧ್ಯಕ್ಷ ಮಂಜು ಮಯೂರ, ಸಂತೋಷ ಕೆರಿಗೊಂಡ, ಕೆಂಚು ಪೂಜಾರಿ, ಗುರು ಅಗಸರ ಸೇರಿದಂತೆ ಅನೇಕರು ಇದ್ದರು.
ಸಿಂದಗಿ: ರಾಜ್ಯದ ವಿವಿಧ ತಾಲೂಕುಗಳಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿ ಬರಗಾಲ ಛಾಯೆ ಮೂಡಿದೆ. ಅದರಲ್ಲಿ ಸಿಂದಗಿ ತಾಲೂಕು ಸಹ ಒಂದು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಗಣರಾಜ್ಯೋತ್ಸವ ಸಮಿತಿ ಹಮ್ಮಿಕೊಂಡ ತಾಲೂಕು ೭೫ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸಮರ್ಪಕವಾಗಿ ಕಾಯ್ ನಿರ್ವಹಿಸಿದಾಗ ಕ್ಷೇತ್ರವು ಬೆಳವಣಿಗೆಯಾಗುತ್ತೆ. ಅಟಲಜೀ ಜನಸ್ನೇಹಿ ಕೇಂದ್ರದ ೪೪ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿ ಸಿಂದಗಿ ಪ್ರಥಮ ಸ್ಥಾನದಲ್ಲಿದೆ. ಹೋಬಳಿ ಮಟ್ಟದಲ್ಲಿ ೩ನೆಯ ಸ್ಥಾನದಲ್ಲಿದೆ. ತಾಲೂಕು ಕಂದಾಯ ನ್ಯಾಯಾಲಯದಲ್ಲಿ ೨ ಮತ್ತು ೫ವರ್ಷದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇನ್ನೂ ೬ ತಿಂಗಳಿಗಿಂತ ಹಿಂದಿನ ಯಾವ ಪ್ರಕರಣಗಳಿಲ್ಲ. ಒಂದು ಪೈಕಿ ಪಾಣಿ ಪ್ರಕರಣ ತಾಂತ್ರಿಕ ದೋಷದಿಂದ ಮಾತ್ರ ಬಾಕಿಯಿದೆ ಎಂದರು.ಇದೇ ಸಂದರ್ಭದಲ್ಲಿ ಸಿಪಿಐ ಡಿ.ಹುಲುಗಪ್ಪ, ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಮಾಜಿ ಸೈನಿಕರ ಸಂಘದ…
ಯಡ್ರಾಮಿ: ಪ್ರಭು ಶ್ರೀರಾಮನನ್ನು ಬಿಟ್ಟು ಭಾರತವಿಲ್ಲ , ಭಾರತಬಿಟ್ಟು ರಾಮನಿಲ್ಲ. ಶ್ರೀರಾಮನಿಲ್ಲದ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಮತ್ತು ಸ್ವದೇಶಿ ಚಿಂತಕ ಮಹಾದೇವಯ್ಯ ಕರದಳ್ಳಿ ಕಲಬುರಗಿ ಅವರು ಹೇಳಿದರು.ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರುಘೇಂದ್ರ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆನ್ಲೈನ್ ಹುಣ್ಣಿಮೆ ಕಾರ್ಯಕ್ರಮದ ಸಂಗಮ -56ರಲ್ಲಿ ರಾಷ್ಟ್ರಪುರುಷ ಶ್ರೀರಾಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಅಯೋಧ್ಯೆಯ ಪ್ರಭು ಶ್ರೀರಾಮ ತನ್ನ ಬದುಕಿನುದ್ದಕ್ಕೂ ಉದಾತ್ತ ಮೌಲ್ಯಗಳನ್ನು ಅನುಸರಿಸಿ ಆದರ್ಶ ಮೆರೆದಿದ್ದಾನೆ. ಆತನಲ್ಲಿನ ಸತ್ಯ, ನಿಷ್ಠೆ ಪ್ರಜಾಪರಿಪಾಲನೆ ಹಾಗೂ ಧರ್ಮ , ಇತ್ಯಾದಿ ಶ್ರೇಷ್ಠ ಗುಣಗಳೇ ರಾಮನನ್ನು ಮಹಾದೇವರನ್ನಾಗಿಸಿದವು. ಸಾವಿರಾರು ವರ್ಷಗಳ ಹಿಂದೆ ಬದುಕಿ ಹೋದ ಶ್ರೀರಾಮ ಇವತ್ತಿಗೂ ಕೋಟ್ಯಂತರ ಭಾರತೀಯರ ಮನದಲ್ಲಿ ನೆಲೆಸಿರುವುದು ಹುಡುಗಾಟದ ವಿಷಯವಲ್ಲ. ರಾಮನ ಆದರ್ಶ ಗುಣಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುವಲ್ಲಿ ಯಾವ ಅನುಮಾನಗಳಿಲ್ಲ ಎಂದರು.ಪ್ರಭು ಶ್ರೀರಾಮಚಂದ್ರನನ್ನು ಧಾರ್ಮಿಕ ನಾಯಕ ಎಂದು ನೋಡದೇ ಆದರ್ಶ ರಾಷ್ಟ್ರಪುರುಷ…
ಆಲಮಟ್ಟಿ: ಭಾರತೀಯ ಸಂವಿಧಾನ ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ರವರು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಏಕತೆ, ಭಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ ಎಂದು ಮುಖ್ಯೋಪಾಧ್ಯಾಯ ಎಸ್.ಆಯ್. ಗಿಡ್ಡಪ್ಪಗೋಳ ನುಡಿದರು.ಸ್ಥಳೀಯ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯಲ್ಲಿ ಶುಕ್ರವಾರ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಣ ನೆರವೇರಿಸಿ ಅವರು ಮಾತನಾಡಿದರು.ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದಕ್ಕೂ ಮುನ್ನ ವಿದ್ಯಾರ್ಥಿನಿ ರತ್ನಾ ಜಲ್ಲಿ ಸಂವಿಧಾನ ಕುರಿತು ಮಾತನಾಡಿದಳು.ಪ್ರಾಥಮಿಕ, ಪ್ರೌಢ, ಪದವಿ-ಪೂರ್ವ,ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಧ್ವಜವಂದನೆ ಕಾರ್ಯಕ್ರಮ ಕುಮಾರ ಮುಜಾಯಿಮಿಲ್ ನದಾಫ್, ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಂ.ಹಿರೇಮಠ ಸಂಯೋಜಿಸಿದರು.ಎಂ.ಎಚ್.ಎಂ.ಡಿಗ್ರಿ ಕಾಲೇಜಿನ ಪ್ರಾಚಾರ್ಯ ಎಚ್.ಎನ್.ಕೆಲೂರ, ಕಾಲೇಜಿನ ಉಪನ್ಯಾಸಕ ಮಹಾಂತೇಶ ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೆಮುರಗಿ, ಸ್ಕೌಟ್ ಅಧಿಕಾರಿ ಎಂ.ಎಚ್.ಬಳಬಟ್ಟಿ, ಶ್ರೀಮತಿ:ಜಗದೇವಿ. ಕೆ,ಎಸ್.ಎಸ್.ಅಂಗಡಿ,ಮಹೇಶ ಗಾಳಪ್ಪಗೋಳ, ಮುಖ್ಯಶಿಕ್ಷಕಿ ಕೆ.ಎನ್.ಹರೇಮಠ, ರಿಯಾನಾ ಕಾಲೇಖಾನ, ಅಡುಗೆ ಮುಖ್ಯ ಶಿಕ್ಷಕಿ ಸುಮಿತ್ರಾ, ಲಕ್ಷಿಂಭಾಯಿ, ಮಮತಾ, ಕಮಾಲಾ ಲಮಾಣಿ, ಬಾನು, ಉಪಸ್ಥಿತರಿದ್ದರು,ಕು. ಕಾವೇರಿ ಅಕ್ಕೋಜಿ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಠನೆ ಇಂಡಿ: ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಯೇ ಮುಂದಿನ ೨೦೨೮ರ ವಿಧಾನ ಸಭೆಯ ಚುನಾವಣೆ ಎದುರಿಸುತ್ತೇನೆ. ಜಿಲ್ಲೆ ಮಾಡದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ನಾನು ಯಾವತ್ತಿಗೂ ಬಧ್ಧತೆಯ ರಾಜಕಾರಣ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪುನರುಚ್ಚರಿಸಿದ್ದಾರೆ.ಶುಕ್ರವಾರ ಇಂಡಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಇಂಡಿ ತಾಲ್ಲೂಕಿನ ಅಭಿವೃದ್ಧಿಗಾಗಿ ಚಿಮ್ಮಲಗಿ, ಮುಳವಾಡ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾಗದ ರೈತರ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ರೇವಣಿಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗಿದೆ. ಕೋಲಾರದಿಂದ ಚಡಚಣ ತಾಲ್ಲೂಕಿನ ಸಾವಳಸಂಗ ಗ್ರಾಮದ ಗುಡ್ಡದವರೆಗೆ ನೀರು ತಂದು ಇಂಡಿ ತಾಲ್ಲೂಕಿನ ೨೮ ಕೆರೆಗಳು ಮತ್ತು ಚಡಚಣ ತಾಲ್ಲೂಕಿನ ೮ ಕೆರೆಗಳನ್ನು ತುಂಬಿಸುವ ಕೆಲಸ ಕೈಗೆತ್ತಿಕೊಂಡಿದೆ ಎಂದರು.ಇಂಡಿ, ಚಡಚಣ, ಸಿಂದಗಿ ತಾಲ್ಲೂಕುಗಳ ದಂಡೆಗೆ ಹರಿದಿರುವ ಭೀಮಾ ನದಿಯಿಂದ ೧೫ ಟಿಎಂಸಿ ನೀರಿನ ಬಳಕೆಯಾಗಬೇಕಿದೆ. ಈ ಬಗ್ಗೆ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವದು.…
ಗಣರಾಜ್ಯೋತ್ಸವದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಇಂಡಿ: ಇಡೀ ಪ್ರಪಂಚದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ, ಸರ್ವಧರ್ಮ ಸಹಿಷ್ಣುತೆ ಗಣತಂತ್ರ ವ್ಯವಸ್ಥೆಯ ಮೂಲ ಆಶಯ. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಶಾಸಕ, ವಿಧಾನಸಭೆ ಅಂದಾಜು ಸಮೀತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ಶುಕ್ರವಾರ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ೭೫ ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶ ಹಾಗೂ ವ್ಯಕ್ತಿಯ ಆತ್ಮ ಗೌರವ ಪ್ರತೀಕವಾಗಿರುವ ಸಂವಿಧಾನ ತೋರುವ ಬೆಳಕಿನಲ್ಲಿ ಜವಾಬ್ದಾರಿಯ ಹೆಜ್ಜೆ ಹಾಕೋಣ ಎಂದ ಅವರು, ಇಂಡಿ ತಾಲೂಕು ಸತತ ಬರಗಾಲಪೀಡಿತ ಪ್ರದೇಶವಾಗಿದೆ. ಈ ಭಾಗದ ನೀರಾವರಿ ಕಾರ್ಯಗಳು ಸಮರೋಪಾದಿಯಲ್ಲಿ ಆಗಬೇಕಾಗಿದೆ. ಅದಕ್ಕಾಗಿ ಪ್ರಥಮ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದ ಅವರು ಈ ಶತಮಾನ ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ನಡೆ-ನುಡಿ ಪಾಲಸಿ ನಮ್ಮ ಯುವಕರು ಅವರ ಹಾಕಿ ಕೊಟ್ಟ ಮಾರ್ಗದಲ್ಲಿ…
ವಿಜಯಪುರ: ವಿಜಯಪುರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನ ಜಾರಿಗೆ ಬಂದ ಪವಿತ್ರ ದಿನ ಗಣರಾಜ್ಯೋತ್ಸವ, ಡಾ.ಬಿ.ಆರ್. ಅಂಬೇಡ್ಕರ ಅವರು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ, ಹಕ್ಕು ಗಳು, ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು ಹೀಗೆ ಜಗತ್ತಿನಲ್ಲೇ ಮಾದರಿ ಸಂವಿಧಾನವಾಗಿದೆ ಎಂದರು.ಸಂಸದ ರಮೇಶ ಜಿಗಜಿಣಗಿ, ಬೆಳಗಾವಿ ವಿಭಾಗ ಪ್ರಭಾರಿಗಳಾದ ಚಂದ್ರಶೇಖರ್ ಕವಟಗಿ, ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ್, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ವಿಜುಗೌಡ ಪಾಟೀಲ್, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಮಲ್ಲನಗೌಡ ಪಾಟೀಲ, ಬಸವರಾಜ ಬಿರಾದಾರ ಹಾಗೂ ಪಕ್ಷದ ಜಿಲ್ಲಾ ಪದಾಧಿಕಾರಿಗಳು ನಗರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ದೇವರಹಿಪ್ಪರಗಿ: ಭಾರತದ ಸಂವಿಧಾನ ಎಲ್ಲ ಜಾತಿ, ಮತ, ಪಂಥಗಳ ಧರ್ಮಗ್ರಂಥವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ವಿಶೇಷ ಉಪನ್ಯಾಸಕರಾಗಿ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಮೇಶ ಮಡಿಯಾಳಕರ ಉಪನ್ಯಾಸ ನೀಡಿದರು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸೈ ಬಸವರಾಜ ತಿಪರಡ್ಡಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಮ್.ವಾಲಿಕಾರ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ, ಕಾಶೀನಾಥ ಬಜಂತ್ರಿ, ಬಶೀರ್‌ಅಹ್ಮದ್ ಬೇಪಾರಿ, ಶಾಂತಯ್ಯ ಜಡಿಮಠ, ಸುಮಂಗಲಾ ಸೇಬೆನವರ, ಕಾಶೀನಾಥ ಜಮಾದಾರ, ನಾಮನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಹುಸೇನ್…
