ವಿಜಯಪುರ: ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ, ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದ ಭಾರತ ರತ್ನ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ ಅಭಿಪ್ರಾಯ ಪಟ್ಟರು.
ನಗರದ ಬಂಜಾರಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್‌ರವರ ಜಯಂತಿಯ ಅಂಗವಾಗಿ ಮಾತನಾಡಿದ ಅವರು. ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ಮನೋಭಾವನೆಯಿಂದ ನೋಡಿದಾಗ ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶ್ಯತೆ, ಜಾತಿಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಬಹುದು ಇದ್ದಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿಯವರು ಮಾತನಾಡುತ್ತ. ನಮ್ಮ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ರಾಷ್ಟ್ರ ನಾಯಕರುಗಳ ಜೀವನ ಚರಿತ್ರೆಗಳನ್ನು ಓದುವುದನ್ನು ರೂಢಿಸಿಕೊಳ್ಳುವುದರಿಂದ ರಾಷ್ಟ್ರಾಭಿಮಾನ, ರಾಷ್ಟ್ರ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.
ಅಂಬೇಡ್ಕರ್‌ರವರ ಭಾವಚಿತ್ರ ಪೂಜೆಯನ್ನು ಶಿಕ್ಷಕರುಗಳಾದ ಆರ್.ಎನ್.ಬಕಾಟೆ ಹಾಗೂ ಆರ್.ವಿ.ಭುಜಂಗನವರ ರವರುಗಳು ನೆರವೇರಿಸಿದರು. ಈ ವೇಳೆಯಲ್ಲಿ ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

