ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ “ವಿಜಯಪುರ ಜಿಲ್ಲಾ ಛಾಯಾಗ್ರಾಹಕರ ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ತಾಲೂಕಿನ ಸಂಘದ ಸದಸ್ಯರ ಮಕ್ಕಳಿಗೆ 2025-2026ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.80% ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ. ಸದ್ಯಸ್ಯರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸಂಘ ದಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.
ವಿಜಯಪುರ ಜಿಲ್ಲೆಯ ಹಾಗೂ ತಾಲೂಕಿನ ಸಂಘದ ಸದಸ್ಯರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯ ಧೃಡೀಕೃತ ಅಂಕಪಟ್ಟಿ, ಆಧಾರ ಕಾರ್ಡ, ವಿದ್ಯಾರ್ಥಿಯ ಬ್ಯಾಂಕ್ ವಿವರ, ಇತ್ತಿಚ್ಚಿನ ಎರಡು ಪಾಸಪೋರ್ಟ ಅಳತೆಯ ಭಾವಚಿತ್ರ ಹಾಗೂ ಛಾಯಾಗ್ರಾಹಕರ ಸಂಘದ ಗುರುತಿನ ಚೀಟಿಯೊಂದಿಗೆ ದಿನಾಂಕ 15-08-2026ರ ಒಳಗಡೆ ಸಂಘದ ಕಛೇರಿ, ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಅಂಗಡಿ ನಂ. 201, ಮೊದಲನೆ ಮಹಡಿ, ಎಸ್.ಎಸ್. ಕಾಂಪ್ಲೇಕ್ಸ್, ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಬಿ.ಎಲ್.ಡಿ.ಇ. ರಸ್ತೆ, ವಿಜಯಪುರ-586101 ಇಲ್ಲಿಗೆ ತಲುಪಿಸಲು ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧ್ಯಕ್ಷರು, ರಮೇಶ ಚವ್ಹಾಣ ಮೊ : 9611563508, ಕಾರ್ಯದರ್ಶಿ, ಸತೀಶ ಕಲಾಲ ಮೋ : 9900905291, ನಿರ್ದೇಶಕರಾದ, ಸುನೀಲ ಗಲಗಲಿ 9448897073 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
