ಸಿಂದಗಿ: ರಾಜ್ಯದ ಕಟ್ಟ ಕಡೆಯ ವ್ಯಕ್ತಿಯೂ ಕೂಡಾ ನೆಮ್ಮದಿಯ ಜೀವನ ಕಳೆಯಬೇಕು ಎಂದು ಕನಸು ಕಟ್ಟಿದ ನಮ್ಮ ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಪಂಚ ಯೋಜನೆಗಳು ಮನೆ ಮನೆಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ ದೇಶದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.
ಪಟ್ಟಣದ ಸಿಂದಗಿ ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ವಾರ್ಡ್ ನಂ.೯ ಮತ್ತು ೧೭ರಲ್ಲಿ ವಿಜಯಪುರ ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳನ್ನು ಶಾಸಕ ಅಶೋಕ ಮನಗೂಳಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸುತ್ತಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ, ಯುವಕರಿಗೆ ಉದ್ಯೋಗದ ವಿಚಾರದಲ್ಲಿ, ಮಹಿಳಾ ಸ್ವಾವಲಂಬನೆಯ ವಿಚಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಸುಳ್ಳಿನ ಭರವಸೆಯನ್ನು ನೀಡಿ ಜನರನ್ನು ಮರಳು ಮಾಡುತ್ತಿದೆ. ಹತ್ತು ವರ್ಷದ ಅಧಿಕಾರ ಅವಧಿಯಲ್ಲಿ ಈ ದೇಶ ಸಂಪೂರ್ಣವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾಗಿತ್ತು. ಆದರೆ ಇನ್ನು ಈ ದೇಶದಲ್ಲಿ ಜ್ವಲಂತ ಸಮಸ್ಯೆಗಳು ಹಾಗೆ ಉಳಿದುಕೊಂಡಿವೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
ಈ ವೇಳೆ ಪಂಚ ಯೋಜನೆ ಪ್ರಾಧಿಕಾರದ ತಾಲೂಕ ಅಧ್ಯಕ್ಷ ಶ್ರೀಶೈಲ್ ಕವಲಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯೋಜನೆಯ ಸದಸ್ಯರಾದ ಸುನಂದಾ ಯಂಪೂರೆ, ಕೆಡಿಪಿ ಸದಸ್ಯೆ ಮಹಾನಂದಾ ಬಮ್ಮಣ್ಣಿ, ರಜತ ತಾಂಬೆ, ಪುರಸಭೆ ಸದಸ್ಯರಾದ ಹಸೀಮ ಆಳಂದ, ಸಂದೀಪ ಚೌರ ಆಶ್ರಯ ಸಮಿತಿ ನಾಮ ನಿರ್ದೇಶಕ ಸದಸ್ಯರಾದರ ಹೀಮ ದುದನಿ, ಅಮೀನುದ್ದಿನ ವಾಲೀಕಾರ, ಭೀಮು ವಾಲೀಕಾರ, ಇಸ್ಮಾಯಿಲ್ ಆಳಂದ, ಚಾಂದಸಾಬ ಆಲಮೇಲ, ಅಹ್ಮದ್ ಸಿಂಧೆ, ಬಂದೇನವಾಜ್ ಕರ್ಜಗಿ, ಮೈಬುಸಾಬ ಕರ್ಜಗಿ, ಮೈಬೂಬ್ ಮರ್ತುರ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

