ಚಿಮ್ಮಡ: ಆದ್ಯ ವಚನಕಾರ ದೇವಾಂಗ ಸಮಾಜದ ಆರಾಧಕ ದೇವರ ದಾಸಿಮಯ್ಯನವರ ಆದರ್ಶ ಮನುಕುಲಕ್ಕೆ ಸಂದೇಶ ನೀಡಿದೆಯಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ದಾಸಿಮಯ್ಯ ವೃತ್ತದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯನವರ ಜಯಂಯೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ದಾಸಿಮಯ್ಯನವರು ಒಂದೇ ಕುಲಕ್ಕೆ ಸಿಮಿತವಾಗಿರದೆ ಇಡೀ ಮನುಕುಲಕ್ಕೇ ಸಂದೇಶನೀಡುವ ಮಹಾನ್ ವ್ಯಕ್ತಿಯಾಗಿದ್ದರು, ಅವರ ವಚನ ಸಾಹಿತ್ಯ ನಾಡಿನೆಲ್ಲೆಡೆ ಮನೆಮಾತಾಗಿದ್ದು ವಚನಗಳ ಮೂಲಕವೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆಂದರು.
ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ ೧೧ನೇ ಶತಮಾನದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜರ ಓರೆ ಕೋರೆಗಳನ್ನು ತಿದ್ದಿದ ಕೀರ್ತಿ ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸಮಾಜದ ಪ್ರಮುಖರಾದ ಶ್ರೀಕಾಂತ ಜಾಡಗೌಡರ ವಹಿಸಿದ್ದರು, ಅಶೋಕ ಧಡೂತಿ, ರಾಮಣ್ಣ ಬಗನಾಳ, ಗ್ರಾಂ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಬೀರಪ್ಪಾ ಹಳೆಮನಿ, ಮನೋಜ ಹಟ್ಟಿ, ಚನ್ನಪ್ಪಾ ಬಿಳ್ಳೂರ, ಬಸವರಾಜ ಕುಂಚನೂರ, ದುಂಡಪ್ಪಾ ಪಾಟೀಲ, ಪರಪ್ಪಾ ಬರಗಲ್, ಸುರೇಶ ಅಥಣಿ, ಬಸವರಾಜ ಕರಡಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

